ವಿಜಯವಾಡ: ಚೆನ್ನಾಗಿ ಓದಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲಿ ಅಂತಾ ಪಾಲಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಆದರೆ, ಕೆಲವರು ಪ್ರೀತಿಯ ಬಲೆಗೆ ಬಿದ್ದು ಬೇಡದ ವಿಚಾರಕ್ಕೆ ಸುದ್ದಿಯಾಗುತ್ತಾರೆ. ಇದೇ ರೀತಿಯ ಘಟನೆ ಇದೀಗ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ರಸ್ತೆಯಲ್ಲೇ ವಿದ್ಯಾರ್ಥಿನಿಯರಿಬ್ಬರು ಕಿತ್ತಾಡಿಕೊಂಡಿದ್ದಾರೆ.
ಈ ಘಟನೆ ಶುಕ್ರವಾರ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಮಟ್ಟದಲ್ಲಿ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಗಳ ಬಿಡಿಸಲು ಬಂದರು ಕ್ಯಾರೆ ಎನ್ನದೇ ಒಬ್ಬರಿಗೊಬ್ಬರು ಪರಸ್ಪರ ಕೆಟ್ಟದಾಗಿ ನಿಂದಿಸಿಕೊಳ್ಳುತ್ತಾ ರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ಗಲಾಟೆಗೆ ಲವ್ ಅಫೇರ್ ಕಾರಣ ಎಂದು ಸಹಪಾಠಿಗಳು ಮತ್ತು ಸ್ಥಳೀಯರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು ವಿಜಯವಾಡದ ಕೆಬಿಎನ್ ಕಾಲೇಜಿನವರು. ಕಾಲೇಜು ವಿದ್ಯಾರ್ಥಿಗಳು ಎಂಬುದನ್ನು ಮರೆತು ರಸ್ತೆ ಪಕ್ಕದಲ್ಲೇ ಪರಸ್ಪರ ಕೂದಲು ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಇದನ್ನು ನೋಡಿ ಸ್ಥಳೀಯರು ಶಾಕ್ ಆಗಿದ್ದಾರೆ. ಈ ವಿಚಾರ ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಮುಟ್ಟಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ. (ಏಜೆನ್ಸೀಸ್)
ಪ್ರಭಾಸ್ ನಟನೆಯ ಸಲಾರ್ ಮೇಲೆ KGF-2 ಗೆಲುವಿನ ಒತ್ತಡ! ಸಾಹೋ ಅನುಭವ ಮರೆಯುವಂತಿಲ್ಲ
ಇನ್ನೆರೆಡು ದಿನದಲ್ಲಿ ಯುವತಿಯನ್ನು ಕರೆದುಕೊಂಡು ಬಾರದಿದ್ರೆ… ಪೊಲೀಸರಿಗೆ ಖಡಕ್ ಎಚ್ಚರಿಕೆ
2ನೇ ಮದ್ವೆಯಾದ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ: ಕೋವಿಡ್ ಸಂದರ್ಭದ ಭೇಟಿಗೆ ಮದುವೆಯ ಬೆಸುಗೆ