More

    ಇದಪ್ಪಾ ಅದೃಷ್ಟ ಅಂದ್ರೆ! ಸಾಲದ ಸುಳಿಯಲ್ಲಿದ್ದ ಮನೆಗೆ 75 ಲಕ್ಷ ರೂ.ನೊಂದಿಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮಿ

    ಚೆಂಗನ್ನೂರು: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

    ಕೇರಳದ ಕಲ್ಲಿಸ್ಸೆರಿ ಮೂಲದ ಪಿ.ರಾಜೇಶ್​ ಕುಮಾರ್​ ಎಂಬುವರ ಮನೆಗೆ ಬುಧವಾರ ಅದೃಷ್ಟ ಲಕ್ಷ್ಮೀ 75 ಲಕ್ಷ ರೂ. ಹಣದೊಂದಿಗೆ ಎಂಟ್ರಿ ಕೊಟ್ಟಿದ್ದಾಳೆ. ಅಂದರೆ, ರಾಜೇಶ್​ ಅವರಿಗೆ 75 ಲಕ್ಷ ರೂ. ಬಹುಮಾನದ ಬಂಪರ್​ ಲಾಟರಿ ಹೊಡೆದಿದೆ. ಸ್ವಂತ ಮನೆಯಿಲ್ಲದ ಕಾರಣ ಮನೆ ನಿರ್ಮಾಣಕ್ಕಾಗಿ 8.5 ಲಕ್ಷ ರೂಪಾಯಿಯನ್ನು ರಾಜೇಶ್​ ಸಾಲ ಮಾಡಿದ್ದರು. ಇದೀಗ ತಮ್ಮ ಮನೆ ನಿರ್ಮಾಣದ ಕನಸ್ಸನ್ನು ನನಸು ಮಾಡಿಕೊಳ್ಳುವುದರೊಂದಿಗೆ ಸಾಲವನ್ನು ತೀರಿಸಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ.

    ಕಲ್ಲಿಸ್ಸೆರಿ ಜಂಕ್ಸನ್​ನಲ್ಲಿ ಲಾಟರಿ ಟಿಕೆಟ್​ ಮಾರಾಟ ಮಾಡುವ ಥಂಪಿ ಹೆಸರಿನ ಲಾಟರಿ ಏಜೆಂಟ್​ ಬಳಿ ರಾಜೇಶ್​ ಅವರು SK958712 ನಂಬರ್​ನ ಅದೃಷ್ಟದ ಟಿಕೆಟ್​ ಖರೀದಿ ಮಾಡಿದ್ದರು. ಇದರ ಬೆನ್ನಲ್ಲೇ ಕಲ್ಲಿಸ್ಸೆರಿ ಮೂಲದ ವ್ಯಕ್ತಿಯೊಬ್ಬರು ಬಂಪರ್​ ಲಾಟರಿ ಗೆದ್ದಿದ್ದಾರೆ ಎಂಬು ಸುದ್ದಿ ಹರಿದಾಡಲು ಆರಂಭವಾಯಿತು. ಆದರೆ, ಆ ಲಕ್ಕಿ ವಿನ್ನರ್​ ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಬುಧವಾರ ನ್ಯೂಸ್​ಪೇಪರ್​ ನೋಡುವಾಗ ರಾಜೇಶ್​ ತಮ್ಮ ಟಿಕೆಟ್​ ನಂಬರ್​ ನೋಡಿ ಮುಖದಲ್ಲಿ ನಗು ಅರಳಿಸಿದಾಗಲೇ ಆ ಲಕ್ಕಿ ವಿನ್ನರ್​ ಅವರೇ ಎಂಬುದು ಎಲ್ಲರಿಗೂ ತಿಳಿದಿದೆ.

    ರಾಜೇಶ್ ಅವರು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದಾರೆ. ಅದೃಷ್ಟ ಮನೆ ಪ್ರವೇಶಿಸಿದ್ದರೂ ಯಾವುದೇ ಕಾರಣಕ್ಕೂ ಕೆಲಸ ಬಿಡುವುದಿಲ್ಲ ಎಂದು ಹೇಳಿದ್ದಾರೆ. ರಾಜೇಶ್​ ಪತ್ನಿ ಸಿಪಿ ಅನಿತಾ. ದಂಪತಿಗೆ ಶಿವಾನಿ ಮತ್ತು ಶಿವಾನಂದ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕ್ಕಿದ್ದ ಕುಟುಂಬ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದೆ. ಅದೃಷ್ಟ ಅಂದ್ರೆ ಹೀಗಿರಬೇಕು ಎಂದು ಸ್ಥಳೀಯರ ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಪ್ರೀತಿಯ​ ಪುತಿನ್​ ನಾನು ನಿನ್ನ ತಾಯಿಯಾಗಿದ್ದರೆ… ವೈರಲ್​ ಆಯ್ತು ಅಮೆರಿಕ ನಟಿಯ ವಿಡಿಯೋ ಸಂದೇಶ!

    ರೀಲ್ಸ್​ ಮಾಡಿದ ಎಡವಟ್ಟು: ಆಂಧ್ರದಲ್ಲಿ ವಿವಾದದ ಕಿಡಿಹೊತ್ತಿಸಿದ ಯುವತಿಯರಿಬ್ಬರ ಒಂದೇ ಮನೆಯ ವಾಸ!

    ಶಸ್ತ್ರಾಸ್ತ್ರ ಬದಿಗಿಟ್ಟು ಶರಣಾಗಲು ಒಪ್ಪದಿದ್ದಕ್ಕೆ 13 ಯೂಕ್ರೇನ್​ ಯೋಧರನ್ನು ಹತ್ಯೆಗೈದ ರಷ್ಯಾ ಯುದ್ಧನೌಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts