More

    ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಮಾಡಿದ ಆರೋಪಿ ಪೊಲೀಸ್​ ವಿಚಾರಣೆಯಲ್ಲಿ ಹೇಳಿದ್ದು ಹೀಗೆ…

    ನವದೆಹಲಿ: ಕಳೆದ ಗುರುವಾರ (ಫೆ.3) ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಯತ್ತ ಬರುತ್ತಿದ್ದ ವೇಳೆ ಎಂಐಎಂಐಎಂ ಮುಖ್ಯಸ್ಥ ಹಾಗೂ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಬೆಂಗಾವಲು ವಾಹನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

    ಕೊಲೆ ಮಾಡುವ ಉದ್ದೇಶದಿಂದಲೇ ಗುಂಡಿನ ದಾಳಿ ನಡೆಸಿದ್ದಾಗಿ ಆರೋಪಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರನೆ. ಆರೋಪಿಯನ್ನು ಸಚಿನ್​ ಎಂದು ಗುರುತಿಸಲಾಗಿದೆ. ಓರ್ವ ದೊಡ್ಡ ರಾಜಕೀಯ ನಾಯಕನಾಗಬೇಕೆಂದು ಬಯಸಿದ್ದ ಆರೋಪಿಗೆ ಓವೈಸಿ ಮಾತು ಕೇಳಿ ತುಂಬಾ ಬೇಸರವಾಗಿತ್ತಂತೆ. ಹೀಗಾಗಿ ಅವರ ಕೊಲೆಗೆ ಸ್ನೇಹಿತ ಶುಭಂ ಜತೆ ಸೇರಿಕೊಂಡು ಸಂಚು ರೂಪಿಸಿದ್ದಾಗಿ ಪ್ರಮುಖ ಆರೋಪಿ ಸಚಿನ್ ಪೊಲೀಸ್​ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

    ನಾನು ಗುಂಡಿನ ದಾಳಿ ಮಾಡಿದಾಗ ಓವೈಸಿ ಮುಂದೆ ಬಾಗಿದರು. ಬಳಿಕ ಕೆಳಗಡೆ ದಾಳಿ ಮಾಡಿದೆ. ಆಗ ಓವೈಸಿಗೆ ಗುಂಡು ತಗುಲಿರಬಹುದೆಂದು ತಿಳಿದು ನಾನು ಅಲ್ಲಿಂದ ಪರಾರಿಯಾದೆ ಎಂದು ಸಚಿನ್​ ಹೇಳಿದ್ದಾನೆ. ಓವೈಸಿ ಮೇಲೆ ದಾಳಿ ಮಾಡಲು ಕಳೆದ 7 ದಿನಗಳಿಂದ ಸಂಚು ರೂಪಿಸಿದ್ದೆವು. ಸಾಮಾಜಿಕ ಜಾಲತಾಣ ಮೂಲಕ ಅವರ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದೆವು. ಅವರು ಅನೇಕ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ, ಸಭೆಯಲ್ಲಿ ತುಂಬಾ ಸಂಖ್ಯೆಯಲ್ಲಿ ಜನರು ಇರುತ್ತಿದ್ದ ಕಾರಣ ದಾಳಿ ಸಾಧ್ಯವಾಗಲಿಲ್ಲ ಎಂದು ಸಚಿನ್​ ತಿಳಿಸಿದ್ದಾನೆ.

    ಗುರುವಾರ ಮೀರತ್​ನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದಾರೆ ಎಂತಾ ಮಾಹಿತಿ ತಿಳಿದಾಗ, ಅವರು ಬರುವ ಮುಂಚೆಯೇ ಟೋಲ್ ಪ್ಲಾಜಾ ಬಳಿ ತೆರಳಿದೆವು. ಓವೈಸಿ ಕಾರು ಬರುತ್ತಿದ್ದಂತೆ ಅವರ ಮೇಲೆ ದಾಳಿ ಮಾಡಿದೆವು ಎಂದಿದ್ದಾರೆ.

    ನಡೆದಿದ್ದೇನು?
    ಗುರುವಾರ (ಫೆ.3) ಪಶ್ಚಿಮ ಉತ್ತರ ಪ್ರದೇಶದ ಚುನಾವಣಾ ಸಮಾವೇಶವನ್ನು ಮುಗಿಸಿ ದೆಹಲಿಗೆ ಮರಳುವಾಗಿ ಓವೈಸಿ ಕಾರಿಗೆ ಗುಂಡಿನ ದಾಳಿ ನಡೆದಿತ್ತು. ಓವೈಸಿ ಅವರಿದ್ದ ವಾಹನವು ರಾಷ್ಟ್ರೀಯ ಹೆದ್ದಾರಿ 24ರ ಹಾಪುರ್-ಗಾಜಿಯಾಬಾದ್ ಸ್ಟ್ರೆಚ್‌ನಲ್ಲಿರುವ ಛಿಜರ್ಸಿ ಟೋಲ್ ಪ್ಲಾಜಾ ಬಳಿ ಸಂಜೆ 6 ಗಂಟೆ ಸುಮಾರಿಗೆ ಬಂದಾಗ ಘಟನೆ ನಡೆದಿದ್ದು, ಬಳಿಕ ಇಬ್ಬರು ಶಂಕಿತರನ್ನು ಬಂಧಿಸಲಾಗಿತ್ತು.

    ಈ ಘಟನೆಯ ಬಳಿಕ ಓವೈಸಿ ಅವರಿಗೆ ಝಡ್​ ಶ್ರೇಣಿಯ ಭದ್ರತೆಯನ್ನು ಸರ್ಕಾರ ನೀಡಿತು. ಆದರೆ, ಅದನ್ನು ಓವೈಸಿ ಅವರು ನಿರಾಕರಿಸಿದ್ದಾರೆ. ನಾನು ಎಂದಿಗೂ ಭದ್ರತೆಯನ್ನು ಬಯಸಿಲ್ಲ ಮತ್ತು ಎಂದಿಗೂ ಬಯಸುವುದಿಲ್ಲ. ಏಕೆಂದರೆ, ಪ್ರತಿಯೊಬ್ಬರ ಜೀವವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದರು. ಈ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಓವೈಸಿ ಸ್ಪಷ್ಟಪಡಿಸಿದ್ದರು. ಅಲ್ಲದೆ, ಘಟನೆಯ ಸ್ವತಂತ್ರ ತನಿಖೆಗೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದು, ಈ ದಾಳಿಯ ಹಿಂದೆ ‘ಮಾಸ್ಟರ್ ಮೈಂಡ್’ ಇರುವ ಬಗ್ಗೆ ಆರೋಪ ಮಾಡಿದ್ದರು. (ಏಜೆನ್ಸೀಸ್​)

    ದುಷ್ಕರ್ಮಿಗಳಿಂದ ಗುಂಡಿನ ದಾಳಿಯ ಬೆನ್ನಲ್ಲೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ Z ಕೆಟಗರಿ ಭದ್ರತೆ

    ಮುದ್ದಹನುಮೇಗೌಡ ಬಿಜೆಪಿಗೆ ಹೋಗ್ತಾರಾ? ಈ ಪ್ರಶ್ನೆಗೆ ಉತ್ತರಿಸುತ್ತಲೇ ಕಾಂಗ್ರೆಸ್​ನಿಂದ ನನ್ಗೆ ಅನ್ಯಾಯ ಆಗಿದೆ ಎಂದ ಎಸ್​ಪಿಎಂ

    ಅನುಮಾನಾಸ್ಪದವಾಗಿ ಓಡಾಡುತ್ತಿದೆ ಅಂತಾ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು..!

    ಪೊಲೀಸ್ ಗೌರವಗಳೊಂದಿಗೆ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅಂತ್ಯಕ್ರಿಯೆಗೆ ಸರ್ಕಾರದ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts