More

    ಆನ್​ಲೈನ್​ನಲ್ಲಿ ಫ್ರೈಡ್ ಚಿಕನ್ ಆರ್ಡರ್​ ಮಾಡಿದವಳಿಗೆ ಕಾದಿತ್ತು ಶಾಕ್​: ಬಾಕ್ಸ್​ ತೆರೆದು ಬೆಚ್ಚಿಬಿದ್ದ ಮಹಿಳೆ!

    ಮನಿಲಾ​: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಆನ್​ಲೈನ್​ ಆರ್ಡರ್​ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರಲ್ಲೂ ಫುಡ್​ ಆರ್ಡರ್​ ಸಂಖ್ಯೆಯಂತೂ ಹೆಚ್ಚಿದೆ. ಆದರೆ, ಕೆಲವೊಮ್ಮೆ ಆನ್​ಲೈನ್​ ಆರ್ಡರ್​ಗಳು ತುಂಬಾ ಕಿರಿಕಿರಿ ಉಂಟುಮಾಡುತ್ತವೆ. ಏನೋ ಬುಕ್​ ಮಾಡಿದರೆ ಮತ್ತೇನೋ ಬರುವುದು ಸಹ ಸಾಮಾನ್ಯವಾಗಿದೆ. ಇದೇ ರೀತಿಯ ಘಟನೆಯೊಂದು ಇದೀಗ ವರದಿಯಾಗಿದೆ.

    ಆನ್​ಲೈನ್​ನಲ್ಲಿ ರೆಸ್ಟೋರೆಂಟ್​ ಒಂದರಲ್ಲಿ ಫುಡ್​ ಆರ್ಡರ್​ ಮಾಡಿದ ಮಹಿಳೆಗೆ ಆಘಾತಕಾರಿ ಅನುಭವವಾಗಿದೆ. ಅದೇನೆಂದರೆ ಫ್ರೈಡ್ ಚಿಕನ್ ಬದಲಾಗಿ ಡೆಲಿವರಿ ಬಾಕ್ಸ್​ನಲ್ಲಿ ಫ್ರೈಡ್​ ಟವಲ್​ ನೋಡಿ ಶಾಕ್​ ಆದ ಮಹಿಳೆ ರೆಸ್ಟೋರೆಂಟ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ. ಅಂದಹಾಗೆ ಈ ಘಟನೆ ಫಿಲಿಪೈನ್ಸ್​ ರಾಷ್ಟ್ರದಲ್ಲಿ ನಡೆದಿದೆ.

    ಅಲಿಕ್​ ಪೆರೇಜ್​ ಎಂಬ ಮಹಿಳೆ ಫುಡ್​ ಡೆಲಿವರಿ ಪೋರ್ಟಲ್​ನಲ್ಲಿ ಫ್ರೈಡ್​ ಚಿಕನ್​ ಆರ್ಡರ್​ ಮಾಡುತ್ತಾರೆ. ಆರ್ಡರ್​ನಂತೆಯೇ ಚಿಕನ್​ ಡೆಲಿವರಿ ಆಗುತ್ತದೆ. ಬಾಕ್ಸ್​ ತೆರೆದು ಚಿಕನ್ ಅನ್ನು ತುಂಡು ತುಂಡಾಗಿ ಕತ್ತರಿಸಲು ಮುಂದಾಗುತ್ತಾರೆ. ಆದರೆ, ಕತ್ತರಿಸಲು ಆಗುವುದಿಲ್ಲ. ಬಳಿಕ ಪತಿಯನ್ನು ಕರೆಯುತ್ತಾಳೆ. ಅಲ್ಲಿಗೆ ಆಗಮಿಸಿದ ಪತಿ ಇಡೀ ಕವರ್​ ಅನ್ನು ತೆರೆದು ನೋಡಿದಾಗ ಫ್ರೈಡ್​ ಚಿಕನ್​ ಬದಲು ಫ್ರೈಡ್​ ಟವೆಲ್​ ನೋಡಿ ಆಘಾತಕ್ಕೆ ಒಳಗಾಗುತ್ತಾರೆ.

    ಬಳಿಕ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಹಿಳೆ ರೆಸ್ಟೋರೆಂಟ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದರ ಬೆನ್ನಲ್ಲೇ ಮಹಿಳೆಗೆ ಸ್ಪಂದಿಸುವ ರೆಸ್ಟೋರೆಂಟ್​ ನಮ್ಮಿಂದ ತಿಳಿಯದೇ ತಪ್ಪಾಯಿತು ಕ್ಷಮಿಸಿ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡುತ್ತಾರೆ. ಬಳಿಕ ಬೇರೆ ಆರ್ಡರ್​ ಕಳುಹಿಸಿಕೊಟ್ಟು ವಿವಾದಕ್ಕೆ ತೆರೆಎಳೆದಿದ್ದಾರೆ. (ಏಜೆನ್ಸೀಸ್​)

    ಅಂಗಡಿಯಿಂದ ಬಂದ ತಾಯಿ ಮಗಳ ಕೋಣೆ ತೆರೆಯುತ್ತಿದ್ದಂತೆ ಕಾದಿತ್ತು ಶಾಕ್​: ಬೆಚ್ಚಿಬೀಳಿಸುವ ಘಟನೆ ಇದು!

    ಯಾರಿಗೂ ಹೇಳದೆ ಮಕ್ಕಳೊಂದಿಗೆ ಮನೆಯಿಂದ ಹೊರಟ ದಂಪತಿಯ ಬದುಕು ದುರಂತ ಅಂತ್ಯ!

    ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ಬ್ಲೂ ಟಿಕ್​ ತೆಗೆದು ಮರುಸ್ಥಾಪನೆ: ಟ್ವಿಟರ್ ಕೊಟ್ಟ ಕಾರಣ ಹೀಗಿದೆ…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts