More

    ಪ್ರತಿ ಬಾರಿ ಕೆನ್ನೆಗೆ ಬಾರಿಸಲು ಮಹಿಳೆಯ ನೇಮಕ: ಎನ್​ಆರ್​ಐ ಉದ್ಯಮಿ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಭುವನೇಶ್ವರ್​: ಪವ್ಲಾಕ್​ ಕಂಪನಿಯ ಸಂಸ್ಥಾಪಕ ಭಾರತೀಯ ಮೂಲದ ಅಮೆರಿಕ ಉದ್ಯಮಿ ಮನೀಶ್​ ಸೇಥಿ ಅವರು ತಮ್ಮ ಕುರಿತಾದ ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಪ್ರತಿ ಬಾರಿ ಫೇಸ್​ಬುಕ್​ ನೋಡಿದಾಗ ತಮ್ಮ ಕೆನ್ನೆಗೆ ಬಾರಿಸಲು ಮಹಿಳೆಯೊಬ್ಬರನ್ನು ಸೇಥಿ ಅವರು ನೇಮಕ ಮಾಡಿಕೊಂಡಿದ್ದರಂತೆ.

    ಸೇಥಿ ಅವರ ಪವ್ಲಾಕ್​ ಕಂಪನಿಯು ಸುಲಭವಾಗಿ ಧರಿಸಬಹುದಾದಂತಹ ಸಾಧನಗಳನ್ನು ತಯಾರಿಸುತ್ತದೆ. ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಯೋಗ​ ಒಂದನ್ನು ಮಾಡಿದ ಸೇಥಿ, 2012ರಲ್ಲಿ ಕ್ರೈಗ್ಸ್​ಲೀಸ್ಟ್​ ಕಂಪನಿಗೆ ತೆರಳಿದ್ದರು. ಕೆಲಸ ಸಮಯದಲ್ಲಿ ಫೇಸ್​ಬುಕ್​ಗೆ ಲಾಗಿನ್​ ಆದರೆ ಕಪಾಳಕ್ಕೆ ಬಾರಿಸಿ, ಎಚ್ಚರಿಸುವಂತಹ ವ್ಯಕ್ತಿಯ ಹುಡುಕಾಟಕ್ಕಾಗಿ ಭೇಟಿ ನೀಡಿದ್ದರು.

    ಭೇಟಿಯ ಬಳಿಕ ಯುವತಿಯೊಬ್ಬರನ್ನು ಆಯ್ಕೆ ಮಾಡಿದರು. ಕೆಲಸದ ಸಮಯದಲ್ಲಿ ಪ್ರತಿ ಬಾರಿ ಫೇಸ್​ಬುಕ್​ ಬಳಸಿದಾಗ ಕೆನ್ನೆಗೆ ಬಾರಿಸುವುದು ಆಕೆಯ ಕೆಲಸವಾಗಿತ್ತು. ಈ ವಿಚಾರವನ್ನು ತಮ್ಮ ಬ್ಲಾಗ್​ ಮೂಲಕ ಸೇಥಿ ಅವರು ವಿವರಿಸಿದ್ದು, ಈ ಪ್ರಯೋಗದ ಫಲಿತಾಂಶ ನಿಜಕ್ಕೂ ಬೆರಗು ಮೂಡಿಸಿತು ಎಂದಿದ್ದಾರೆ.

    ಗಂಟೆಗೆ 8 ಡಾಲರ್​ (594 ರೂಪಾಯಿ)ನಂತೆ ಕಾರಾ ಎಂಬ ಮಹಿಳೆಯನ್ನು ನೇಮಕ ಮಾಡಿದೆ. ಕೆಲಸವನ್ನು ಮೈಮರೆತಾಗಲೆಲ್ಲ ಕೆನ್ನೆಗೆ ಬಾರಿಸಿ ಎಚ್ಚರಿಸುವುದು ಆಕೆಯ ಕೆಲಸವಾಗಿತ್ತು. ಇದರಿಂದ ನನ್ನ ಉತ್ಪಾದಕತೆ ರಾಕೇಟ್​ ವೇಗದಲ್ಲಿ ಶೇ.98 ರಷ್ಟು ಬೆಳೆಯಿತು ಎಂದಿದ್ದಾರೆ.

    ಸೇಥಿ ಅವರ ಕೆನ್ನೆಗೆ ಕಾರಾ ಬಾರಿಸುತ್ತಿರುವ ಫೋಟೋ ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಆಗಿದ್ದು, ಭಾರೀ ವೈರಲ್​ ಆಗಿದೆ. ಟೆಸ್ಲಾ ಮತ್ತು ಸ್ಪೇಸ್​ ಎಕ್ಷ್​ ಕಂಪನಿಯ ಸಿಇಒ ಎಲನ್​ ಮಸ್ಕ್​ ವೈರಲ್​ ಫೋಟೋಗೆ ಎಡರು ಫೈಯರ್​ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

    ಮಾಡೆಲ್​ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್​ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು

    ದುಡ್ಡು ಕೊಟ್ರೆ ಸ್ಪಾಟಲ್ಲೇ ಕೆಲ್ಸ… ಗಂಡನ ಲ್ಯಾಪ್​ಟಾಪ್​ ಬಳಸಿ ಮಾಡಬಾರದ್ದನ್ನು ಮಾಡ್ತಿದ್ದ ಮಹಿಳೆಯ ಬಂಧನ!

    ಕಾಂಡೋಮ್​ ಪರೀಕ್ಷಿಸಲು ಉತ್ಸುಕರಾದ ರಾಕುಲ್​: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಫಸ್ಟ್​ಲುಕ್​ ಪೋಸ್ಟರ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts