More

    ಕಾಶಿ ವಿಶ್ವನಾಥ ದೇವಸ್ಥಾನದ ಫೇಸ್ ಬುಕ್ ಪೇಜ್  ಹ್ಯಾಕ್ ಮಾಡಿ ಅಶ್ಲೀಲ ಫೋಟೋಗಳನ್ನು ಪೋಸ್ಟ್  ಮಾಡಿದ ಕಿಡಿಗೇಡಿಗಳು

    ಉತ್ತರ ಪ್ರದೇಶ: ಇಂದು ಶನಿವಾರ ಬೆಳಗ್ಗೆ ಕಾಶಿ ವಿಶ್ವನಾಥ ದೇವಸ್ಥಾನದ ಫೇಸ್ ಬುಕ್ ಖಾತೆಯನ್ನು ಸೈಬರ್ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದಾರೆ. ನಂತರ ಅನೇಕ ಅಶ್ಲೀಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕೊನೆಗೆ ವಿಶ್ವನಾಥ ಟೆಂಪಲ್ ಟ್ರಸ್ಟ್‌ನಿಂದ ತಕ್ಷಣವೇ ದೂರನ್ನು ಸ್ವೀಕರಿಸಿದ ನಂತರ, ಸೈಬರ್ ಸೆಲ್ ಟೀಂ ಸ್ವಲ್ಪ ಸಮಯದೊಳಗೆ ಸಕ್ರಿಯವಾಗಿ  ತಕ್ಷಣ ಪೇಜ್ ಅನ್ನು ಮರುಪಡೆಯಲಾಯಿತು.  ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಚೌಕ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದೆ. ನಂತರ ಪೊಲೀಸರು ಕೂಡ ಕಾರ್ಯಾಚರಣೆಗೆ ಇಳಿದು ತನಿಖೆ ಆರಂಭಿಸಿದರು.  

    ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ

    ಈ ಕುರಿತು ಕಾಶಿ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಫೇಸ್‌ಬುಕ್ ಖಾತೆಯನ್ನು ಕೆಲವು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಈ ಸಮಯದಲ್ಲಿ, ಈ ಸೈಬರ್ ಹ್ಯಾಕರ್ಸ್ ಅನ್ನು ಗುರುತಿಸಲು ನಿರಂತರವಾಗಿ ಟ್ರ್ಯಾಕ್ ಮಾಡಲಾಗುತ್ತಿದೆ. ಈ ಅನಾನುಕೂಲತೆಗಾಗಿ ದೇವಸ್ಥಾನದ ಟ್ರಸ್ಟ್ ವಿಷಾದ ವ್ಯಕ್ತಪಡಿಸಿದೆ ಎಂದು ತಿಳಿಸಿದೆ.

    ಯಾವಾಗ ಹ್ಯಾಕ್ ಮಾಡಲಾಯಿತು?

    ಫೇಸ್‌ಬುಕ್‌ನಲ್ಲಿ ದೇವಾಲಯದ ಅಧಿಕೃತ ಪೇಜ್ ಅನ್ನು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಹೆಸರಿನಲ್ಲಿ ಮಾಡಲಾಗಿದೆ. ಪ್ರತಿದಿನದಂತೆ ದೇವಸ್ಥಾನದ ಮಾಧ್ಯಮ ತಂಡ ಮಂಗಳಾರತಿಯ ಫೋಟೋಗಳನ್ನು ಫೇಸ್ ಬುಕ್ ಪೇಜ್ ನಲ್ಲಿ ಬೆಳಗ್ಗೆ 10 ಗಂಟೆಗೆ ಅಪ್ ಲೋಡ್ ಮಾಡಿತ್ತು. ಪೋಸ್ಟ್ ಮಾಡಿ ಕೆಲವೇ ಸಮಯಕ್ಕೆ ಸೈಬರ್ ಹ್ಯಾಕರ್ಸ್ ಪೇಜ್ ಹ್ಯಾಕ್ ಮಾಡಿದ್ದಾರೆ. ಇದಾದ ನಂತರ ಹಲವು ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    ಒಂದರ ಹಿಂದೆ ಒಂದರಂತೆ ಫೋಟೋಗಳನ್ನು ಪೇಜ್‌ನಲ್ಲಿ ಪೋಸ್ಟ್ ಮಾಡಿದ ನಂತರ ಸಂಚಲನ ಉಂಟಾಯಿತು. ಇದನ್ನು ಕಂಡ ದೇವಸ್ಥಾನದ ಮಾಧ್ಯಮ ತಂಡ ಮೊದಲು ಅದನ್ನು ಹಿಂಪಡೆಯಲು ಶತಪ್ರಯತ್ನ ಮಾಡಿದರೂ ಸಫಲವಾಗಲಿಲ್ಲ. ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ನಂತರ ಸೈಬರ್ ಸೆಲ್ ಟೀಂ ಒಟ್ಟಾಗಿ ಅದನ್ನು ವಶಪಡಿಸಿಕೊಂಡಿತು.   

    ಹೆಚ್ಚಾಗುತ್ತಿದೆ ಇಸ್ರೇಲ್-ಇರಾನ್ ಯುದ್ಧದ ಭಯ; ಅಮೆರಿಕದಲ್ಲಿ ಹೈ ಅಲರ್ಟ್ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts