More

    ಮುದ್ದಹನುಮೇಗೌಡ ಬಿಜೆಪಿಗೆ ಹೋಗ್ತಾರಾ? ಈ ಪ್ರಶ್ನೆಗೆ ಉತ್ತರಿಸುತ್ತಲೇ ಕಾಂಗ್ರೆಸ್​ನಿಂದ ನನ್ಗೆ ಅನ್ಯಾಯ ಆಗಿದೆ ಎಂದ ಎಸ್​ಪಿಎಂ

    ತುಮಕೂರು: ನನಗೆ ಬಿಜೆಪಿಯಿಂದ ಆಹ್ವಾನ ಬಂದಿದೆ ಅನ್ನೋದು ಸುಳ್ಳು. ನನ್ನ ಕೆಲ ಶತ್ರುಗಳು ಈ ರೀತಿಯ ವದಂತಿ ಹಬ್ಬಿಸುತ್ತಿದ್ದಾರಷ್ಟೆ. ನಾನು ಕಾಂಗ್ರೆಸ್​ನಲ್ಲೇ ಇರುವೆ. ಕುಣಿಗಲ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ಗ್ಯಾರಂಟಿ ಎಂದು ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಸ್ಪಷ್ಟಪಡಿಸಿದರು.

    ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಗಿಸುವ ನಿಟ್ಟಿನಲ್ಲಿ ಬಿಜೆಪಿ ಕಸರತ್ತು ಆರಂಭಿಸಿದೆ. ಕುಣಿಗಲ್​ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕೆ ಇಳಿಸುವುದು ಹಾಗೂ ಒಂದು ವೇಳೆ ಈ ಚುನಾವಣೆಯಲ್ಲಿ ಪರಾಭವಗೊಂಡರೆ ಬೆಂ.ಗ್ರಾಮಾಂತರ ಲೋಕಸಭೆ ಚುನಾವಣೆಗೆ ಟಿಕೆಟ್​ ಕೊಡಬೇಕು ಎಂದು ಷರತ್ತು ಹಾಕಲಾಗಿದೆ ಎಂಬ ಚರ್ಚೆ ಕ್ಷೇತ್ರದಲ್ಲಿ ಶುರುವಾಗಿದೆ. ಈ ಕುರಿತು ಹೆಬ್ಬೂರಿನಲ್ಲಿ ಪ್ರತಿಕ್ರಿಯಿಸಿದ ಎಸ್​ಪಿಎಂ, ಇದೆಲ್ಲವೂ ವದಂತಿ ಎಂದಿದ್ದಾರೆ. ನೂರಕ್ಕೇ ನೂರು ನಾನು ಕುಣಿಗಲ್​ನಿಂದ ಸ್ಪರ್ಧಿಸೋದು ಖಚಿತ. ಇದರಲ್ಲಿ ಅನುಮಾನ ಬೇಡವೇ ಬೇಡ. ಕುಣಿಗಲ್ ಕ್ಷೇತ್ರದಿಂದ ನನಗೆ ಕಾಂಗ್ರೆಸ್​ ಟಿಕೆಟ್ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಲೋಕಸಭಾ ಚುನಾವಣೆಯಲ್ಲಿ ನನಗೆ ಅನ್ಯಾಯ ಆಗಿತ್ತು. ನನಗೆ ನ್ಯಾಯ ಒದಗಿಸಿಕೊಡುವುದಾಗಿ ರಾಹುಲ್ ಗಾಂಧಿ, ವೇಣುಗೋಪಾಲ್ ಭರವಸೆ ಕೊಟ್ಟಿದ್ರು. ರಾಜ್ಯಸಭೆ ಸದಸ್ಯ ಮಾಡೋದಾಗಿ ಹೇಳಿದ್ರು. ಹಾಲಿ ಶಾಸಕ ಡಾ.ರಂಗನಾಥ್ ಇದ್ದರೂ ನನಗೇ ಟಿಕೆಟ್ ಸಿಗಲಿದೆ ಎಂದರು.

    ಮುದ್ದಹನುಮೇಗೌಡ ಬಿಜೆಪಿಗೆ ಹೋಗ್ತಾರಾ? ಈ ಪ್ರಶ್ನೆಗೆ ಉತ್ತರಿಸುತ್ತಲೇ ಕಾಂಗ್ರೆಸ್​ನಿಂದ ನನ್ಗೆ ಅನ್ಯಾಯ ಆಗಿದೆ ಎಂದ ಎಸ್​ಪಿಎಂ

    ನನ್ನ ಹುಟ್ಟೂರು, ನಾನು ವಿದ್ಯಾಭ್ಯಾಸ ಮಾಡಿದ ಊರು, ಎರಡು ಬಾರಿ ಶಾಸಕನಾದ ಕ್ಷೇತ್ರ ಕುಣಿಗಲ್​. ಈ ಕ್ಷೇತ್ರದಲ್ಲೇ ನಾನು ಸ್ಪರ್ಧಿಸುವೆ. ಕುಣಿಗಲ್ ಕ್ಷೇತ್ರದ ಜನರೂ ನನ್ನ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಲಿ ಶಾಸಕ ಡಾ.ರಂಗನಾಥ್​ ಅವರು ಕೆಪಿಸಿಸಿ ಅಧ್ಯಕ್ಷರ ಸಂಬಂಧಿ. ಅವರನ್ನು ಬಿಟ್ಟು ನನಗೆ ಟಿಕೆಟ್ ಕೊಡುತ್ತಾರಾ ಎಂಬ ಪ್ರಶ್ನೆ ಇದೆ. ಆದರೆ, ನಾನು ಹಾಲಿ ಸಂಸದನಾಗಿದ್ದಾಗ ಯಾಕೆ ನನಗೆ ಟಿಕೆಟ್ ತಪ್ಪಿಸಿದ್ರು. ಆಗ ನನ್ನ ರಕ್ಷಣೆಗೆ ಯಾಕೆ ಯಾರೂ ಬಂದಿಲ್ಲ. ಪಕ್ಷದಲ್ಲಿ ಎಲ್ಲಿದೆ ನ್ಯಾಯ? ಕಳೆದ ಬಾರಿಯ 10 ಜನ ಕಾಂಗ್ರೆಸ್ ಸಂದರಲ್ಲಿ ನನಗೆ ಮಾತ್ರ ಅನ್ಯಾಯ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದಿಂದ ತಪ್ಪಾಗಿದೆ. ಜನರ ಭಾವನೆ ಅರ್ಥಮಾಡಿಕೊಂಡು ಅಭ್ಯರ್ಥಿಗಳನ್ನು ಹಾಕುವಲ್ಲಿ ಕಾಂಗ್ರೆಸ್ ಎಡವಿದೆ. ಪರಿಣಾಮ ರಾಜ್ಯದಲ್ಲಿದ್ದ 10 ಸಂಸದರ ಪೈಕಿ ಈಗ ಒಂದು ಸ್ಥಾನವಷ್ಟೇ ಉಳಿದಿದೆ. ನಾನು ನನ್ನ ಸ್ಥಾನ ತ್ಯಾಗ ಮಾಡುವಾಗ ರಾಜ್ಯಸಭಾ ಸದಸ್ಯರಾಗಿ ಮಾಡೋದಾಗಿ ರಾಹುಲ್ ಗಾಂಧಿ ಹೇಳಿದ್ರು. ಎರಡು ವಿಧಾನ ಪರಿಷತ್ ಸ್ಥಾನ ಬಂತು, ಅದನ್ನೂ‌ ಕೊಟ್ಟಿಲ್ಲ. ನನಗೆ ಪಕ್ಷದಿಂದ ಅನ್ಯಾಯವಾಗಿದೆ. ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಸಿಗದೇ ಇದ್ದರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಳಿ ಹೋಗುವೆ ಎಂದು ಎಸ್​ಪಿಎಂ ಹೇಳಿದರು.

    ಲೋಕಸಭೆಗೆ ಟಿಕೆಟ್ ಕೈ ತಪ್ಪಿದ್ದರಿಂದ ನನಗೆ ಅಸಮಾಧಾನ ಇದೆ. ಅಸಮಾಧಾನ ಇಲ್ಲ ಅಂದರೆ ಅದು ನನ್ನ ಆತ್ಮ ವಂಚನೆ ಆಗುತ್ತದೆ. ನನನ್ನು ಬಿಜೆಪಿಗೆ ಬರುವಂತೆ ಸ್ವಾಗತಿಸಿದ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ಧನ್ಯವಾದ. ಹಾಗೇ ಅವರೂ ಕಾಂಗ್ರೆಸ್​ಗೆ ಬರೋದಾದರೆ ನಾನು ಸ್ವಾಗತಿಸುವೆ ಎಂದರು.

    ತುಮಕೂರು ಲೋಕಸಭೆ ಚುನಾವಣೆಯಲ್ಲಿ ಎಸ್​ಪಿಎಂಗೆ ಟಿಕೆಟ್​ ಕೈ ತಪ್ಪಿದ್ದರ ರಹಸ್ಯ ಬಯಲು! ಡಿಕೆ ಬ್ರದರ್ಸ್​ ವಿರುದ್ಧ ಆಕ್ರೋಶ

    ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಹೊರದಬ್ಬಿದ ಕಾಲೇಜು ಆಡಳಿತ ಮಂಡಳಿ

    ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts