More

    ತೊಂದರೆ ಕೊಟ್ರೆ ಭಾರತ ಯಾರನ್ನೂ ಬಿಡುವುದಿಲ್ಲ: ಚೀನಾಗೆ ಎಚ್ಚರಿಕೆ ಸಂದೇಶ ರವಾನಿಸಿದ ರಕ್ಷಣಾ ಸಚಿವರು

    ನವದೆಹಲಿ: ಯಾರಾದರೂ ಹಾನಿ ಮಾಡಿದರೆ ಭಾರತ ಯಾರನ್ನೂ ಬಿಡುವುದಿಲ್ಲ ಎಂದು ಹೇಳುವ ಮೂಲಕ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಚೀನಾಗೆ ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

    ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಗೌರವಾರ್ಥವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಮಾತನಾಡಿದರು. ಚೀನಾದ ಗಡಿಯಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯದ ಬಗ್ಗೆ ಉಲ್ಲೇಖಸಿದರು.

    ಭಾರತೀಯ ಸೈನಿಕರು ಏನು ಮಾಡಿದರು ಮತ್ತು ಸರ್ಕಾರ ಯಾವ ನಿರ್ಧಾರಗಳನ್ನು ತೆಗೆದುಕೊಂಡಿತು ಎಂಬುದನ್ನು ನಾನು ಬಹಿರಂಗವಾಗಿ ಹೇಳಲಾರೆ. ಆದರೆ, ಭಾರತಕ್ಕೆ ಹಾನಿಯಾದರೆ ಭಾರತ ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶ ಚೀನಾಗೆ ಹೋಗಿದೆ ಎಂದು ನಾನು ಖಂಡಿತವಾಗಿ ಹೇಳಬಲ್ಲೆ ಎಂದರು.

    ಇದೇ ಸಂದರ್ಭದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ-ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದರು.

    ಭಾರತವು ಒಂದು ದೇಶದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ, ಅದರ ಅರ್ಥ ಬೇರೆ ಯಾವುದೇ ದೇಶದೊಂದಿಗೆ ಅದರ ಸಂಬಂಧವು ಹದಗೆಡುತ್ತದೆ ಎಂದಲ್ಲ. ಭಾರತ ಈ ರೀತಿಯ ರಾಜತಾಂತ್ರಿಕತೆಯನ್ನು ಎಂದಿಗೂ ಅಳವಡಿಸಿಕೊಂಡಿಲ್ಲ. ಭಾರತ ಎಂದಿಗೂ ಇದನ್ನು ಆರಿಸಿಕೊಳ್ಳುವುದಿಲ್ಲ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಶೂನ್ಯ ಮೊತ್ತದ ಆಟವನ್ನು ನಾವು ನಂಬುವುದಿಲ್ಲ. ನಾವು ಎಲ್ಲರೊಡನೆ ಉತ್ತಮ ಸಂಬಂಧವನ್ನು ಬಯಸುತ್ತೇವೆ ಎಂದರು.

    ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ 2020ರ ಮೇ ತಿಂಗಳಿಂದ ಭಾರತ ಮತ್ತು ಚೀನಾ ನಡುವಿನ ಲಡಾಖ್ ಗಡಿ ಬಿಕ್ಕಟ್ಟು ಪ್ರಾರಂಭವಾಗಿದೆ. ಪೂರ್ವ ಲಡಾಖ್ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ಇದುವರೆಗೆ 15 ಸುತ್ತಿನ ಮಿಲಿಟರಿ ಮಾತುಕತೆಗಳನ್ನು ನಡೆಸಿವೆ, ಆದರೆ, ಯಾವುದೂ ಪರಿಣಾಮಕಾರಿಯಾಗಿಲ್ಲ. (ಏಜೆನ್ಸೀಸ್​)

    ಗುಪ್ತಾಂಗದಲ್ಲಿ ಮದ್ಯದ ಬಾಟಲ್​ ತೂರಿಸಿ ಚಿತ್ರಹಿಂಸೆ: ಸ್ಟಾರ್​ ನಟನ ವಿರುದ್ಧ ನಟಿಯಿಂದ ಗಂಭೀರ ಆರೋಪ

    ಒಂದು ಹಾಡಿಗೆ 1.25 ಕೋಟಿ ರೂ.; ಎಫ್ 2 ಚಿತ್ರತಂಡದಿಂದ ಪೂಜಾಗೆ ಭರ್ಜರಿ ಆಫರ್

    ಇಂದಿನಿಂದ ಜೀನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6; ಮಹಾಗುರುವಾಗಿ ಶಿವರಾಜಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts