More

    ಇರೋದು ನಾಲ್ಕೇ ವಿದ್ಯಾರ್ಥಿನಿಯರು ಆದ್ರೆ ಲೆಕ್ಕದಲ್ಲಿ 35! ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ಗೋಲ್‌ ಮಾಲ್‌

    ದಾವಣಗೆರೆ: ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ನಿಲಯದಲ್ಲಿ ಗೋಲ್‌ ಮಾಲ್‌ ನಡೆದಿರುವುದು ಪ್ರಕರಣ ಬೆಳಕಿಗೆ ಬಂದಿದೆ. ಹಾಸ್ಟೆಲ್​​ನಲ್ಲಿ ಕೇವಲ 4 ವಿದ್ಯಾರ್ಥಿನಿಯರಿದ್ದರೆ, 35 ವಿದ್ಯಾರ್ಥಿನಿಯರು ಇರುವುದಾಗಿ ಸರ್ಕಾರಕ್ಕೆ ಸುಳ್ಳು ಲೆಕ್ಕ ತೋರಿಸಿ, ಉಳಿದ 31 ವಿದ್ಯಾರ್ಥಿಗಳು ಅನುದಾನ ಗುಳುಂ ಮಾಡಿರುವ ಆರೋಪ ಕೇಳಿಬಂದಿದೆ.

    ತಹಸೀಲ್ದಾರ್‌ ನೇತೃತ್ವದ ತಂಡದಿಂದ ದಿಢೀರ್‌ ಭೇಟಿ ಮಾಡಿದ ಸಂದರ್ಭದಲ್ಲಿ ಅಕ್ರಮ ಬಯಲಾಗಿದೆ. ಈ ಘಟನೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದಲ್ಲಿರುವ ಬಾಲಕಿಯರ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಯರ ನಿಲಯದಲ್ಲಿ ನಡೆದಿದೆ. ಚನ್ನಗಿರಿ ತಹಸೀಲ್ದಾರ್‌ ಪಟ್ಟರಾಜ್‌ ಗೌಡ, ಪಿಎಸೈ ಶಿವರುದ್ರಪ್ಪ ಮೇಟಿ ಹಾಗೂ ಪಿಡಿಒ ಚಂದ್ರಪ್ಪ ಅವರು ದಿಢೀರ್​ ಭೇಟಿ ನೀಡಿದ ಸಂದರ್ಭದಲ್ಲಿ ಮಹಾಮೋಸ ಬಟಾಬಯಲಾಗಿದೆ.

    ಹಾಸ್ಟಲ್‌ನಲ್ಲಿ ಕೇವಲ 4 ವಿದ್ಯಾರ್ಥಿನಿಯರಿಗೆ ತಿಂಡಿ ಹಾಗೂ ಊಟ ಸಿದ್ಧಪಡಿಸಿ, 35 ವಿದ್ಯಾರ್ಥಿನಿಯರ ನಿರ್ವಹಣೆ ವೆಚ್ಚ ಪಡೆಯುತ್ತಿದ್ದರು. ಈ ಸಂಬಂಧ ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ ತಹಸೀಲ್ದಾರ್​ ನೇತೃತ್ವದ ತಂಡ ದಿಢೀರ್‌ ಭೇಟಿ ನೀಡಿದೆ. ಹಾಸ್ಟೆಲ್‌ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯಿಂದ ತಹಸೀಲ್ದಾರ್​ ಮಾಹಿತಿ ಸಂಗ್ರಹಿಸಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಭೇಟಿಯ ವೇಳೆ ಪ್ರಭಾರ ವಾರ್ಡನ್ ಆಸ್ಮಾ ಪರ್ವೀನ್ ಗೈರುಗಿದ್ದರು. ಕರೆ ಮಾಡಿದಾಗ ತರಕಾರಿ ಖರೀದಿಗೆ ದಾವಣಗೆರೆಗೆ ಹೋಗಿರುವುದಾಗಿ ಸಬೂಬು ಹೇಳಿದ್ದಾರೆ. ದಾಖಲೆ, ಉಗ್ರಾಣ ಪರಿಶೀಲಿನೆ ಮಾಡಲು ಕೀಲಿಕೈ ದೊರೆತಿಲ್ಲ. ಮಕ್ಕಳನ್ನು ಈಗಾಗಲೇ ಹೆದರಿಸಿರುವ ಕಾರಣ ಅವರು ಮುಂದೆ ಬಂದು ಸಮಸ್ಯೆ ಹೇಳಿಕೊಳ್ಳುತ್ತಿಲ್ಲ.

    ಮೇಲ್ನೋಟಕ್ಕೆ ಹಾಸ್ಟಲ್‌ ವಿದ್ಯಾರ್ಥಿಗಳಿಗೆ ವಂಚನೆ ಆಗಿರುವುದು ಕಂಡುಬಂದಿರುವುದಾಗಿ ತಹಶೀಲ್ದಾರ್‌ ಪುಟ್ಟರಾಜ ಗೌಡ ಹೇಳಿದ್ದಾರೆ. ನೋಂದಾಯಿತ ಹಾಗೂ ಹಾಸ್ಟಲ್‌ನಲ್ಲಿರುವ ವಿದ್ಯಾರ್ಥಿನಿಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಆಗಿದೆ. ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸರ್ಕಾರದ ಸೌಲಭ್ಯ ವಿತರಣೆಯಲ್ಲಿ ವಿಫಲವಾಗಿದೆ. ಈ ಕುರಿತ ವರದಿಯನ್ನು ಡಿಸಿಗೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್​ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪುಲ್ವಾಮಾ ಹುತಾತ್ಮನ ತಂಗಿಯ ಮದುವೆ ನೆರವೇರಿಸಿದ ಯೋಧರು: ಅಣ್ಣನ ಸ್ಥಾನ ತುಂಬಿದ ಅವಿಸ್ಮರಣೀಯ ವಿವಾಹ

    ಕಾಂಗ್ರೆಸ್​ ಶಾಸಕ ತುಕಾರಾಂ ಆರೋಪದ ಬೆನ್ನಲ್ಲೇ ಸಂಡೂರು ತಹಸೀಲ್ದಾರ್ ರಶ್ಮಿ ಎತ್ತಂಗಡಿ

    ಮೊಬೈಲ್​ ಅನ್​ಲಾಕ್​ ಮಾಡಲು ಮಲಗಿದ್ದ ಗರ್ಲ್​ಫ್ರೆಂಡ್ ಕಣ್ತೆರೆದ ಪ್ರಿಯಕರನಿಗೆ ಕಾದಿತ್ತು ಬಿಗ್​ ಶಾಕ್​!

    20 ವರ್ಷದಿಂದ ಭರ್ತಿಯಾಗದ ಬ್ಯಾಕ್​ಲಾಗ್ ಹುದ್ದೆ; 2,505ಕ್ಕೂ ಹೆಚ್ಚು ಖಾಲಿ, ಆಕಾಂಕ್ಷಿಗಳು ಅತಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts