More

    ಮೈಸೂರಿಗೆ ಚಾರ್ಯ 108 ಶ್ರೀ ಪ್ರಸನ್ನ ಸಾಗರ್ ಮಹಾರಾಜ್ ಭೇಟಿ

    ಮೈಸೂರು: ಶ್ರವಣಬೆಳಗೊಳದಿಂದ ನಗರಕ್ಕೆ ಧರ್ಮ ಜಾಗೃತಿಗಾಗಿ ಆಗಮಿಸಿದ ಆಚಾರ್ಯ 108 ಶ್ರೀ ಪ್ರಸನ್ನ ಸಾಗರ್ ಮಹಾರಾಜ್ ಹಾಗೂ ಜೈನ ಮುನಿಗಳನ್ನು ನಗರದ ಫೌಂಟನ್ ವೃತ್ತದಲ್ಲಿ ಭಾನುವಾರ ಜೈನ ಸಮುದಾಯದವರು ಪೂರ್ಣಕುಂಭ ಸ್ವಾಗತ ದೊಂದಿಗೆ ಬರ ಮಾಡಿಕೊಂಡರು.

    ಜೈನ ಮುನಿಗಳಾದ ಆಚಾರ್ಯ 108 ಶ್ರೀ ಪ್ರಸನ್ನ ಸಾಗರ್ ಮಹಾರಾಜ್ ಅಥವಾ ಅಂತರ್ಮನ ಆಚಾರ್ಯ ಎಂದೂ ಕರೆಯಲ್ಪಡುವ ಇವರು 18 ಏಪ್ರಿಲ್ 1989 ರಂದು ರಾಜಸ್ತಾನದ ಪರ್ಯಾಪ್ತದಲ್ಲಿ ಆಚಾರ್ಯ ವಿದ್ಯಾಸಾಗರ್ ಜಿ ಅವರಿಂದ ದಿಗಂಬರ ಸನ್ಯಾಸಿಯಾಗಿ ದೀಕ್ಷೆ ಪಡೆದರು.

    ಮುನಿಗಳು ಫೌಂಟನ್ ವೃತ್ತಕ್ಕೆ ಆಗಮಿಸಿದಾಗ ನಂದಿ ಧ್ವಜ, ಡೊಳ್ಳು ಕುಣಿತ ಮತ್ತು ಕಂಸಾಳೆ ಮೂಲಕ ಸ್ವಾಗತ ಕೋರಲಾಯಿತು. ಆ ನಂತರ ಅವರನ್ನು ಅಶೋಕ ರಸ್ತೆ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮೂಲಕ ಚಂದ್ರಗುಪ್ತ ರಸ್ತೆಯಲ್ಲಿರುವ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಮಂದಿರಕ್ಕೆ ಕರೆತರಲಾಯಿತು. ಮಂದಿರಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಪುಷ್ಪ ವೃಷ್ಠಿ ಸುರಿಸಿ ಪಾದಪೂಜೆ ಸಲ್ಲಿಸಲಾಯಿತು.

    ನಗರದ ಅಶೋಕ ರಸ್ತೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಟಿ.ಎಸ್. ಶ್ರೀವತ್ಸ ಅವರು ಮುನಿಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭ ಮಾತನಾಡಿದ ಜಿ.ಟಿ. ದೇವೇಗೌಡ, ಶ್ರೀ ಪ್ರಸನ್ನ ಸಾಗರ್ ಮಹಾರಾಜ್ ಅವರು ಮೈಸೂರಿಗ ಆಗಮಿಸಿರುವುದು ನಮ್ಮ ಸೌಭಾಗ್ಯ. ಅವರ ಆಗಮನದಿಂದ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದರು.

    ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಮುನಿಗಳು ಕಠಿಣ ವ್ರತದೊಂದಿಗೆ ನಗರಕ್ಕೆ ಆಗಮಿಸಿದ್ದು ಅವರ ಆಗಮನದಿಂದ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts