More

    ಅನುಮಾನಾಸ್ಪದವಾಗಿ ಓಡಾಡುತ್ತಿದೆ ಅಂತಾ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು..!

    ವಾಷಿಂಗ್ಟನ್​: ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುವುದನ್ನು ನೋಡಿದ್ದೇವೆ. ಆದರೆ, ಅಮೆರಿಕದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಅಲ್ಲಿನ ಪೊಲೀಸರು ಕೋಳಿಯನ್ನು ವಶಕ್ಕೆ ಪಡೆದಿದ್ದಾರೆ.

    ಅಮೆರಿಕದ ಸೇನಾ ಕಚೇರಿ ಇರುವ ಪೆಂಟಗನ್​ನ ಭದ್ರತಾ ಏರಿಯಾ ಸುತ್ತ ಕೋಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ ಅದನ್ನು ವಶಕ್ಕೆ ಪಡೆದಿದ್ದಾರೆಂದು ಅಮೆರಿಕದ ಪ್ರಾಣಿ ದಯಾ ಸಂಘವೊಂದು ಮಾಹಿತಿ ನೀಡಿದೆ. ಆ ಕೋಳಿ ಎಲ್ಲಿಂದ ಬಂತು? ಪೆಂಟಗನ್‌ ಏರಿಯಾ ಒಳಗೆ ಹೇಗೆ ಬಂತು ಎಂದು ಅಧಿಕಾರಿಗಳು ಹೇಳಿಲ್ಲ.

    ಕೋಳಿಯನ್ನು ಹೆನ್ನಿ ಪೆನ್ನಿ ಎಂದು ಕರೆಯಲಾಗುತ್ತಿದೆ. ಸದ್ಯ ಆ ಕೋಳಿಯನ್ನು ವರ್ಜೀನಿಯಾದಲ್ಲಿ ಕೋಳಿ ಫಾರ್ಮ್ ಹೊಂದಿರುವ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಏನೇ ಆಗಲಿ ಇಲ್ಲಿಯವರೆಗೆ ಅನುಮಾನದ ಮೇಲೆ ಜನರನ್ನು ಬಂಧಿಸಿರುವುದನ್ನು ನೋಡಿದ್ದೇವೆ. ಆದರೆ ಕೋಳಿಯನ್ನು ಈ ರೀತಿ ಬಂಧಿಸಿರುವುದು ಇದೇ ಮೊದಲು ಅನಿಸುತ್ತದೆ. (ಏಜೆನ್ಸೀಸ್​)

    ನ್ಯೂಯಾರ್ಕ್‌ ಶಾಲೆಗಳಲ್ಲಿ ಇನ್ಮುಂದೆ ಸಸ್ಯಾಹಾರ ಭೋಜನಕ್ಕೆ ಉತ್ತೇಜನ: ಶುರುವಾಯ್ತು ‘ವೆಗಾನ್‌ ಫ್ರೈಡೇ’

    ಪೊಲೀಸ್ ಗೌರವಗಳೊಂದಿಗೆ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅಂತ್ಯಕ್ರಿಯೆಗೆ ಸರ್ಕಾರದ ಆದೇಶ

    ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts