More

    ಪ್ರೇಯಸಿಯ ಬೆತ್ತಲೆ ಫೋಟೋವನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಹಾಕಿದ ಪ್ರಿಯಕರ! ಬೆಚ್ಚಿಬೀಳಿಸುತ್ತೆ ಇವನ ಸಂಚು

    ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ವಿಡಿಯೋ ಸೆರೆಹಿಡಿದು, ಫೋಟೋ ಎಡಿಟ್​ ಮಾಡಿ, ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ವಿಕೃತಿ ಮೆರೆದಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಶುಭಂ ಕೌಲೆ ವಿರುದ್ಧ ಮನನೊಂದ ವಿದ್ಯಾರ್ಥಿನಿ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶುಭಂ ಕೌಲೆ ತಮ್ಮದೇ ಕಾಲೇಜಿನ 20 ವರ್ಷದ ಕಿರಿಯ ವಿದ್ಯಾರ್ಥಿನಿಯ ಜತೆ ವಾಟ್ಸ್​ಆ್ಯಪ್​ ಮೂಲಕ ಪರಿಚಯ ಬೆಳೆಸಿದ್ದ. ದಿನ ಕಳೆದಂತೆ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ಆಕೆಯೊಂದಿಗೆ ಸಲುಗೆಯನ್ನು ಬೆಳೆಸಿದ್ದ. ಅದೇ ಸಲುಗೆಯಲ್ಲಿ ವಾಟ್ಸ್​ಆ್ಯಪ್​ನಲ್ಲೇ ಯುವತಿಯ ನಗ್ನ ವಿಡಿಯೋವನ್ನು ಆರೋಪಿ ಸ್ಕ್ರೀನ್ ರೇರ್ಕಾಂಡಿಗ್ ಮಾಡಿದ್ದಾನೆ.

    ಶುಭಂ ಕೌಲೆಯನ್ನು ಸಂಪೂರ್ಣ ನಂಬಿದ್ದ ಯುವತಿ, ಹಿಂದೆ-ಮುಂದೆ ಯೋಚಿಸದೇ ಆತನ ಮುಂದೆ ಮೊಬೈಲ್​ನಲ್ಲಿ ಬೆತ್ತಲಾಗಿದ್ದಳು. ಇದಾದ ಬಳಿಕ ತನ್ನ ವರಸೆ ಬದಲಿಸಿದ ಶುಭಂ ಕೌಲೆ, ಯುವತಿಯ ನಗ್ನ ವಿಡಿಯೋವನ್ನು ಎಡಿಟ್​ ಮಾಡಿ ತನ್ನ ಸ್ಟೇಟಸ್​ಗೆ ಹಾಕಿ ವಿಕೃತಿ ಮೆರೆದಿದ್ದಾನೆ. ಈ ಮೂಲಕ ಯುವತಿಯ ಖಾಸಗಿತನಕ್ಕೆ ಧಕ್ಕೆ ಉಂಟುಮಾಡಿದ್ದಾನೆ.

    ಪ್ರೀತಿಯ ಬಲೆಯಲ್ಲಿ ಬಿದ್ದು ಬಣ್ಣದ ಮಾತುಗಳಿಗೆ ಮರುಳಾಗಿ ಇದೀಗ ಪ್ರಿಯಕರನ ಕರಾಳ ಮುಖ ಅನಾವರಣಗೊಂಡ ಬಳಿಕ ತೀವ್ರ ಮನನೊಂದಿರುವ ಸಂತ್ರಸ್ತ ಯುವತಿ, ಹುಬ್ಬಳ್ಳಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಡಿವೋರ್ಸ್​ ಬಳಿಕ ನಟಿ ಅಮಲಾ ಪೌಲ್​ ಹಾದಿಯನ್ನೇ ಅನುಸರಿಸಿದ ನಟಿ ಸಮಂತಾ..!

    16 ದಿನದ ಹಿಂದಷ್ಟೇ ಮದ್ವೆಯಾಗಿದ್ದ ಯುವತಿ ದುರಂತ ಅಂತ್ಯ: ಬಾತ್​ರೂಮ್​ ಬಾಗಿಲು ತೆಗೆದವರಿಗೆ ಕಾದಿತ್ತು ಶಾಕ್​!

    ಐಸಿಸಿ ಪುರುಷರ ಕ್ರಿಕೆಟ್​ ಸಮಿತಿ ಅಧ್ಯಕ್ಷರಾಗಿ ಸೌರವ್​ ಗಂಗೂಲಿ ನೇಮಕ

    Lakhimpur Kheri Case: ತನಿಖೆಗೆ ಹಿರಿಯ ಐಪಿಎಸ್​ ಅಧಿಕಾರಿಗಳ ಎಸ್​​ಐಟಿ; ನಿವೃತ್ತ ನ್ಯಾಯಮೂರ್ತಿ ಆರ್​.ಕೆ.ಜೈನ್​ ಮೇಲ್ವಿಚಾರಣೆ

    ‘20 ವರ್ಷದಲ್ಲಿ ರಾಜ್‌ ಕುಟುಂಬದಲ್ಲೇ ಪುನೀತ್‌ ಹುಟ್ತಾನೆ… ನಾನು ಇರ್ತೇನೋ ಗೊತ್ತಿಲ್ಲ.. ಆದ್ರೆ ಈ ಮಾತು ಬರೆದಿಟ್ಟುಕೊಳ್ಳಿ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts