More

    ಧೋನಿ, ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ: ಫ್ಯಾನ್ಸ್​ ಪ್ರಶ್ನೆಗೆ ಸೂರ್ಯಕುಮಾರ್​ ಸೂಪರ್​ ಉತ್ತರ ಇಲ್ಲಿದೆ….

    ನವದೆಹಲಿ: ಉತ್ತಮ ಪ್ರದರ್ಶನದೊಂದಿಗೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ಅದ್ಭುತ ಆರಂಭ ಕಂಡ ಸೂರ್ಯಕುಮಾರ್ ಯಾದವ್​, ಶನಿವಾರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ​ ಸಭೆ ನಡೆಸಿದರು.

    ಅಭಿಮಾನಿಗಳು ಸೂರ್ಯಕುಮಾರ್​ಗೆ ಸಾಕಷ್ಟು ವಿಭಿನ್ನ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಈ ಸಂದರ್ಭದಲ್ಲಿ ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ಮತ್ತು ಹಾಲಿ ನಾಯಕ ವಿರಾಟ್​ ಕೊಹ್ಲಿ ಬಗ್ಗೆ ಕೇಳಿಬಂದ ಪ್ರಶ್ನೆಗಳಿಗೆ ಸೂರ್ಯಕುಮಾರ್​ ನೀಡಿದ ಉತ್ತರ ಎಲ್ಲರ ಮನಸ್ಸು ಗೆದ್ದಿದೆ.

    ಪ್ರಶ್ನೋತ್ತರ ವೇಳೆ ಧೋನಿ ಮತ್ತು ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಅಭಿಮಾನಿಗಳು ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಸೂರ್ಯಕುಮಾರ್​, ಧೋನಿ ಅವರನ್ನು ಲೆಜೆಂಡ್​ ಅಂತಲೂ ಮತ್ತು ಕೊಹ್ಲಿ ಅವರನ್ನು ಸ್ಫೂರ್ತಿಯಂತಲೂ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿರಿ: ಪೊಲೀಸ್​ ಕಮಿಷನರ್​ಗೇ ಆವಾಜ್ ಹಾಕಿದ ಭೂಪ; ಕಾರಲ್ಲಿ ಬಂದು ಬಿಪಿಎಲ್ ಕಾರ್ಡ್ ತೋರಿಸಿದ ಲೇಡಿ

    ಇದೇ ವೇಳೆ ತಮ್ಮ ಮುಂಬೈ ತಂಡದ ನಾಯಕ ರೋಹಿತ್​ ಶರ್ಮಾರ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಕೇಳಿದಾಗ “ಹಿಟ್​ಮ್ಯಾನ್​” ಎಂದು ಉತ್ತರಿಸಿದ್ದಾರೆ. ತಮ್ಮ ಜೀವನದ ಉತ್ತಮ ಇನ್ನಿಂಗ್ಸ್​ ಬಗ್ಗೆ ಮಾತನಾಡಿದ ಸೂರ್ಯಕುಮಾರ್​, ಇಂಗ್ಲೆಂಡ್​ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡಿದ ಕ್ಷಣವನ್ನು ಸ್ಮರಿಸಿದರು.

    ಇನ್ನು ಕ್ರಿಕೆಟ್​ ವಿಚಾರಕ್ಕೆ ಬರುವುದಾದರೆ, ಮುಂಬೈ ಇಂಡಿಯನ್ಸ್​ ತಂಡದ ಪರ ಸೂರ್ಯಕುಮಾರ್​ ನೀಡಿದ ಅದ್ಭುತ ಪ್ರದರ್ಶನ ಆಯ್ಕೆಗಾರರ ಗಮನ ಸೆಳೆಯಿತು. ಹೀಗಾಗಿಯೇ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಸೀಮಿತ ಓವರ್​ಗಳ ಸರಣಿಗೆ ಸೂರ್ಯಕುಮಾರ್​ ಆಯ್ಕೆಯಾದರು.

    ಐದು ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯವಾಡಿದ ಸೂರ್ಯಕುಮಾರ್​ ಎರಡು ಇನ್ನಿಂಗ್ಸ್​ನಲ್ಲಿ 44.50 ರನ್​ ಸರಾಸರಿಯಲ್ಲಿ 89 ರನ್​ ಕಲೆಹಾಕಿದರು. ಏಕದಿನ ಸರಣಿಯಲ್ಲೂ ಸೂರ್ಯಕುಮಾರ್​ ಹೆಸರು ಕೇಳಿಬಂದಿತ್ತು. ಆದರೆ, ಒಂದೂ ಪಂದ್ಯವನ್ನು ಅವರು ಆಡಲಿಲ್ಲ. (ಏಜೆನ್ಸೀಸ್​)

    ಯುವಕನ ಮೊಬೈಲ್​ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಜನರ ಆಕ್ರೋಶಕ್ಕೆ ಡಿಸಿ ಉತ್ತರ ಹೀಗಿದೆ…

    ಒಟಿಟಿಯಲ್ಲಿ ಪ್ರಣೀತಾ ಹಂಗಾಮಾ; ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಚೊಚ್ಚಲ ಬಾಲಿವುಡ್ ಚಿತ್ರ

    ಮಾಡುವ ನೀಡುವ ಕಾಯುವ ನಿಜಗುಣವಿದ್ದೆಡೆ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಧನಂಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts