ಹಾಸನ: ಪತಿಯನ್ನು ಕಳೆದುಕೊಂಡ ಮಹಿಳೆ ಪತ್ನಿಯನ್ನು ಕಳೆದು ಕೊಂಡ ವ್ಯಕ್ತಿಯನ್ನ ಮರು ವಿವಾಹವಾಗಿ ನಂತರ ಮನನೊಂದು ತನ್ನ ಎರಡುವರೆ ವರ್ಷದ ಮಗುವನ್ನ ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಆನೇಮಹಲ್ ಬಳಿ ನಡೆದಿದೆ.
27 ವರ್ಷದ ಪ್ರಜ್ವಲಾ ತನ್ನ ಎರಡು ವರ್ಷದ ಹೆಣ್ಣು ಮಗು ಸಾಧ್ವಿಯೊಂದಿಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡನೇ ಪತಿ ಮೋಹನ್ ಮನೆಯಿಂದ ಹೊರ ಹೋದಾಗ ಪ್ರಜ್ವಲಾ ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ.
ಎರಡನೇ ಮದುವೆ ಪ್ರಜ್ವಲಾಳಿಗೆ ಇಷ್ಟಿರಲಿಲ್ಲ. ಆದರೂ, ಭವಿಷ್ಯದ ದೃಷ್ಟಿಯಿಂದ ಪ್ರಜ್ವಲ ಪೋಷಕರು ಈಕೆಯನ್ನು ಮರುವಿವಾಹಕ್ಕೆ ಒಪ್ಪಿಸಿ ಮದುವೆ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಪ್ರಜ್ವಲಾಳರನ್ನ ಮರು ಮದುವೆಯಾದ ಮೋಹನ್ ಪತ್ನಿ ಕೂಡ ಬೈಕ್ ಅಪಘಾತದಲ್ಲಿ ಎರಡು ವರುಷದ ಹಿಂದೆ ತೀರಿಕೊಂಡಿದ್ದ ಕಾರಣ ಮೋಹನ್ ಪ್ರಜ್ವಲಾರನ್ನ ಒಪ್ಪಿ ಮದುವೆಯಾಗಿದ್ದರು.
ಸದ್ಯ ಮೋಹನ್ ಜೊತೆ ಗಲಾಟೆ ಮಾಡಿಕೊಂಡು ಪ್ರಜ್ವಲಾ ಸಾವಿನ ಹಾದಿ ಹಿಡಿದರೇ ಅಥವಾ ಸತ್ಯವಾಗಿ ನಡೆದಿದ್ದಾರು ಏನು ಅನ್ನೊದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಪ್ರಕರಣ ಸಕಲೇಶಪುರ ನಗರ ಠಾಣೆಯಲ್ಲಿ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ನಿನ್ನ ಜತೆ ಸೆಕ್ಸ್ ಮಾಡಿದ್ದೀನಿ, ಆ ಭಾಗವನ್ನು ತುಂಬಾ ಇಷ್ಟಪಡ್ತೇನೆ! ಅರಿಯಾನಾಗೆ ಶಾಕ್ ಕೊಟ್ಟ ಆರ್ಜಿವಿ
‘ಜಗತ್ತನ್ನೇ ಬದಲಿಸುವ ವ್ಯಕ್ತಿ ನೀವು.. ‘ ರಾಹುಲ್ ಗಾಂಧಿ ಬರ್ತ್ಡೇಗೆ ಸ್ಪೆಷಲ್ ವಿಷ್ ಮಾಡಿದ ರಮ್ಯಾ
ಟಿವಿ ನೋಡೋ ಆಸೆಯಿಂದ ಮನೆಗೆ ಬಂದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ ಬೆಚ್ಚಿಬೀಳಿಸುವಂತಿದೆ!