More

    ನಿಜವಾಯ್ತು ಈಕೆ ನುಡಿದ ಭವಿಷ್ಯವಾಣಿ: ಸೆಲೆಬ್ರಿಟಿಗಳಿಗೆ ನಡುಕ ಹುಟ್ಟಿಸಿದ ಹೊಸ ತಲೆಮಾರಿನ ಬಾಬಾ ವಾಂಗಾ

    ನವದೆಹಲಿ: ಕರೊನಾ, ಸುನಾಮಿ, ಪ್ರಳಯ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲದಂಥ ಮಹಾನ್‌ ಭವಿಷ್ಯವನ್ನು ನೂರಾರು ವರ್ಷಗಳ ಹಿಂದೆಯೇ ಬರೆದಿಟ್ಟಿದ್ದ ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ ಅವರು ಇಲ್ಲಿಯವರೆಗೆ ನುಡಿದಿರುವ ಬಹುತೇಕ ಭವಿಷ್ಯಗಳು ನಿಜವಾಗಿವೆ. ಬಾಬಾ ವಾಂಗಾ ಹೆಸರೇಳಿದರೆ ಸಾಕು ಅವರ ಕರಾಳ ಭವಿಷ್ಯಗಳು ಕಣ್ಣ ಮುಂದೆ ಬರುತ್ತದೆ. ಇದೀಗ ಬಾಬಾ ವಾಂಗಾ ಮಾದರಿಯಲ್ಲೇ 19 ವರ್ಷದ ಯುವತಿಯೊಬ್ಬಳು ತನ್ನ ಭವಿಷ್ಯವಾಣಿಯಿಂದಲೇ ಸದ್ದು ಮಾಡುತ್ತಿದ್ದಾಳೆ.

    ಯುವತಿಯ ಹೆಸರು ಹನ್ನಾ ಕ್ಯಾರೊಲ್. ಈಕೆ ಬಾಬಾ ವಾಂಗಾ ಮಾದರಿಯಲ್ಲೇ ಭವಿಷ್ಯ ನುಡಿದ್ದಾಳೆ. ಇದೀಗ ಆ ಭವಿಷ್ಯವಾಣಿ ಭಾರಿ ಸದ್ದು ಮಾಡುತ್ತಿದೆ. ಕಳೆದ ಜನವರಿಯಲ್ಲಿ ಯುವತಿ ಕ್ಯಾರೊಲ್, 2022ನೇ ವರ್ಷಕ್ಕಾಗಿ​ ಒಟ್ಟು 28 ಭವಿಷ್ಯವಾಣಿಗಳನ್ನು ನುಡಿದಿದ್ದಳು. ಅದರಲ್ಲಿ 10 ಭವಿಷ್ಯಗಳು ಇದೀಗ ನಿಜವಾಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ.

    ಸಾಮಾಜಿಕ ಮಾಧ್ಯಮ ಬಳಕೆದಾರಳು ಆಗಿರುವ ಕ್ಯಾರೊಲ್​ ತಮ್ಮ ನಿಖರ ಭವಿಷ್ಯವಾಣಿಯಿಂದಾಗಿ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿರುವುದಲ್ಲದೆ, ಫಾಲೋವರ್ಸ್​ ಸಂಖ್ಯೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಬಾಬಾ ವಾಂಗಾ ಅವರಿಗೆ ಹೋಲಿಕೆ ಮಾಡಿ ಹೊಸ ತಲೆಮಾರಿನ ಬಾಬಾ ವಾಂಗಾ ಎಂದು ಕ್ಯಾರೊಲ್​ ಅವರನ್ನು ಕರೆಯುತ್ತಿದ್ದಾರೆ.

    ಕ್ಯಾರೊಲ್ ಮಾಡಿದ ಭವಿಷ್ಯವಾಣಿಗಳಲ್ಲಿ, ಸೆಲೆಬ್ರಿಟಿಗಳ ಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಮಸ್ಯೆಗಳಿವೆ. ನಾನು ಯಾವಾಗಲೂ ಪಾಪ್ ಸಂಸ್ಕೃತಿ ಮತ್ತು ಪ್ರಸಿದ್ಧ ವ್ಯಕ್ತಿಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದ್ದರಿಂದ ನನ್ನ ಹೆಚ್ಚಿನ ಊಹೆಗಳು ಅದಕ್ಕೆ ಸಂಬಂಧಿಸಿವೆ. ಏನಾದರೂ ಆಗಲಿದೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ಕ್ಯಾರೊಲ್​ ಹೇಳಿದ್ದಾರೆ. ಅಂದಹಾಗೆ ಕ್ಯಾರೊಲ್​ ಯುನೈಟೆಡ್​ ಸ್ಟೇಟ್ಸ್​ನ ಫಾಕ್ಸ್​ಬೊರೋ ನಿವಾಸಿ.

    ನಿಜವಾಯ್ತು ಈಕೆ ನುಡಿದ ಭವಿಷ್ಯವಾಣಿ: ಸೆಲೆಬ್ರಿಟಿಗಳಿಗೆ ನಡುಕ ಹುಟ್ಟಿಸಿದ ಹೊಸ ತಲೆಮಾರಿನ ಬಾಬಾ ವಾಂಗಾ

    ಮೇಲಿನ 28 ಭವಿಷ್ಯವಾಣಿಗಳಲ್ಲಿ ಇಲ್ಲಿಯವರೆಗೆ 10 ಭವಿಷ್ಯವಾಣಿಗಳು ನಿಜವಾಗಿವೆ. ಇದರಲ್ಲಿ ಹ್ಯಾರಿ ಸ್ಟೈಲ್ಸ್ ಮತ್ತು ಬೆಯೋನ್ಸ್‌ನ ಹೊಸ ಆಲ್ಬಂಗಳು, ರಿಹಾನ್ನಾ ಗರ್ಭಿಣಿಯಾಗುತ್ತಿದ್ದಾರೆ ಮತ್ತು ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಮಗುವನ್ನು ಸ್ವಾಗತಿಸಿದ್ದಾರೆ ಎಂಬ ಭವಿಷ್ಯ. ಅಲ್ಲದೆ, ಖ್ಲೋ ಮತ್ತು ಟ್ರಿಸ್ಟಾನ್ ಥಾಂಪ್ಸನ್ ಮತ್ತೊಂದು ಮಗುವನ್ನು ಹೊಂದಲಿದ್ದಾರೆ ಮತ್ತು ಕೌರ್ಟ್ನಿ ಮತ್ತು ಟ್ರಾವಿಸ್ ಸ್ಕಾಟ್ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಭವಿಷ್ಯವಾಣಿಗಳು ಈಗಾಗಲೇ ನಿಜವಾಗಿವೆ.

    ಕಳೆದ ವಾರ ಪೀಟ್ ಡೇವಿಡ್ಸನ್ ಮತ್ತು ಕಿಮ್ ಕಾರ್ಡಶಿಯಾನ್ ಬೇರ್ಪಟ್ಟಾಗ ಅವರ ಇತ್ತೀಚಿನ ಭವಿಷ್ಯವು ನಿಜವಾಯಿತು. ಕಿಮ್ ಅವರ ಮಾಜಿ ಪತಿ ಕಾನ್ಯೆ ವೆಸ್ಟ್ ಅವರ ಹೊಸ ಸಂಬಂಧದ ಬಗ್ಗೆ ಕ್ಯಾರೊಲ್​ ಅವರು ಭವಿಷ್ಯ ನುಡಿದಿದ್ದಾರೆ.

    ಕ್ಯಾರೊಲ್​ ಅವರು ಜನಪ್ರಿಯತೆಯನ್ನು ಗಳಿಸಿದ ನಂತರ ಅವರಿಗೆ ವೈಯಕ್ತಿಕವಾಗಿ ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿರುವ ಜನರ ಬಗ್ಗೆ ಭವಿಷ್ಯ ನುಡಿಯುತ್ತಿರುವುದಾಗಿ ತಿಳಿಸಿದ್ದಾರೆ. ನಾನು ಈಗ ಉದ್ಯೋಗವನ್ನು ಹೊಂದಿದ್ದೇನೆ. ಜನರು ನನಗೆ ತಮ್ಮದೇ ಆದ ಫೋಟೋಗಳನ್ನು ಕಳುಹಿಸುತ್ತಾರೆ ಮತ್ತು ಅವರು ಯಾವಾಗ ಮಗುವನ್ನು ಹೊಂದುತ್ತಾರೆ, ಅವರ ವೃತ್ತಿಜೀವನವನ್ನು ಬದಲಾಯಿಸುತ್ತಾರೆ ಅಥವಾ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ ಎಂಬುದನ್ನು ನಾನು ಗ್ರಹಿಸಬಲ್ಲೆ. ನಿಖರವಾದ ದಿನಾಂಕದವರೆಗೆ ನನ್ನ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಜನರು ನನಗೆ ಎಲ್ಲಾ ಸಮಯದಲ್ಲೂ ಸಂದೇಶ ಕಳುಹಿಸುತ್ತಿದ್ದಾರೆ. ಅದು ಕೇಳಲು ಅದ್ಭುತವಾಗಿದೆ ಎಂದು ಕ್ಯಾರೊಲ್ ಹೇಳಿದರು. (ಏಜೆನ್ಸೀಸ್​)

    ಮಮತಾ ಬ್ಯಾನರ್ಜಿಗೆ ಏಕಕಾಲದಲ್ಲಿ ಶಾಕ್​ ಕೊಟ್ಟ ಐಟಿ, ಇಡಿ ಅಧಿಕಾರಿಗಳು: ಆಪ್ತನಿಗೆ ಬಂತು ಗ್ರಹಚಾರ!

    ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಸ್ಥಳದಲ್ಲೇ ಬೈಕ್​ ಸವಾರ ಸಾವು

    ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ ಹಾಕ್ಕೊಂಡು ಓಡಾಟ: ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಬಿತ್ತು ಭಾರಿ ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts