More

    ಐಪಿಎಲ್​ ಮೆಗಾ ಹರಾಜು 2022: ಲಿವಿಂಗ್​​ಸ್ಟೋನ್​ಗೆ ಬಂಪರ್​, ಸೋಲ್ಡ್​ ಆಗದೇ ಉಳಿದ ಘಟಾನುಘಟಿಗಳು

    ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಗಿದ್ದು, ಎರಡನೇ ಹಾಗೂ ಅಂತಿಮ ದಿನವಾದ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

    ಎರಡನೇ ದಿನದ ಹರಾಜಿನಲ್ಲಿ ಇಂಗ್ಲೆಂಡ್​ ಆಟಗಾರ ಲಿಯಾಮ್​ ಲಿವಿಂಗ್​ಸ್ಟೋನ್​ ಅವರು ಬರೋಬ್ಬರಿ 11.50 ಕೋಟಿ ರೂ. ದಾಖಲೆ ಮೊತ್ತಕ್ಕೆ ಪಂಜಾಬ್​ ಕಿಂಗ್ಸ್​ ತಂಡಕ್ಕೆ ಬಿಕರಿಯಾಗಿದ್ದಾರೆ. ವೆಸ್ಟ್​ ಇಂಡೀಸ್​ ತಂಡದ ಆಲ್​​ರೌಂಡರ್​ ಒಡಿಯನ್​ ಸ್ಮಿತ್​ ಕೂಡ 6 ಕೋಟಿ ರೂ.ಗೆ ಪಂಜಾಬ್​ ತಂಡ ಸೇರ್ಪಡೆಯಾಗಿದ್ದಾರೆ. ಶಿವಂ ದುಬೆ 4 ಕೋಟಿಗೆ ಸಿಎಸ್​ಕೆ ಪಾಲಾಗಿದ್ದಾರೆ.

    ಹರಾಜಿನ ಆರಂಭದಲ್ಲೇ ಮೊದಲ ಆಟಗಾರನಾಗಿ ದಕ್ಷಿಣ ಆಫ್ರಿಕಾದ ಐಡೆನ್​ ಮರ್ಕ್ರಮ್ ಅವರನ್ನು​ 2.6 ಕೋಟಿ ರೂ.ಗೆ ಸನ್​ ರೈಸರ್ಸ್​ ಹೈದರಾಬಾದ್​ ತಂಡ ಖರೀದಿಸಿದೆ. ಉಳಿದಂತೆ ಅಂಜಿಕ್ಯ ರಹಾನೆ 1 ಕೋಟಿ ರೂಪಾಯಿಗೆ ಕೆಕೆಆರ್​ ಪಾಲಾದರೆ, ಮಂದೀಪ್​ ಸಿಂಗ್​ 1.10 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್​ಗೆ ಸೇಲಾಗಿದ್ದಾರೆ. ಡಾಮಿನಿಕ್​ ಡ್ರೇಕ್ಸ್ ( 1.10 ಕೋಟಿ), ಜಯಂತ್​ ಯಾದವ್ (1.70) ಮತ್ತು ವಿಜಯ್​ ಶಂಕರ್​ (1.40 ಕೋಟಿ) ಗುಜರಾತ್​ ಟೈಟನ್ಸ್​ ತಂಡ ಖರೀದಿಸಿದೆ. ದಕ್ಷಿಣ ಆಫ್ರಿಕಾದ ಮಾರ್ಕೋ ಜನ್​ಸೇನ್​ರನ್ನು ಎಸ್​ಆರ್​ಎಚ್​ ತಂಡ 4.2 ಕೋಟಿಗೆ ಖರಿದೀಸಿದರೆ, ಕೆ. ಗೌತಮ್​ 90 ಲಕ್ಷಕ್ಕೆ ಲಖನೌ ತಂಡದ ಪಾಲಾಗಿದ್ದಾರೆ. ಖಲೀಲ್​ ಅಹ್ಮದ್​ 5.25 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಸೇರಿದರೆ, ಶ್ರೀಲಂಕಾದ ದುಷ್ಮಂತ ಚಮೀರ 2 ಕೋಟಿ ರೂ.ಗೆ ಲಖನೌ ಪಾಲಾಗಿದ್ದಾರೆ.

    ಮಾರ್ನಸ್ ಲ್ಯಾಬುಶೇನ್​, ಇಯಾನ್ ಮಾರ್ಗನ್, ಡೇವಿಡ್​ ಮಲಾನ್, ಇಶಾಂತ್​ ಶರ್ಮ, ಕ್ರಿಸ್​ ಜೋರ್ಡಾನ್​, ಫಿಂಚ್​ ಮತ್ತು ಚೇತೇಶ್ವರ ಪೂಜಾರ​ ಮಾರಾಟವಾಗದೇ ಉಳಿದಿದ್ದಾರೆ. ಹರಾಜು ಪ್ರಕ್ರಿಯೆ ಮುಂದುವರಿದಿದೆ. (ಏಜೆನ್ಸೀಸ್​)

    ಐಪಿಎಲ್​ ಮೆಗಾ ಹರಾಜು 2022: ಎರಡನೇ ದಿನದ ಹರಾಜಿನಲ್ಲಿ ಸೇಲಾದ ಮೊದಲ ಆಟಗಾರ ಈತ

    ಕೆಲಸ ಸಿಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾವಿನ ಹಾದಿ ಹಿಡಿದ ಚಾಮರಾಜನಗರದ ಯುವಕ

    ಮೈಮಾಟ ಪ್ರದರ್ಶಿಸಿದ ಮಾತ್ರಕ್ಕೆ ಕೆಟ್ಟ ಸಿನಿಮಾ ಉಳಿಯುವುದಿಲ್ಲ: ದೀಪಿಕಾ ಚಿತ್ರದ ವಿರುದ್ಧ ಕಂಗನಾ ಕೆಂಗಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts