More

    ಅಳಿಯನ ಮನೆ ಬಾಗಿಲಿಗೆ ಮಾವ ನೇಣು ಶರಣಾದ ಕೇಸ್​: ಮಗಳ ಸಾವು, ಅಳಿಯನ ಮಹಾ ಮೋಸ ಬಯಲು

    ಹಾಸನ: ಸಂಭ್ರಮದಿಂದಲೇ ಮಗಳನ್ನು ಮದುವೆ ಮಾಡಿಕೊಟ್ಟ ತಂದೆ, ಮಗಳು ಚನ್ನಾಗಿರ್ತಾಳೆ ಅಂದುಕೊಂಡಿದ್ದ. ಆದರೆ, ಕೆಲವೇ ತಿಂಗಳಲ್ಲಿ ಮಗಳು ದುರಂತ ಸಾವಿಗೀಡಾಗಿದ್ದು, ತಂದೆಗೆ ತಡೆಯಲಾಗದಷ್ಟು ನೋವು ತಂದಿತು. ಮಗಳ ಸಾವಿನ ನೋವಿನಿಂದ ಹೊರಬರಲಾಗದ ತಂದೆ, ಸಾವಿಗೆ ಅಳಿಯ ಹಾಗೂ ಅವರ ಕುಟುಂಬವೇ ಕಾರಣ ಎಂದು ಆರೋಪಿಸಿ ಸೆಲ್ಫಿ ವೀಡಿಯೋ ಮಾಡಿಟ್ಟು ಅಳಿಯನ ಮನೆ ಮುಂದೆಯೇ ನೇಣಿಗೆ ಶರಣಾದ ಮನಕಲಕುವ ಘಟನೆ ನಡೆದಿದೆ.

    ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದ ಪ್ರವೀಣ್ ಎಂಬಾತನಿಗೆ ಒಂದೂವರೆ ವರ್ಷದ ಹಿಂದೆಯಷ್ಟೇ ಹಾಸನ ತಾಲೂಕಿನ ಗದ್ದುವಳ್ಳಿ ಗ್ರಾಮದ ನಾಗರಾಜು ಎಂಬುವರು ತಮ್ಮ ಮಗಳನ್ನು ಕೊಟ್ಟು, ವರದಕ್ಷಿಣೆಯನ್ನೂ ನೀಡಿ ವಿಜೃಂಭಣೆಯಿಂದ ಮದುವೆ ಮಾಡಿದ್ದರು. ಆಂಧ್ರಪ್ರದೇಶದಲ್ಲಿ ಬೇಕರಿ ಮಾಡಿಕೊಂಡಿದ್ದ ಅಳಿಯ ಬೇಕರಿ ವ್ಯವಹಾರದಲ್ಲಿ ನಷ್ಟವಾದಾಗಲೂ ಬೇರೆಯವರ ಬಳಿ ಒಂದೂವರೆ ಲಕ್ಷ ರೂ. ಸಾಲಮಾಡಿ ಕೊಟ್ಟಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲೇ ಗಂಡ-ಹೆಂಡತಿಗೆ ಹೊಂದಾಣಿಕೆ ಬಾರದಿದ್ದಾಗ ತುಂಬು ಗರ್ಭಿಣಿಯಾಗಿದ್ದ ಮಗಳು ತವರಿಗೆ ಬಂದಿದ್ದಳು. ಈ ನೋವಲ್ಲೇ ಇದ್ದ ನಾಗರಾಜ್​ಗೆ ಮತ್ತೊಂದು ಸಂಕಷ್ಟ ಎದುರಾಯಿತು. ಗರ್ಭಿಣಿಯಾಗಿದ್ದ ಮಗಳು ಡೇಂಘೆಗೆ ತುತ್ತಾದಳು. ಇದು ಆತನನ್ನ ಮತ್ತಷ್ಟು ನೋವಿಗೆ ತಳ್ಳಿತು. ಇಷ್ಟೆಲ್ಲ ಆದ್ರೂ ಅಳಿಯ ಮಹಾಶಯ ಮಾತ್ರ ತನ್ನ ಹೆಂಡತಿ ನೋಡುವುದಕ್ಕೂ ಬರುವುದಿಲ್ಲ. ಇದಾದ ಬಳಿಕ ಆಕೆಯ ಮೃತದೇಹವನ್ನು ಗಂಡನ ಮನೆ ಮಾಳೇಗೆರೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

    ಇತ್ತ ಮಗಳನ್ನು ಕಳೆದುಕೊಂಡು, ಸಾಲವನ್ನೂ ಮಾಡಿಕೊಂಡಿದ್ದ ನಾಗರಾಜ್ ತನ್ನ ಸಂಬಂಧಿಕರೊಂದಿಗೆ ಅಳಿಯನ ಮನೆಗೆ ತೆರಳಿ ನನ್ನ ಮಗಳ ಹನ್ನೆರಡನೇ ದಿನದ ಕಾರ್ಯ ಮಾಡಿ ಎಂದು ಕೇಳಿದ್ದಾರೆ. ಅಲ್ಲದೆ, ನಾನು ನೀಡಿರುವ ವರದಕ್ಷಿಣೆ ಮತ್ತು ಸಾಲ ಮಾಡಿ ಕೊಟ್ಟಿದ್ದ ಹಣವನ್ನು ವಾಪಾಸ್ ನೀಡಿ ಎಂದು ಕೇಳಿದ್ದಾರೆ. ಇದಕ್ಕೆ‌ ಮೊದಲು ನಿರಾಕರಿಸಿದ್ದ ಅಳಿಯನ ಕುಟುಂಬದವರು ನಂತರ ತಿಂಗಳ ತಿಥಿ ವೇಳೆಗೆ ಹಣ ಕೊಡುವುದಾಗಿ ಒಪ್ಪಿಕೊಂಡಿದ್ದರು. ಮಗಳು ಸತ್ತ ಒಂದು ತಿಂಗಳಿಗೆ ಕರೆ ಮಾಡಿದ್ರೆ ಅಳಿಯನ ಮನೆಯವರು ಕರೆ ಸ್ವೀಕರಿಸದೇ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ.

    ಮೊದಲೇ ನೋವಿನಲ್ಲಿದ್ದ ನಾಗರಾಜ್, ಆಂಧ್ರದಿಂದ ಬಂದಿದ್ದಾರ ಎಂದು ನೋಡಲು ಅಳಿಯನ ಮನೆ ಮಾಳೇಗೆರೆಗೆ ತೆರಳಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿದ ನಾಗರಾಜ್ ನನಗೆ ನನ್ನ ಮಗಳಿಗೆ ಇಬ್ಬರಿಗೂ ಮೋಸವಾಯಿತು. ಇದಕ್ಕೆಲ್ಲ ಅಳಿಯ ಪ್ರವೀಣ ಮತ್ತು ಆತನ ತಾಯಿ ಭದ್ರಮ್ಮ ಕಾರಣ ಎಂದು ತನ್ನ ಮೊಬೈಲ್​ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು ಅವರ ಮನೆ ಬಾಗಿಲು ಮುಂದೆಯೇ ನೇಣಿಗೆ ಶರಣಾಗಿದ್ದಾರೆ. ನನ್ನ ಮತ್ತು ನನ್ನ ಮಗಳ ಆತ್ಮಕ್ಕೆ ಶಾಂತಿ ದೊರಕಬೇಕಾದ್ರೆ ಅವರಿಗೆ ಶಿಕ್ಷೆ ಆಗಬೇಕು ಎಂದು ಮನವಿಯನ್ನು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ಎಡೆಯಿಟ್ಟು ನೇಣಿಗೆ ಶರಣಾದ ತಂದೆ

    ಬಹುಮಾನಕ್ಕಾಗಿ 3 ದಶಕದ ಅಲೆದಾಟ, ಇನ್ನೂ ನಿಂತಿಲ್ಲ ಹೋರಾಟ; ಪಶ್ಚಿಮಘಟ್ಟದಲ್ಲಿ ಸೇನೆ ಹೆಲಿಕಾಪ್ಟರ್ ಹುಡುಕಿಕೊಟ್ಟ ಯುವಕ ಈಗ ವೃದ್ಧ..

    ಟೀಮ್​ ಇಂಡಿಯಾ ನಾಯಕತ್ವ ವಹಿಸಿದ ರೋಹಿತ್​ ಶರ್ಮಾಗೆ ಸಿಗುವ ಸಂಬಳವೆಷ್ಟು? ಅಚ್ಚರಿಯ ಮಾಹಿತಿ ಇಲ್ಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts