More

    ಟೀಮ್​ ಇಂಡಿಯಾ ನಾಯಕತ್ವ ವಹಿಸಿದ ರೋಹಿತ್​ ಶರ್ಮಾಗೆ ಸಿಗುವ ಸಂಬಳವೆಷ್ಟು? ಅಚ್ಚರಿಯ ಮಾಹಿತಿ ಇಲ್ಲಿದೆ!

    ನವದೆಹಲಿ: ಈಗಾಗಲೇ ಟಿ-20 ಕ್ರಿಕೆಟ್​ ತಂಡದ ನಾಯಕನಾಗಿರುವ ಹಿಟ್ ಮ್ಯಾನ್ ರೋಹಿತ್​ ಶರ್ಮಾರನ್ನು ಇದೀಗ ಏಕದಿನ ತಂಡದ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದ್ದು, ಟ್ವಿಟ್ಟರ್​​ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮೂಲಕ ಏಕದಿನ ಹಾಗೂ ಟಿ-20 ತಂಡಕ್ಕೆ ಹಿಟ್​ಮ್ಯಾನ್ ಅವರಿಗೆ ನಾಯಕನ ಸ್ಥಾನ ನೀಡಲಾಗಿದೆ. ಉಳಿದಂತೆ ಟೆಸ್ಟ್​​ ತಂಡದಲ್ಲಿ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

    ಈಗಾಗಲೇ ನಾಯಕರಾಗಿ ರೋಹಿತ್​ 10 ಏಕದಿನ ಪಂದ್ಯಗಳನ್ನು ಆಡಿದ್ದು, 8ರ ಗೆಲುವು ಸಾಧಿಸಿದ್ದಾರೆ. 22 ಟಿ20 ಪಂದ್ಯಗಳನ್ನು ಆಡಿದ್ದು, 18ರಲ್ಲಿ ಗೆಲುವು ದಾಖಲಿಸಿದ್ದಾರೆ. ನಾಯಕರಾಗಿ ಈಗಾಗಲೇ ಯಶಸ್ಸು ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಮತ್ತಷ್ಟ ಸಾಧನೆಯ ಪಥದಲ್ಲಿ ಸಾಗುವ ಭರವಸೆಯನ್ನು ಹೊಂದಿದೆ.

    ಇನ್ನು ರೋಹಿತ್​ ಟೀಮ್​ ಇಂಡಿಯಾ ನಾಯಕರಾದ ಮೇಲೆ ಅವರ ಸಂಬಳ ಎಷ್ಟಾಗಿರಬಹುದು ಎಂಬ ಕುತೂಹಲ ಮನೆ ಮಾಡಿದ್ದು, ಅದಕ್ಕೆ ಉತ್ತರ ಇಲ್ಲಿದೆ. ಸದ್ಯ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ರೋಹಿತ್​ ನಾಯಕರಾಗಿದ್ದರೂ ಕೂಡ ಅವರ ಸಂಬಳದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ. ರೋಹಿತ್​ ಎ+ ಕೆಟಗರಿಯಲ್ಲಿರುವುದರಿಂದ ವಾರ್ಷಿಕ ಬಿಸಿಸಿಐನಿಂದ 7 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ. ರೋಹಿತ್​ ಬಿಟ್ಟು ಜಸ್ಪ್ರಿತ್​ ಬೂಮ್ರಾ ಮತ್ತು ವಿರಾಟ್​ ಕೊಹ್ಲಿ ಎ+ ಕೆಟಗರಿಯಲ್ಲಿದ್ದಾರೆ. ಹೀಗಾಗಿ ರೋಹಿತ್​ ಕಾಟ್ರ್ಯಾಕ್ಟ್​ ಆಧಾರದ ಮೇಲೆ ಅದೇ ಸಂಬಳದಲ್ಲಿ ಮುಂದುವರಿಯಲಿದ್ದಾರೆ.

    ನಾಯಕರಾಗಿ ಬದಲಾವಣೆ ಆಗಿದ್ದನ್ನು ಬಿಟ್ಟರೆ, ರೋಹಿತ್​ ಅವರ ಸಂಬಳದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಏಕದಿನ ತಂಡದ ನಾಯಕತ್ವ ಬದಲಾವಣೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಬಿಸಿಸಿಐ ಮುಖ್ಯಸ್ಥ ಗಂಗೂಲಿ..!

    T-20 ಜೊತೆ ಏಕದಿನ ತಂಡದ ಕ್ಯಾಪ್ಟನ್​ ಆಗಿ ‘ಹಿಟ್​ಮ್ಯಾನ್’ ಆಯ್ಕೆ: ಟೆಸ್ಟ್​​ ತಂಡಕ್ಕೆ ಸೀಮಿತವಾದ ಕೊಹ್ಲಿ ನಾಯಕತ್ವ…

    2021ರಲ್ಲಿ ಹೆಚ್ಚು ಸರ್ಚ್​​ ಮಾಡಲಾದ ವಿಚಾರ, ವ್ಯಕ್ತಿಗಳು… ಶಾರುಖ್​ ಪುತ್ರನಿಗೂ ಸ್ಥಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts