More

    ಮದುವೆಯಾದ ಒಂದೇ ತಿಂಗಳಲ್ಲಿ ಸಾಫ್ಟ್​ವೇರ್​ ಗಂಡನ ಕ್ರೂರತ್ವ: ಭರವಸೆಯ ಬದುಕು ದುರಂತದಲ್ಲಿ ಅಂತ್ಯ!

    ಕಾಮರೆಡ್ಡಿ: ಮದುವೆಯಾದ ಒಂದೇ ತಿಂಗಳಲ್ಲಿ ಸೈಕೋ ಪತಿಯೊಬ್ಬ ಪತ್ನಿಯ ಮೇಲೆ ಅನುಮಾನಗೊಂಡು ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಾಜಗಿರಿ ಜಿಲ್ಲೆಯ ಬಚುಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

    ಸುಧಾರಾಣಿ ಕೊಲೆಯಾದ ನವವಿವಾಹಿತೆ. ಮೃತೆ ಕಾಮರೆಡ್ಡಿ ಜಿಲ್ಲೆಯ ತಿಮ್ಮಾಪ್ಪೂರ್​ ಮೂಲದವಳು. ಮದುವೆ ಹೊಸದರಲ್ಲಿ ಅನೇಕ ಭರವಸೆಗಳನ್ನು ಇಟ್ಟುಕೊಂಡು ಅತ್ತೆ ಮನೆಗೆ ಬಂದ ಆಕೆಯ ಬದುಕು ಒಂದೇ ತಿಂಗಳಲ್ಲಿ ದುರಂತ ಅಂತ್ಯ ಕಂಡಿದ್ದು ದುರಾದೃಷ್ಟಕರ. ಅನುಮಾನ ಪಿಶಾಚಿಯಾದ ಗಂಡ ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ.

    ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಪತಿ ಕಿರಣ್​ ಕುಮಾರ್​, ಹೈದರಾಬಾದ್​ನ ಪ್ರಗತಿ ನಗರದ ಶ್ರೀಶೈದ್ವಾರಕ ಅಪಾರ್ಟ್ಮೆಂಟ್​ನಲ್ಲಿ ಫ್ಲ್ಯಾಟ್​ ಒಂದನ್ನು ಖರೀದಿಸಿದ್ದನು. ಮಗಳನ್ನು ನೋಡಲು ಶನಿವಾರ ಹೈದರಾಬಾದ್​ಗೆ ಬರುವುದಾಗಿ ಸುಧಾರಣಿ ಪಾಲಕರು ಕಿರಣ್​ಗೆ ಹೇಳಿದ್ದರು. ಅದರಂತೆ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಪ್ರಗತಿ ನಗರದ ಮನೆಗೆ ಪಾಲಕರು ಬಂದಿದ್ದಾರೆ. ಕಾಲಿಂಗ್ ಬೆಲ್​ ಮಾಡಲು ಯಾರೂ ಮನೆಯ ಬಾಗಿಲು ತೆರೆಯದಿದ್ದಾಗ ಮಗಳ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ದಾರೆ. ಆದರೆ, ಮಗಳ ಕರೆ ಸ್ವೀಕರಿಸದೇ ಇರುವುದನ್ನು ನೋಡಿದ ಪಾಲಕರು ಅನುಮಾನಗೊಂಡು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಸುಧಾರಾಣಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಳು. ಕಿರಣ್​ ಕೂಡ ಉಸಿರಾಟದ ತೊಂದರೆಯಿಂದ ಒದ್ದಾಡುತ್ತಿದ್ದನ್ನು. ಇದನ್ನು ನೋಡಿದ ಪೊಲೀಸರು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಸುಧಾರಾಣಿಯ ಕುತ್ತಿಗೆ, ಕಾಲು ಮತ್ತು ತೋಳುಗಳಲ್ಲಿ ಕಿರಣ್​ ಚಾಕುವಿನಿಂದ ಇರಿದಿದ್ದಾನೆ.

    ಇಬ್ಬರು ಎರಡು ವಾರಗಳ ಹಿಂದಷ್ಟೇ ಅಪಾರ್ಟ್​ಮೆಂಟ್​ಗೆ ಬಂದಿದ್ದರಂತೆ. ಅಂದಿನಿಂದ ಯಾರೊಂದಿಗೂ ಇಬ್ಬರು ಹೆಚ್ಚಿಗೆ ಮಾತನಾಡುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 2 ರಿಂದ 3 ಗಂಟೆಗೆ ಸುಧಾರಾಣಿಯನ್ನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಕಿರಣ್​ ಕೂಡ ತನ್ನ ಕುತ್ತಿಗೆ ಕೂಯ್ದುಕೊಂಡಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿಯು ತುಂಬಾ ಗಂಭೀರವಾಗಿದೆ. ಮತ್ತೆ ಪ್ರಜ್ಞೆ ಬಂದರೆ ಆತನಿಂದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳಲಿದ್ದಾರೆ. (ಏಜೆನ್ಸೀಸ್​)

    ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ

    ನೂರಕ್ಕೂ ಹೆಚ್ಚು ಸುಲಿಗೆ ಪ್ರಕರಣದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!

    ಕೇಶ ವಿನ್ಯಾಸ ಮತ್ತು ಗಡ್ಡ ಶೇವಿಂಗ್​ಗೆ ಬ್ರೇಕ್​ ಹಾಕಿದ ತಾಲಿಬಾನಿಗಳು: ಸಲೂನ್​ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ

    ಕೈಗಾರಿಕಾ ಕ್ರಾಂತಿಗೆ ಕಹಳೆ!; ಹೂಡಿಕೆ ಆಕರ್ಷಿಸಿ ಉದ್ಯೋಗಸೃಷ್ಟಿ ಹೆಚ್ಚಿಸಲು ಸರ್ಕಾರ ಪಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts