More

    ಭಯದಿಂದಾಗಿ ಏನನ್ನು ಹೇಳಲಾಗದು… ಮಲಯಾಳಂ ಸಿನಿ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟ ನಟಿ ಪಾರ್ವತಿ

    ತಿರುವನಂತಪುರಂ: ಮಲಯಾಳಂ ಸಿನಿಮಾ ರಂಗದ ಕುರಿತು ನಟಿ ಪಾರ್ವತಿ ಥಿರುವೊತ್​ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ವೇಶ್ಯಾವಾಟಿಕೆ ದಂಧೆಯಲ್ಲಿ ಸಿನಿಮಾ ಇಂಡಸ್ಟ್ರಿಯ ಕೆಲವು ಮಂದಿ ಸಂಬಂಧವನ್ನು ಹೊಂದಿದ್ದಾರೆ ಎಂದು ಪಾರ್ವತಿ ತಿಳಿಸಿದ್ದಾರೆ.

    ಈ ಸಂಬಂಧ ಹಲವು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ ಪಾರ್ವತಿ. ಸಿನಿಮಾ ರಂಗದ ಕರಾಳ ಮುಖ ಹೇಮಾ ಆಯೋಗದ ವರದಿಯಲ್ಲಿದೆ. ಆದರೆ, ಆ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ. ಏಕೆಂದರೆ, ಹಲವಾರು ಉದ್ಯಮದ ಗಣ್ಯರ ಹೆಸರುಗಳು ಅದರಲ್ಲಿವೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಪಾರ್ವತಿ ಹೇಳಿದ್ದಾರೆ.

    ಮಲಯಾಳಂ ಚಿತ್ರರಂಗದಲ್ಲಿನ ಸೆಕ್ಸ್ ರಾಕೆಟ್​ಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಹೇಮಾ ಆಯೋಗಕ್ಕೆ ನಾನು ಹೇಳಿಕೆ ನೀಡಿದ್ದೇನೆ. ಈ ಹೇಳಿಕೆಗಳು ಉದ್ಯಮದಲ್ಲಿನ ಅನೇಕ ಪ್ರಮುಖ ವ್ಯಕ್ತಿಗಳನ್ನು ಸಹ ಉಲ್ಲೇಖಿಸುತ್ತವೆ. ಇದನ್ನೆಲ್ಲಾ ಏಕೆ ಬಹಿರಂಗಪಡಿಸಬಾರದು ಎಂದು ಕೇಳುವವರಿಗೆ ಒಂದೇ ಒಂದು ಉತ್ತರವಿದೆ. ಏಕೆಂದರೆ, ಜೀವದ ಮೇಲಿನ ಭಯದಿಂದಾ ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ. ದೂರವಾಣಿ ಕರೆಗಳ ಮೂಲಕ ಬೆದರಿಕೆ ಕರೆಗಳು ಬರುತ್ತಿವೆ. ಇಲ್ಲಿ ಸಂಪಾದಿಸಲು ಮತ್ತು ಇರಲು ಬಿಡುವುದಿಲ್ಲ ಎಂದು ಹೆದರಿಸುತ್ತಾರೆ. ಸೆಕ್ಸ್ ರಾಕೆಟ್​ಗಳು ಸೇರಿದಂತೆ ಇನ್ನು ಅನೇಕ ಕೃತ್ಯಗಳನ್ನು ಉದ್ಯಮದಲ್ಲಿ ಎಲ್ಲೆಡೆ ಸುಗಮವಾಗಿ ನಡೆಸುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನು ಹೇಮಾ ಆಯೋಗಕ್ಕೆ ವಿವರವಾಗಿ ವಿವರಿಸಲಾಗಿದೆ’ ಎಂದು ಪಾರ್ವತಿ ಸ್ಪಷ್ಟಪಡಿಸಿದ್ದಾರೆ

    ಹೇಮಾ ಆಯೋಗದ ವರದಿ ಬಹಿರಂಗವಾಗದೇ ಇರುವುದಕ್ಕೆ ಕೋಪ ಮತ್ತು ನಿರಾಶೆ ಎರಡು ಇದೆ. ಹೇಮಾ ಆಯೋಗದ ವರದಿಯೊಳಗೆ ಹೇಳಿಕೆ ನೀಡಿದವರ ಹೆಸರು ಇದ್ದ ಕಾರಣ ಅದನ್ನು ಬಿಡುಗಡೆ ಮಾಡಿಲ್ಲ, ಆದರೆ ಯಾರ ವಿರುದ್ಧ ಹೇಳಿಕೆ ನೀಡಲಾಗಿದೆಯೋ ಅವರ ಹೆಸರನ್ನು ಬಿಡುಗಡೆ ಮಾಡಬೇಕು ಎಂದು ಪಾರ್ವತಿ ಒತ್ತಾಯಿಸಿದ್ದಾರೆ.

    ವರದಿಯಲ್ಲಿ ಸಾಕ್ಷ್ಯ ನೀಡಿರುವವರ ಹೆಸರನ್ನು ಮರೆಮಾಚಲು ವರದಿಯನ್ನು ಬಿಡುಗಡೆ ಮಾಡದಿರುವುದು ಕ್ಷುಲ್ಲಕ ಕಾರಣ ಎಂದು ನಾನು ಭಾವಿಸುತ್ತೇನೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಷಿಯೊ ಅಧ್ಯಯನ ನಡೆಸಿದೆ. ವರದಿ ಸಿದ್ಧಪಡಿಸಲು ನಾಲ್ಕು ವರ್ಷಗಳ ಹಿಂದೆಯೇ ಸಮಿತಿ ರಚಿಸಿದ್ದು, ಕೊನೆಗೂ ವರದಿ ಬಿಡುಗಡೆಯಾಗುವುದಿಲ್ಲ ಎಂದು ಹೇಳುತ್ತಿರುವುದು ಬೇಸರ ಸಂಗತಿಯಾಗಿದೆ. ವಿಷಯಗಳು ಹೀಗಿರುವಾಗ, ಮಹಿಳೆಯರಿಗೆ ನ್ಯಾಯವು ಸಿಗುವುದಿಲ್ಲ ಎಂದು ತೋರುತ್ತದೆ ಎಂದು ಪಾರ್ವತಿ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

    ಅನುಪಮಾ ಇದೆಲ್ಲ ಏನಮ್ಮಾ… ಮಲಯಾಳಿ ಬೆಡಗಿ ಮೇಲೆ ಅಭಿಮಾನಿಗಳ ಮುನಿಸು!

    ಲಿಂಗ ಸಾಬೀತುಪಡಿಸಿ ಎಂದು ಬಟ್ಟೆಬಿಚ್ಚಿಸಿ, ಒಳ ಉಡುಪು ಇಟ್ಟುಕೊಂಡು ವಿಕೃತಿ ಮೆರೆದ ಪೊಲೀಸರು!

    ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್​ಗೆ ಬುದ್ಧಿ ಮಾತು ಹೇಳಿದ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts