More

    ದ. ಆಫ್ರಿಕಾದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ಕಾಡುವ ಬೌಲರ್​ ಹೆಸರೇಳಿದ ವಾಸಿಂ ಜಾಫರ್​!​

    ನವದೆಹಲಿ: ಡಿಸೆಂಬರ್​ 26ರಿಂದ ಆರಂಭವಾಗವ ಮೂರು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ಗೆಲುವಿಗಾಗಿ ಸೆಣಸಾಡಲಿವೆ. ಕಳೆದ ವಾರವೇ ದಕ್ಷಿಣ ಆಫ್ರಿಕಾಗೆ ಹಾರಿರುವ ಟೀಮ್​ ಇಂಡಿಯಾ ಅಭ್ಯಾಸದಲ್ಲಿ ನಿರತವಾಗಿದೆ. ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ 2006ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದ ಭಾಗವಾಗಿದ್ದ ವಾಸಿಂ ಜಾಫರ್,​ ಟೆಸ್ಟ್​ ಸರಣಿಯಲ್ಲಿ ಭಾರತ ತಂಡವನ್ನು ಕಾಡುವ ಬೌಲರ್​ ಯಾರೆಂಬುದನ್ನು ಹೆಸರಿಸಿದ್ದಾರೆ.

    ದ. ಆಫ್ರಿಕಾದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನು ಕಾಡುವ ಬೌಲರ್​ ಹೆಸರೇಳಿದ ವಾಸಿಂ ಜಾಫರ್​!​ದಕ್ಷಿಣ ಆಫ್ರಿಕಾ ತಂಡವು ಯೋಗ್ಯವಾದ ವೇಗದ ಬೌಲಿಂಗ್​ ದಾಳಿಯನ್ನು ಹೊಂದಿರುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲಿ ಕಾಗಿಸೋ ರಬಾಡ ಶ್ರೇಷ್ಠರು. ಅವರು ಟೀಮ್​ ಇಂಡಿಯಾಗೆ ಸವಾಲು ಆಗಲಿದ್ದಾರೆ. ಸಾಕಷ್ಟು ಸಾಮರ್ಥ್ಯ ಹೊಂದಿರುವ ರಬಾಡ ತಮ್ಮ ಬೌಲಿಂಗ್​ ಮೂಲಕ ಟೀಮ್​ ಇಂಡಿಯಾವನ್ನು ಕಾಡಲಿದ್ದಾರೆ. ಆದರೆ, ಆಫ್ರಿಕಾ ತಂಡದ ಬ್ಯಾಟಿಂಗ್​ ಹಿಂದಿನಂತೆ ಇಲ್ಲ. ಆದರೂ ಈ ಪ್ರವಾಸ ಭಾರತದ ಪಾಲಿಗೆ ಸುಲಭವೇನಲ್ಲ ಎಂದು ಜಾಫರ್​ ಹೇಳಿದ್ದಾರೆ.

    ಭಾರತದ ಬೌಲರ್​ಗಳನು ತಮ್ಮ ತಂಡವನ್ನು ಆಟದಲ್ಲಿ ಉಳಿಸಿಕೊಳ್ಳಲಿದ್ದಾರೆ. ಭಾರತ ವೇಗಿಗಳು ಇದೀಗ ತುಂಬಾ ಅನುಭವಿಗಳಾಗಿದ್ದಾರೆ. ಜಸ್ಪ್ರಿತ್​ ಬೂಮ್ರಾ ಮತ್ತು ಮೊಹಮ್ಮದ್​ ಶಮಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅಲ್ಲದೆ, ಟೀಮ್​ ಇಂಡಿಯಾ ಆಲ್​ರೌಂಡರ್​ ದಾಳಿಯನ್ನು ಹೊಂದಿದೆ. ಭಾರತ 400ಕ್ಕೂ ಅಧಿಕ ಸ್ಕೋರ್​ ಮಾಡಿದರೆ, ಪಂದ್ಯವನ್ನು ಗೆಲ್ಲಲಿದ್ದಾರೆ. ನಮ್ಮ ಬೌಲಿಂಗ್​ ದಾಳಿ ಉತ್ತಮವಾಗಿದೆ. ಆದರೆ, ಸವಾಲು ಎದುರಾಗಿರುವುದು ಬ್ಯಾಟಿಂಗ್​ ವಿಭಾಗದಲ್ಲಿ ಎಂದು ಜಾಫರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ವಿರಾಟ್​ ಕೊಹ್ಲಿ ಬ್ಯಾಟಿಂಗ್​ಗೆ ಇತರೆ ಆಟಗಾರರು ಸಾಥ್​ ನೀಡಬೇಕೆಂದು ಜಾಫರ್​ ಬಯಸಿದ್ದಾರೆ. 2018ರ ಪ್ರವಾಸದಲ್ಲಿ ಆಫ್ರಿಕಾ ವಿರುದ್ಧ ಕೊಹ್ಲಿ ಮಾತ್ರ ಉತ್ತಮ ರನ್​ ಗಳಿಸಿದ್ದರು. ಇತರೆ ಬ್ಯಾಟ್ಸ್​ಮನ್​ಗಳು ಕೂಡ ಉತ್ತಮವಾಗಿ ಆಡಬೇಕಿದೆ. ಮೊದಲ ಆರು ಬ್ಯಾಟಿಂಗ್​ ಕ್ರಮಾಂಕದಲ್ಲಿ ಭಾರತ ತಂಡ ಹೆಚ್ಚು ಸಮತೋಲನ ಹೊಂದಿದೆ. ರಿಷಬ್​ ಪಂತ್​ ಅರ್ಧ ಅಥವಾ ಒಂದು ಗಂಟೆಗಳ ಕಾಲ ಕ್ರೀಸ್​ನಲ್ಲಿ ನಿಂತರೆ ಆಟವನ್ನು ಬದಲಿಸಲಿದ್ದಾರೆ. ತಂಡದಲ್ಲಿ ಉತ್ತಮ ಆಟಗಾರರಿದ್ದು, ವಿರಾಟ್​ಗೆ ಸಾಥ್​ ನೀಡುವಂತೆ ಕೊಡುಗೆ ನೀಡಬೇಕೆಂದು ಜಾಫರ್​ ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ಮಹಿಳಾ ಪೊಲೀಸ್​ ಬೆನ್ನಿಗೆ ನಿಂತ ಕೇರಳ ಸರ್ಕಾರದ ವಿರುದ್ಧವೇ ಗೆದ್ದು ಬೀಗಿದ 8ರ ಬಾಲೆ!

    ಸಾಮಾಜಿಕ ಜಾಲತಾಣದಲ್ಲಿ ಪತಿಯ ಸರ್​ನೇಮ್​ ಕೈಬಿಟ್ಟಿದ್ದಕ್ಕೆ ಪ್ರಿಯಾಂಕಾ ಚೋಪ್ರಾ ಕೊಟ್ಟ ಕಾರಣ ಹೀಗಿದೆ…

    ದೇಶದಲ್ಲಿ ಒಮಿಕ್ರಾನ್ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ?: ಭಾರತದಲ್ಲಿ ಈಗಾಗಲೇ ಆರಂಭವಾಗಿದೆ ಮೂರನೇ ಅಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts