More

    KGF​ ಚಿತ್ರಾಭಿಮಾನಿಗಳಿಗೆ ಬೇಸರದ ಸಂಗತಿ: ಬೇಸರದ ನಡುವೆಯೂ ಒಂದು ಸಮಾಧಾನಕರ ಸುದ್ದಿ!

    ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಸಾವಿರ ಕೋಟಿ ರೂಪಾಯಿ ದಾಟಿದ ಕನ್ನಡದ ಮೊದಲ ಹಾಗೂ ಭಾರತದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಬಿಡುಗಡೆಯಾಗಿ 25 ಪೂರೈಸಿದ್ದು, ಇದೀಗ ಅಭಿಮಾನಿಗಳ ಗಮನ ಕೆಜಿಎಫ್​ ಚಾಪ್ಟರ್​ 3 ಕಡೆಗಿದೆ. ಕೆಜಿಎಫ್​-2ನಲ್ಲಿ ಮೂರನೇ ಭಾಗದ ಸುಳಿವು ನೀಡಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಆದರೆ, ಇದರ ನಡುವೆ ಯಶ್​ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿಯೂ ಇದೆ.

    ಬೇಸರದ ವಿಚಾರ ಏನೆಂದರೆ, ಕೆಜಿಎಫ್​ 3 ಸದ್ಯಕ್ಕಂತೂ ಬರುವುದಿಲ್ಲ. ಕೆಜಿಎಫ್​-2ಗೆ ಕಾದಿದ್ದಕ್ಕಿಂತ ಹೆಚ್ಚು ಸಮಯವನ್ನು ಮೂರನೇ ಭಾಗಕ್ಕೆ ಕಾಯಬೇಕಾಗುತ್ತದೆ. ಅಷ್ಟಕ್ಕೂ ಚಿತ್ರತಂಡ ಮೂರನೇ ಭಾಗಕ್ಕೆ ಸುಳಿವು ನೀಡಿದ್ದರೂ ಮೂರನೇ ಭಾಗ ಮಾಡೇ ಮಾಡುತ್ತಾರೆ ಎಂಬುದರ ಬಗ್ಗೆ ಇನ್ನೂ ಖಚಿತವಾಗಿ ಚಿತ್ರತಂಡ ಎಲ್ಲೂ ಹೇಳಿಲ್ಲ. ಆದರೂ, ಕೆಜಿಎಫ್​ 3 ಬರುವುದು ಗ್ಯಾರೆಂಟಿ ಎಂಬುದು ಎಲ್ಲ ಲೆಕ್ಕಾಚಾರ. ಅದಕ್ಕೆ ಪೂರಕವಾದ ಬೆಳವಣಿಗೆಗಳು ಹಾಗೂ ಹೇಳಿಕೆಗಳು ಸಹ ಬರುತ್ತಿರುವುದು ಅಭಿಮಾನಿಗಳ ಆಸೆಯನ್ನು ದುಪ್ಪಟ್ಟಾಗಿಸಿದೆ.

    ಸದ್ಯ ನಿರ್ದೇಶಕ ಪ್ರಶಾಂತ್​ ನೀಲ್​ ಪ್ರಭಾಸ್​ ನಟನೆಯ ಸಲಾರ್​ ಚಿತ್ರದ ಮೇಲೆ ಗಮನ ಹರಿಸಿದ್ದಾರೆ. ಈ ಚಿತ್ರ ಮುಗಿಯಲು ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಳ್ಳಲಿದೆ. ಸಲಾರ್​ ಪೂರ್ಣಗೊಂಡ ಬಳಿಕ ಜೂ.ಎನ್​ಟಿಆರ್​ ಅವರ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆ ಚಿತ್ರ ಮುಗಿಯಲು ಮತ್ತೆ ಒಂದೆರೆಡು ವರ್ಷ ಆಗಬಹುದು. ಇದಾದ ಬಳಿಕ ಕೆಜಿಎಫ್​ 3 ಕೈಗೆತ್ತಿಕೊಂಡರು ಒಂದೆರೆಡು ವರ್ಷ ಶೂಟಿಂಗ್​ ಅಂತಾ ಲೆಕ್ಕ ಹಾಕಿದರೂ ಕನಿಷ್ಟ ಅಂದ್ರು ಇನ್ನು 4 ರಿಂದ 5 ವರ್ಷ ಆಗುತ್ತದೆ.

    ಮತ್ತೊಮ್ಮೆ ಕೆಜಿಎಫ್​ ಚಿತ್ರತಂಡದ ದೃಶ್ಯ ವೈಭವ ಹಾಗೂ ಪವರ್​ಫುಲ್​ ಆ್ಯಕ್ಷನ್​ ಚಿತ್ರವನ್ನು ನೋಡಲು ಇನ್ನು ಸಾಕಷ್ಟು ವರ್ಷಗಳು ಕಾಯಬೇಕಾಗಿರುವುದು ಒಂದು ಮಟ್ಟಿಗೆ ಬೇಸರ ಉಂಟು ಮಾಡಿರುವುದಂತೂ ಸತ್ಯ. ಆದರೂ ಕಾದಷ್ಟು ಮತ್ತೊಂದು ಒಳ್ಳೆಯ ಸಿನಿಮಾ ಸಿಗಲಿದೆ ಎಂಬುದೇ ಸಮಾಧಾನಕರ ಸಂಗತಿಯು ಆಗಿದೆ. ಮುಂದಿನ ದಿನಗಳಲ್ಲಿ ಯಾವ ಅಪ್​ಡೇಟ್​ಗಳು ಈ ಸಿನಿಮಾ ಬಗ್ಗೆ ಬರಲಿವೆ ಎಂದು ಕಾದು ನೋಡಬೇಕಿದೆ.

    ಸಿನಿಮಾ ಕ್ಷೇತ್ರಕ್ಕೆ ಗುಡ್ ​ಬೈ ಹೇಳಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿಕೊಂಡ ಪ್ರಖ್ಯಾತ ಹಾಸ್ಯನಟ!

    ಪತಿಯ ಸ್ನೇಹಿತನ ದುರ್ವತನೆ: ದುಬೈನಲ್ಲಿ ಖ್ಯಾತ ವ್ಲಾಗರ್​ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಲಾಯರ್​ ಹೇಳಿಕೆ

    ಉನ್ನತ ಶಿಕ್ಷಣ ಸಚಿವರ ಕೊಠಡಿ ಮುಂದೆ ಜೆಡಿಎಸ್ ಎಂಎಲ್​ಸಿ ಮರಿತಿಬ್ಬೇಗೌಡ ಧರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts