More

    ಪ್ರಿಯಾ ಆನಂದ್​ಗೆ ನಿತ್ಯಾನಂದರನ್ನು ಮದ್ವೆಯಾಗೋ ಆಸೆಯಂತೆ! ಕಾಲಿವುಡ್​ ಬ್ಯೂಟಿ ಕೊಟ್ಟ ಕಾರಣ ಹೀಗಿದೆ…

    ಚೆನ್ನೈ: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ‘ರಾಜಕುಮಾರ’ ಹಾಗೂ ಅವರ ಕೊನೆಯ ‘ಜೇಮ್ಸ್’​ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡಿಗರಿಗೂ ಚಿರಿಪರಿಚಿತರಾಗಿರುವ ಪ್ರಿಯಾ ಆನಂದ್​, ತಮ್ಮ ವಿಚಿತ್ರ ಹೇಳಿಕೆಯಿಂದ ಇದೀಗ ಭಾರೀ ಸುದ್ದಿಯಾಗಿದ್ದಾರೆ.

    ಪ್ರಿಯಾ ಆನಂದ್​ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರೀಯರಾಗಿರುತ್ತಾರೆ. ಆಗಾಗ ತಮ್ಮ ಫೋಟೋಗಳನ್ನು ಮತ್ತು ಸಿನಿಮಾಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುವ ಪ್ರಿಯಾ, ಕೆಲವು ಬಾರಿ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದರ ಕೋಟ್ಸ್​ಗಳನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ. ಇದನ್ನು ಪ್ರಿಯಾ ಫ್ಯಾನ್ಸ್​ ಸಹ ಗಮನಿಸಿದ್ದಾರೆ.

    ನಿತ್ಯಾನಂದನ ಬಗ್ಗೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ಪ್ರಿಯಾ ಬಳಿ ಕೇಳಲಾಯಿತು. ಈ ವೇಳೆ ಮಾತನಾಡಿದ ಪ್ರಿಯಾ, ನಾನು ನಿತ್ಯಾನಂದರನ್ನು ತುಂಬಾ ಇಷ್ಟಪಡುತ್ತೇನೆ. ನನ್ನ ಹೆಸರು ಪ್ರಿಯಾ ಆನಂದ. ಒಂದು ವೇಳೆ ನಾನು ನಿತ್ಯಾನಂದರನ್ನು ಮದುವೆಯಾದರೆ, ನನ್ನ ಹೆಸರನ್ನು ಬದಲಾಯಿಸಲೇಬೇಕಿಲ್ಲ. ನಿತ್ಯಾನಂದರಿಗೆ ಜನರನ್ನು ಹೇಗೆ ಆಕರ್ಷಿಸಬೇಕೆಂದು ತಿಳಿದಿದೆ. ಇಷ್ಟು ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ಇದೆ ಎಂದರ್ಥ ಎಂದು ಪ್ರಿಯಾ ಹೇಳಿದ್ದಾರೆ.

    ಪ್ರಿಯಾ ಅವರ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟ್ರೋಲ್​ ಸಹ ಆಗುತ್ತಿದೆ. ಪ್ರಿಯಾ ಅವರು ಶೂಟಿಂಗ್​ ಸೆಟ್‌ಗಳಲ್ಲಿ ಮಾಡುವ ತಮಾಷೆಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿವಾದಿತ ದೇವಮಾನವ ನಿತ್ಯಾನಂದರ ಬಗ್ಗೆ ಅವರು ಮಾತನಾಡಿರುವ ಮಾತು ಕೆಲವರಲ್ಲಿ ನಗು ತರಿಸಿದೆ.

    ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹಲವಾರು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದಾನೆ ಮತ್ತು ತನ್ನ ಸ್ವಂತ ದೇಶ ಕೈಲಾಸವನ್ನು ರಚಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾನೆ. ಲೈಂಗಿಕ ಅಪರಾಧಗಳು ಸೇರಿದಂತೆ ಹಲವು ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಪೊಲೀಸರು ನಿತ್ಯಾನಂದರಿಗಾಗಿ ಹುಡುಕುತ್ತಿರುವಾಗ ನಿತ್ಯಾನಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತಿವೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪ್ರಿಯಾ ಆನಂದ್ ಅವರು ‘ಸುಮೋ’ ಮತ್ತು ‘ಕಸೆತನ್ ಕಡವುಲಾದ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವೆರಡೂ ಸಿನಿಮಾಗಳಲ್ಲಿ ಮಿರ್ಚಿ ಶಿವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ‘ಅಂಧಗನ್’ ಸಿನಿಮಾದಲ್ಲಿ ಹಿರಿಯ ನಟ ಪ್ರಶಾಂತ್ ಜತೆ ಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

    ಇಂಡೋನೇಷ್ಯಾದ ಕುವರಿಯನ್ನು ವರಿಸಿದ ಕೇರಳದ ಕುಬ್ಜ: ಇವರಿಬ್ಬರ ಲವ್​ ಸ್ಟೋರಿಯೇ ರೋಚಕ!

    ಟ್ವಿಟರ್​ ಖರೀದಿ ಒಪ್ಪಂದ ಮುರಿದುಕೊಂಡ ಎಲಾನ್​ ಮಸ್ಕ್! ಕಾರಣ ಹೀಗಿದೆ….

    ಇಂಜಿನಿಯರ್​ ತಯಾರಿಸ್ತಿರೋ ಸಕತ್​ ಟೇಸ್ಟಿ ಚಾಕೊಲೇಟ್​ ಇವಂತೆ: ನೀವೂ ತಿಂದಿರಬಹುದು…ಹಾಗಿದ್ದರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts