More

    ಶಿಶು ಸಾಹಿತ್ಯದ ಕಣ್ಮಣಿ ಎಂದೇ ಖ್ಯಾತರಾಗಿದ್ದ ಶರಣಪ್ಪ ಕಂಚ್ಯಾಣಿ ವಿಧಿವಶ

    ವಿಜಯಪುರ: ಶಿಶು ಸಾಹಿತ್ಯದ ಕಣ್ಮಣಿ ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಶರಣಪ್ಪ ಕಂಚ್ಯಾಣಿ (92) ಅವರು ವಯೋ ಸಹಜ ಖಾಯಿಲೆಯಿಂದ ಬುಧವಾರ (ಏ.13) ವಿಧಿವಶರಾಗಿದ್ದಾರೆ.

    ಶರಣಪ್ಪನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ. ತಂದೆ ಶಿವ ಸಂಗಪ್ಪ, ತಾಯಿ ರುದ್ರಮ್ಮ. ನಾಲ್ಕಾರು ಊರು ಸುತ್ತಾಡಿ ಓದಿದ್ದು ಏಳನೇ ತರಗತಿಯವರೆಗೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 39 ವರ್ಷ ದೀರ್ಘ ಕಾಲ ಬೋಧಿಸಿ, 1988ರಲ್ಲಿ ನಿವೃತ್ತರಾದರು.

    ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ರಮ್ಯವಾದ ಪದಗಳನ್ನು ರಚಿಸಿ, ಹಾಡುತ್ತ, ಕುಣಿಯುತ್ತ, ಕಲಿಯುವಂತಾಗುವಂತಹ ಗೀತೆಗಳನ್ನು ರಚಿಸತೊಡಗಿದರು. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನಃ ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬ ಅಂಶವನ್ನು ಮನಗಂಡು ತಾವು ಬರೆದ ಪದ್ಯಗಳನ್ನು ಪ್ರಕಟಿಸಲು ತಮ್ಮದೇ ಆದ ‘ಗ್ರಾಮೀಣ ಪ್ರತಿಭಾ ಪ್ರಕಾಶನ’ ದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು.

    ಶರಣಪ್ಪ‌ ಕಾಂಚ್ಯಾಣಿ ಅವರು ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆ ಮಾಡುತ್ತಿದ್ದರು. ಮಕ್ಕಳ ಸಾಹಿತ್ಯ, ಕವನ, ಮಕ್ಕಳ ಕಥೆ, ಶಿಶು ಪ್ರಾಸ, ಖಂಡ ಕಾವ್ಯ, ಚರಿತ್ರೆ ಸೇರಿದಂತೆ ಇತರೆ ವಿಷಯಗಳ ಸಾಹಿತ್ಯ ಕೃಷಿ ಮಾಡಿದ್ದರು. ಶರಣ್ಣಪ್ಪ ಅವರು ಹಲವಾರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳಿಗೆ ಪಾತ್ರವಾಗಿದ್ದರು. ಕರ್ನಾಟಕ ರಾಜ್ಯೋತ್ಸವ ‌ಪ್ರಶಸ್ತಿಗೆ ಭಾಜನರಾಗಿದ್ದರು.

    ಮೃತ ಶರಣಪ್ಪ‌ ಕಾಂಚ್ಯಾಣಿ ಅವರ ಆಶಯದಂತೆ ಅವರ ದೇಹವನ್ನು ಕುಟುಂಬಸ್ಥರು ದಾನ ಮಾಡಲಿದ್ದಾರೆ. ನಗರದ ಬಿಎಲ್​ಡಿಇ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಇಂದು ಮದ್ಯಾಹ್ನ ಮೂರು ಗಂಟೆಗೆ ದೇಹದಾನ ಮಾಡಲಿದ್ದಾರೆ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕಸಾಗರ ಮಡುಗಟ್ಟಿದೆ.

    ಭಾರತಕ್ಕೆ ಬರಲು ಅನುಮತಿ ಕೊಡಿ: ಪ್ರಧಾನಿ ಮೋದಿಗೆ ಪಿಒಕೆ ಗ್ಯಾಂಗ್​ರೇಪ್​ ಸಂತ್ರಸ್ತೆಯ ಕಣ್ಣೀರಿನ ಮನವಿ

    ನಾನಂದು ಸೈಕಲ್​ ಏರಿ ಬರಲು ಕಾರಣ… 2021ರ ಬಹುಚರ್ಚಿತ ಘಟನೆಯ ಬಗ್ಗೆ ವಿಜಯ್ ಹೇಳಿದ್ದಿಷ್ಟು​

    ಸತ್ತ ನನ್ನ ಗಂಡ ವಾಪಸ್ ಬರಲ್ಲ: ಮಹಿಳೆಯ ಮೊಸಳೆ ಕಣ್ಣೀರಿನ ಹಿಂದಿದ್ದ 19ರ ಯುವಕನ ಕಳ್ಳಾಟ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts