ಇಂದಿನಿಂದ ಜೀನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6; ಮಹಾಗುರುವಾಗಿ ಶಿವರಾಜಕುಮಾರ್

ಬೆಂಗಳೂರು: ಜೀ ಕನ್ನಡದ ಅತ್ಯಂತ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬರುವುದಕ್ಕೆ ಸಜ್ಜಾಗಿದೆ. ಕಾರ್ಯಕ್ರಮದ ಆರನೇ ಸೀಜನ್ ಇಂದು ಪ್ರಾರಂಭವಾಗಲಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.00ಕ್ಕೆ ಪ್ರಸಾರವಾಗಲಿದೆ. ಈ ಮೂಲಕ ವಾರಾಂತ್ಯವನ್ನು ಇನ್ನಷ್ಟು ವರ್ಣಮಯವನ್ನಾಗಿಸಲಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ, ಇದುವರೆಗೂ ಬೆಳಕಿಗೆ ಬಾರದ ಅತ್ಯುತ್ತಮ ಡ್ಯಾನ್ಸಿಂಗ್ ಪ್ರತಿಭೆಗಳನ್ನು ಹೆಕ್ಕಿ ತರಲಾಗಿದ್ದು, ಅವರನ್ನು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಮೂಲಕ ಪರಿಚಯಿಸಲಾಗುತ್ತಿದೆ. ಹಿರಿಯ ನೃತ್ಯ … Continue reading ಇಂದಿನಿಂದ ಜೀನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6; ಮಹಾಗುರುವಾಗಿ ಶಿವರಾಜಕುಮಾರ್