More

    ಇಂದಿನಿಂದ ಜೀನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6; ಮಹಾಗುರುವಾಗಿ ಶಿವರಾಜಕುಮಾರ್

    ಬೆಂಗಳೂರು: ಜೀ ಕನ್ನಡದ ಅತ್ಯಂತ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬರುವುದಕ್ಕೆ ಸಜ್ಜಾಗಿದೆ. ಕಾರ್ಯಕ್ರಮದ ಆರನೇ ಸೀಜನ್ ಇಂದು ಪ್ರಾರಂಭವಾಗಲಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.00ಕ್ಕೆ ಪ್ರಸಾರವಾಗಲಿದೆ. ಈ ಮೂಲಕ ವಾರಾಂತ್ಯವನ್ನು ಇನ್ನಷ್ಟು ವರ್ಣಮಯವನ್ನಾಗಿಸಲಿದೆ.

    ರಾಜ್ಯದ 31 ಜಿಲ್ಲೆಗಳಲ್ಲಿ ಆಡಿಷನ್ ನಡೆಸಿ, ಇದುವರೆಗೂ ಬೆಳಕಿಗೆ ಬಾರದ ಅತ್ಯುತ್ತಮ ಡ್ಯಾನ್ಸಿಂಗ್ ಪ್ರತಿಭೆಗಳನ್ನು ಹೆಕ್ಕಿ ತರಲಾಗಿದ್ದು, ಅವರನ್ನು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಮೂಲಕ ಪರಿಚಯಿಸಲಾಗುತ್ತಿದೆ. ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್, ನಟಿ ರಕ್ಷಿತಾ ಪ್ರೇಮ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದ್ದರೆ, ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಲಿದ್ದಾರೆ.

    ‘ಡಿಕೆಡಿ 6’ರ ವಿಶೇಷತೆ ಎಂದರೆ ಈ ಕಾರ್ಯಕ್ರಮದಲ್ಲಿ ಶಿವರಾಜಕುಮಾರ್ ಮಹಾಗುರುವಾಗಿ ಕಾಣಿಸಿಕೊಳ್ಳುತ್ತಿರುವುದು. 2010ರಲ್ಲಿ ಜೀನಲ್ಲಿ ನಡೆದ ‘ನಾನಿರುವುದೆ ನಿಮಗಾಗಿ’ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಾಲಿಟ್ಟ ಶಿವರಾಜಕುಮಾರ್, ಆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಈಗ ಬಹಳ ವರ್ಷಗಳ ನಂತರ ಅವರು ಜೀ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ತಮ್ಮ ನೃತ್ಯದಿಂದ ಶಿವಣ್ಣ ಸಾಕಷ್ಟು ಜನಪ್ರಿಯರಾಗಿದ್ದರೂ, ಇದುವರೆಗೂ ಯಾವುದೇ ನೃತ್ಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಹಾಗುರುವಾಗಿ ‘ಡಿಕೆಡಿ’ಯ ಪ್ರತಿಭೆಗಳಿಗೆ ಅವರು ಮಾರ್ಗದರ್ಶನ ಮಾಡಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಜೀ ಕನ್ನಡದಲ್ಲಿ ಕೆಲವು ದಿನಗಳಿಂದ ಪ್ರಸಾರವಾಗುತ್ತಿದ್ದು, ಎಲ್ಲರಿಂದ ಮೆಚ್ಚುಗೆ ಪಡೆದಿದೆ.

    ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts