More

    ಬಲಿಷ್ಠ ವಿಂಡೀಸ್​ ತಂಡದ ಎದುರು ಗೆದ್ದು ಬೀಗಿದ್ದ ಸ್ಕಾಟ್ಲೆಂಡ್​ಗೆ ಸೋಲುಣಿಸಿದ ಐರ್ಲೆಂಡ್​​

    ಹೋಬರ್ಟ್ (ಆಸ್ಟ್ರೇಲಿಯಾ)​: ಇಲ್ಲಿನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಬುಧವಾರ (ಅ.19) ನಡೆದ ಟಿ20 ವಿಶ್ವಕಪ್​ ಟೂರ್ನಿಯ ಬಿ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್​ ತಂಡ ಎದುರಾಳಿ ಸ್ಕಾಟ್ಲೆಂಡ್​​ ತಂಡದ ವಿರುದ್ಧ 6 ವಿಕೆಟ್​ಗಳ ಅಮೋಘ ಜಯ ದಾಖಲಿಸುವ ಮೂಲಕ ಸೂಪರ್​ 12 ಹಂತ ಪ್ರವೇಶಿಸುವ ಭರವಸೆಯನ್ನು ಉಳಿಸಿಕೊಂಡಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಸ್ಕಾಟ್ಲೆಂಡ್​​​ ತಂಡ ಮೈಕೆಲ್ ಜೋನ್ಸ್ (86) ಮತ್ತು ನಾಯಕ ಬೆರಿಂಗ್ಟನ್ (37) ಹಾಗೂ ಎಂ. ಕ್ರಾಸ್​ (28) ಅವರ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 176 ರನ್​ ಕಲೆಹಾಕಿತು. ಐರ್ಲೆಂಡ್​ ಪರ ಬೌಲ್​ ಮಾಡಿದ ಕರ್ಟಿಸ್ ಕ್ಯಾಂಫರ್ ಎರಡು ವಿಕೆಟ್​ ಪಡೆದು ಮಿಂಚಿದರೆ, ಜೋಶುವಾ ಲಿಟಲ್ ಮತ್ತು ಮಾರ್ಕ್ ಅಡೇರ್ ತಲಾ ಒಂದೊಂದು ವಿಕೆಟ್​ ಪಡೆದರು.

    ಸ್ಕಾಟ್ಲೆಂಡ್​​​ ನೀಡಿದ 177 ರನ್​ಗಳ ಗುರಿ ಬೆನ್ನತ್ತಿದ ಐರ್ಲೆಂಡ್​ ತಂಡ ಕರ್ಟಿಸ್ ಕ್ಯಾಂಫರ್ (32 ಎಸೆತಗಳಲ್ಲಿ ಅಜೇಯ 72 ರನ್​) ಹಾಗೂ ಜಾರ್ಜ್ ಡಾಕ್ರೆಲ್ (ಅಜೇಯ 39) ಅವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ 19 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 180 ರನ್​ ಕಲೆಹಾಕುವ ಮೂಲಕ ಸ್ಕಾಟ್ಲೆಂಡ್​​​ ಎದುರು 6 ವಿಕೆಟ್​ಗಳ ಜಯ ದಾಖಲಿಸಿತು.

    9.3 ಓವರ್​ಗಳಲ್ಲಿ 61 ರನ್​ಗೆ 4 ವಿಕೆಟ್​ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಐರ್ಲೆಂಡ್​ ತಂಡಕ್ಕೆ ಕರ್ಟಿಸ್ ಕ್ಯಾಂಫರ್ ಮತ್ತು ಜಾರ್ಜ್ ಡಾಕ್ರೆಲ್ ಆಸರೆಯಾದರು. ಅಜೇಯರಾಗಿ ಅಬ್ಬರದ ಆಟವಾಡಿದ ಉಭಯ ಆಟಗಾರರು ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಕಾಟ್ಲೆಂಡ್​​ ಪರ ಬೌಲಿಂಗ್​ ಮಾಡಿದ ಮಾರ್ಕ್​ ವ್ಯಾಟ್​, ಬ್ರಾಡ್​ ವ್ಹೀಲ್​, ಸಫ್ಯಾನ್ ಷರೀಫ್ ಹಾಗೂ ಮೈಕೆಲ್ ಲೀಸ್ಕ್ ತಲಾ ಒಂದೊಂದು ವಿಕೆಟ್​ ಪಡೆದರು.

    ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ವೆಸ್ಟ್​ಇಂಡೀಸ್​ ತಂಡವನ್ನೇ ಮಣಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದ ಸ್ಕಾಟ್ಲೆಂಡ್​​ ತಂಡ ಎರಡನೇ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಸೋಲುಂಡಿದೆ. (ಏಜೆನ್ಸೀಸ್​)

    ಕಾಂಗ್ರೆಸ್​ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

    ಭೂತಕೋಲ ಹಿಂದು ಆಚರಣೆಯಲ್ಲ… ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ನಟ ಚೇತನ್​

    ರಭಸವಾಗಿ ಹರಿಯುವ ನೀರಲ್ಲಿ ಹುಚ್ಚಾಟ ಮೆರೆದ ಬಸ್​ ಚಾಲಕ: ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ರೂ ದೊಡ್ಡ ಅನಾಹುತವೇ ಆಗ್ತಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts