More

    VIDEO| ಮೆಟ್ರೋ ನಿಲ್ದಾಣದಲ್ಲಿ ರಾ ರಾ ರಕ್ಕಮ್ಮ ಹಾಡಿಗೆ ಹುಚ್ಚೆದ್ದು ಕುಣಿದ ಯುವತಿಗೆ ಎದುರಾಯ್ತು ಸಂಕಷ್ಟ!

    ಹೈದರಾಬಾದ್​: ಇಂದು ಸಾಮಾಜಿಕ ಜಾಲತಾಣದಲ್ಲಿ ಯುವಕ-ಯುವತಿಯರ ರೀಲ್ಸ್​ ಮತ್ತು ಶಾರ್ಟ್​ ವಿಡಿಯೋಗಳೇ ತುಂಬಿ ತುಳುಕುತ್ತಿವೆ. ಯಾವುದೇ ಸಿನಿಮಾದ ಸಾಂಗ್​ ಅಥವಾ ಡೈಲಾಗ್​ ಇಷ್ಟವಾದರೇ ಸಾಕು ಅದಕ್ಕೆ ರೀಲ್ಸ್​ ಮಾಡಿ ಹರಿಬಿಡುವುದು ಯುವ ಜನಾಂಗದ ಹೊಸ ಅಭ್ಯಾಸವಾಗಿದೆ. ಹೀಗಾಗಿ ಜಾಲತಾಣದಲ್ಲಿ ವಿಡಿಯೋಗಳ ಮಹಾಪೂರವೇ ಪ್ರತಿನಿತ್ಯ ಹರಿದುಬರುತ್ತಿರುತ್ತದೆ. ಆದರೆ, ವಿಡಿಯೋ ಮಾಡುವಾಗ ಯಾವ ಸ್ಥಳಗಳಲ್ಲಿ ಮಾಡುತ್ತೇವೆ ಎಂಬುದು ಮುಖ್ಯ. ಇಲ್ಲವಾದಲ್ಲಿ ಆಡಳಿತ ವಲಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

    ಬೆಂಗಳೂರಿನ ಸೋಶಿಯಲ್​ ಮೀಡಿಯಾ ಕಂಟೆಂಟ್​ ಕ್ರಿಯೇಟರ್​ ಒಬ್ಬ ಬೈಕ್​ ಬಳಸಿಕೊಂಡು, ಸಂಚಾರ ನಿಯಮ ಉಲ್ಲಂಘಿಸಿ, ಸಾಕಷ್ಟು ವಿಡಿಯೋಗಳನ್ನು ಮಾಡಿ ಜಾಲತಾಣದಲ್ಲಿ ಹರಿಬಿಡುವ ಮೂಲಕ ಟ್ರಾಫಿಕ್ ಪೊಲೀಸರಿಗೆ ಕಣ್ಣಿಗೆ ಬಿದ್ದು​ ದಂಡ ಕಟ್ಟಿದ್ದನ್ನು ನೀವು ಗಮನಿಸಿರಬಹುದು. ಇದೀಗ ಹೈದರಾಬಾದ್​ನಲ್ಲಿ ಯುವತಿಯೊಬ್ಬಳು ಮೆಟ್ರೋ ನಿಲ್ದಾಣದಲ್ಲಿ ಮತ್ತು ರೈಲಿನ ಒಳಗೆ ರೀಲ್ಸ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅಂದಹಾಗೆ ಯುವತಿ ಕನ್ನಡದ ವಿಕ್ರಾಂತ್​ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೂ ಹೆಜ್ಜೆ ಹಾಕಿದ್ದಾಳೆ.

    ಹೈದರಾಬಾದ್​ನ ಕಂಟೆಂಟ್​ ಕ್ರಿಯೇಟರ್​ ಒಬ್ಬಳು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋ ರೈಲಿನ ಒಳಗೆ ಮತ್ತು ನಿಲ್ದಾಣದಲ್ಲಿ ಡಾನ್ಸ್​ ಮಾಡಿರುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಳು. ಆ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯಿತು. ಸಾವಿರಕ್ಕೂ ಹೆಚ್ಚು ವೀಕ್ಷಣೆ ಮತ್ತು ಲೈಕ್ಸ್​ಗಳನ್ನು ವಿಡಿಯೋ ಪಡೆದುಕೊಂಡಿದೆ. ಅನೇಕ ವಿಡಿಯೋವನ್ನು ಬೆಂಬಲಿಸಿದರೆ, ಇನ್ನು ಕೆಲವರು ಸಾರ್ವಜನಿಕ ಪ್ರದೇಶಗಳಲ್ಲಿ ಏನಿದು ಅತಿರೇಕದ ವರ್ತನೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

    ಸಾರ್ವಜನಿಕ ಪ್ರದೇಶದಲ್ಲಿ ಇದೆಂಥಾ ವರ್ತನೆ? ಇಂಥವುಗಳಿಗೆ ಮೆಟ್ರೋ ರೈಲಿನಲ್ಲಿ ಅನುಮತಿ ಕೊಡುತ್ತೀರಾ? ಹೈದರಾಬಾದ್​ ಮೆಟ್ರೋ ರೈಲು ನಿಲ್ದಾಣವನ್ನು ಪಿಕ್​ನಿಕ್​ ಮತ್ತು ಡಾನ್ಸ್​ ವೇದಿಕೆ ಎಂದು ಬದಲಾಯಿಸಿದ್ದೀರಾ? ಎಂದು ಪ್ರಶ್ನೆಗಳ ಸರಮಾಲೆಯೊಂದಿಗೆ ಹೈದರಾಬಾದ್​ ಮೆಟ್ರೋ ರೈಲು ನಿಗಮ (ಎಚ್​ಎಂಆರ್​ಎಲ್​) ವನ್ನು ಟ್ವಿಟರ್​ನಲ್ಲಿ ಟ್ಯಾಗ್​ ಮಾಡಲಾಗಿತ್ತು.

    ಇದೀಗ ಈ ವಿಚಾರ ಎಚ್​ಎಂಆರ್​ಎಲ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಯುವತಿಯ ವಿರುದ್ಧ ಗರಂ ಆಗಿದ್ದು, ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದೆ. ರೈಲಿನ ಒಳಗೆ ರೀಲ್ಸ್​ ಮಾಡಿದ ಯುವತಿಗೆ ಇದೀಗ ಸಂಕಷ್ಟ ಎದುರಾಗಿದೆ. (ಏಜೆನ್ಸೀಸ್​)

    ಕೆರೂರು ಗುಂಪು ಘರ್ಷಣೆ ಕೇಸ್​: ಗಾಯಾಳು ಮುಂದೆ ಬಸವಣ್ಣನವರ ವಚನ ಹೇಳಿದ ADGP ಅಲೋಕ್​ ಕುಮಾರ್​

    ಮಲಯಾಳಂ ಸ್ಟಾರ್​ ನಟನ ಜತೆ ನಿತ್ಯಾ ಮೆನನ್​ ಮದುವೆ? ಮಲಯಾಳಂ ಬ್ಯೂಟಿ ಕೊಟ್ಟ ಸ್ಪಷ್ಟನೆ ಹೀಗಿದೆ…

    13,800 ಸರ್ಕಾರಿ ಶಾಲೆ ಮುಚ್ಚಲು ನಡೆದಿದೆ ಹುನ್ನಾರ: ಕನ್ನಡ ಪರ, ವಿದ್ಯಾರ್ಥಿ ಸಂಘಟನೆಗಳ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts