More

    ಯುಎಸ್​/ಕೆನಡಾ ಗಡಿಯಲ್ಲಿ ಕೊರೆಯುವ ಚಳಿಗೆ ದುರಂತ ಸಾವಿಗೀಡಾದ ಭಾರತೀಯ ಕುಟುಂಬದ ಗುರುತು ಪತ್ತೆ

    ನ್ಯೂಯಾರ್ಕ್: ಕೆಲ ದಿನಗಳ ಹಿಂದೆ ಕೆನಡಾ/ಅಮೆರಿಕದ ಗಡಿಯ ಸಮೀಪದಲ್ಲಿ ಮೈ ಕೊರೆಯುವ ಚಳಿಗೆ ರಕ್ತ ಹೆಪ್ಪುಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರ ಮೃತದೇಹಗಳ ಗುರುತನ್ನು ಪತ್ತೆಹಚ್ಚಲಾಗಿದೆ. ನಾಲ್ವರು ಸಹ ಒಂದೇ ಕುಟುಂಬದವರಾಗಿದ್ದು, ಗುಜರಾತಿನ ಗಾಂಧಿನಗರ ಜಿಲ್ಲೆಯ ಕಲೋಲ್​ ತಾಲೂಕಿನ ಡಿಂಗುಚ ಗ್ರಾಮದ ನಿವಾಸಿಗಳು.

    ಕೆನಾಡದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವ ಸಂದರ್ಭದಲ್ಲಿ ಹಿಮದ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದು, ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಕೆನಡಾ/ಅಮೆರಿಕ ಗಡಿ ಹತ್ತಿರದ ಕೆನಾಡದ ಮನಿಟೊಬಾ ಪ್ರಾಂತ್ಯದಲ್ಲಿ ಅವರ ಮೃತದೇಹ ಜನವರಿ 19ರಂದು ಪತ್ತೆಯಾಗಿದೆ.

    ಒಟ್ಟಾವದಲ್ಲಿರುವ ಭಾರತದ ಹೈಕಮಿಷನ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದೆ. ಮೃತ ನಾಲ್ವರನ್ನು ಜಗದೀಶ್​ ಪಟೇಲ್​ (39), ಅವರ ಪತ್ನಿ ವೈಶಾಲಿ ಪಟೇಲ್​ (37), ಮಗಳು ವಿಹಾಂಗಿ ಪಟೇಲ್​ (11) ಮತ್ತು ಮಗ ಧರ್ಮಿಕ್​ ಪಟೇಲ್​ (3) ಎಂದು ಗುರುತಿಸಿರುವುದಾಗಿ ತಿಳಿಸಿದೆ.

    ಮೃತ ಜಗದೀಶ್​ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಆ ಕೆಲಸವನ್ನು ಬದಲಾಯಿಸಿ ಕಲೋಲ್​ ನಗರದಲ್ಲಿ ವಿವಿಧ ವ್ಯವಹಾರಗಳನ್ನು ಮಾಡುತ್ತಿದ್ದರು. ಕುಟುಂಬವು ಡಿಂಗುಚ ಗ್ರಾಮದಲ್ಲಿ ಒಂದು ಅಂತಸ್ತಿನ ಮನೆಯನ್ನು ಹೊಂದಿತ್ತು. ಜಗದೀಶ್​ ತಂದೆ ಬಲದೇವ್​ ಪಟೇಲ್​ ಗ್ರಾಮವನ್ನು ತೊರೆದಿರುವುದರಿಂದ ಆ ಮನೆ ಈಗಲೂ ಮುಚ್ಚಿದೆ. ಸಂದರ್ಶಕರ ವೀಸಾದಡಿ ಕುಟುಂಬವು ಹದಿನೈದು ದಿನಗಳ ಹಿಂದೆ ಕೆನಡಾಕ್ಕೆ ಪ್ರಯಾಣಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೆನಾಡಾಗೆ ಪ್ರಯಾಣಿಸಿದ ಒಂದು ವಾರದಲ್ಲೇ ಕುಟುಂಬ ಕಾಣೆಯಾಗಿತ್ತು. ಕೆನಾಡದ ಹೊರಗಿನ ವಾತವಾರಣಕ್ಕೆ ಒಗ್ಗಿಕೊಳ್ಳಲಾಗದೇ ಮೃತಪಟ್ಟಿದ್ದಾರೆಂದು ಸ್ಥಳೀಯ ವೈದ್ಯರು ದೃಢಪಡಿಸಿದ್ದಾರೆ. ಒಟ್ಟಾವಾದಲ್ಲಿರುವ ಭಾರತದ ಹೈ ಕಮಿಷನ್ ಈ ಘಟನೆಯ ಕುರಿತಾದ ತನಿಖೆಯ ಎಲ್ಲಾ ಅಂಶಗಳ ಬಗ್ಗೆ ಕೆನಡಾದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ.

    ಕುಟುಂಬವು ಒಂದು ಅವಧಿಗೆ ಕೆನಾಡ ದೇಶವನ್ನು ಸುತ್ತಾಡಿದ್ದು, ಮಾನವ ಕಳ್ಳಸಾಗಣೆ ಎಂದು ವಿವರಿಸಲಾದ ಪ್ರಕರಣದಲ್ಲಿ ಯಾರೋ ಅವರನ್ನು ಗಡಿಗೆ ಓಡಿಸಿರಬಹುದೆಂಬ ಶಂಕೆಯು ವ್ಯಕ್ತವಾಗಿದೆ. ಏಕೆಂದರೆ, ಕೆನಡಾ ಮತ್ತು ಯುಎಸ್​ ಗಡಿಯಲ್ಲಿ ಮಾನವ ಕಳ್ಳಸಾಗಣೆ ಸಾಮಾನ್ಯವಾಗಿ ನಡೆಯುತ್ತದೆ. ಶವಗಳು ಪತ್ತೆಯಾದ ದಿನವೇ ಯುಎಸ್ ಮೂಲದ ವ್ಯಕ್ತಿ ಸ್ಟೀವ್ ಶಾಂಡ್ ಎಂಬಾತನನ್ನು ಬಂಧಿಸಲಾಗಿದೆ. ತನ್ನ ವಾಹನದಲ್ಲಿ ಅಕ್ರಮವಾಗಿ ಇಬ್ಬರು ದಾಖಲೆರಹಿತ ಭಾರತೀಯ ಪ್ರಜೆಗಳನ್ನು ಸಾಗಿಸಲು ಪ್ರಯತ್ನಿಸುತ್ತಿದ್ದ ಎಂಬ ಆರೋಪದ ಮೇಲೆ ಬಂಧನ ಮಾಡಲಾಗಿದೆ. (ಏಜೆನ್ಸೀಸ್​)

    ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಹುಟ್ಟುಹಬ್ಬದಂದು ಸಿಎಂ ಬಸವರಾಜ ಬೊಮ್ಮಾಯಿ ಸಂಕಲ್ಪ

    ಅಬ್ಬಬ್ಬಾ! ಬರೋಬ್ಬರಿ 61 ಗಂಟೆ ನಿರಂತರವಾಗಿ ಟ್ರ್ಯಾಕ್ಟರ್​ ಮೂಲಕ ನೇಗಿಲು ಹೊಡೆದ ಚಾಲಕ

    FM Rainbow ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸ ಮಾಡ್ತಿದೆ ಕೇಂದ್ರ ಸರ್ಕಾರ: ಎಚ್​ಡಿಕೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts