More

    ಪೊಲೀಸ್​ ಕಮಿಷನರ್​ಗೇ ಆವಾಜ್ ಹಾಕಿದ ಭೂಪ; ಕಾರಲ್ಲಿ ಬಂದು ಬಿಪಿಎಲ್ ಕಾರ್ಡ್ ತೋರಿಸಿದ ಲೇಡಿ

    ಬೆಂಗಳೂರು: ಲಾಕ್​ಡೌನ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಿಳಿಯುವ ವಾಹನ ಸವಾರರು ಪೊಲೀಸರು ತಪಾಸಣೆ ನಡೆಸುವ ತಪಾಸಣೆ ವೇಳೆ ಕುಂಟುನೆಪ ಹೇಳುವುದು ಮುಂದುವರಿದಿದೆ.

    ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೆಬ್ಬಾಳದ ಸಿಬಿಐ ಜಂಕ್ಷನ್ ಬಳಿ ತಪಾಸಣೆ ಮಾಡುತ್ತಿದ್ದ ವೇಳೆ ಸ್ಕೂಟರ್​ನಲ್ಲಿ ಬಂದ ಯುವಕನನ್ನು ತಡೆದಿದ್ದಾರೆ. ಆಕ್ರೋಶಗೊಂಡ ಯುವಕ, ‘ಎಟಿಎಂನಿಂದ ಹಣ ತರಲು ಬಂದಿದ್ದೆ. ನಾನು ವಿದ್ಯಾರ್ಥಿಯಾಗಿದ್ದು, ನೀವು ಟಾರ್ಚರ್ ಕೊಡುತ್ತಿದ್ದೀರಿ’ ಎಂದಿದ್ದಾನೆ. ವಾಹನ ಜಪ್ತಿ ಮಾಡಿದಾಗ, ‘ದಂಡ ಕಟ್ಟಲು ನನ್ನ ಬಳಿ ಹಣವಿಲ್ಲ. ವೇತನ ಬಂದಿಲ್ಲ’ ಎಂದಿದ್ದ. ಕೊನೆಗೆ ‘ನಾನು ಸಿಎಂ ಆಪ್ತ. ನಾನು ಮನಸ್ಸು ಮಾಡಿದರೆ ಅಷ್ಟೇ’ ಎಂದು ಕಮಿಷನರ್ ಮುಂದೆಯೇ ಆವಾಜ್ ಹಾಕಿದ್ದಾನೆ. ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಕಮಿಷನರ್ ತಪಾಸಣೆ ನಡೆಸುತ್ತಿದ್ದ ವೇಳೆ ಮಾಸ್ಕ್ ಧರಿಸದೆ ಕಾರಿನಲ್ಲಿ ಬಂದ ಶಿಫಾ ಆಸ್ಪತ್ರೆಯ ಮ್ಯಾನೇಜರ್​ನನ್ನು ಕಾರಿನಿಂದ ಇಳಿಸಿ ದಂಡ ವಿಧಿಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

    ರಿಜಿಸ್ಟ್ರೇಷನ್ ನಂಬರನ್ನೇ ತೆಗೆದ!: ಸದಾಶಿವನಗರದ ಸ್ಯಾಂಕಿ ಸಿಗ್ನಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಸಿಗ್ನಲ್ ಜಂಪ್ ಮಾಡಿದ್ದ ಬಿಎಂಡಬ್ಲ್ಯು ಕಾರು ತಡೆದಿದ್ದರು. ದಾಖಲೆ ಪರಿಶೀಲಿಸಿದಾಗ ಆರ್​ಸಿ ಬುಕ್​ನಲ್ಲಿರುವ ನಂಬರ್, ಕಾರಿನ ನಂಬರ್ ಬೇರೆ ಬೇರೆಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಸಂಖ್ಯಾಶಾಸ್ತ್ರವನ್ನು ಅತಿಯಾಗಿ ನಂಬುತ್ತಿದ್ದ ಈತ ಯಾರೋ ಹೇಳಿದ ಮಾತು ಕೇಳಿ ನಂಬರ್ ಪ್ಲೇಟ್​ನಲ್ಲಿ ಒಂದು ನಂಬರ್ ತೆಗೆದಿದ್ದ ಸಂಗತಿ ಗೊತ್ತಾಗಿದೆ.

    ಬಿಪಿಎಲ್ ಕಾರ್ಡ್ ತೋರಿಸಿದ ಲೇಡಿ: ನೃಪತುಂಗ ರಸ್ತೆಯಲ್ಲಿ ಫೋರ್ಡ್ ಕಾರಿನಲ್ಲಿ ಬಂದ ಮಹಿಳೆಯನ್ನು ಪೊಲೀಸರು ತಡೆದಿದ್ದರು. ಆಕೆ ರೇಷನ್ ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದು ಬಿಪಿಎಲ್ ಕಾರ್ಡ್ ತೋರಿಸಿದ್ದಾಳೆ. ಮಹಿಳೆಯ ಉತ್ತರ ಕೇಳಿ ಅಚ್ಚರಿಗೆ ಒಳಗಾದ ಪೊಲೀಸರು, ಕೊನೆಗೆ ಕಾರು ಸೀಜ್ ಮಾಡಿದ್ದಾರೆ. ಮಹಿಳೆ ಕಣ್ಣೀರು ಹಾಕಿ ವಾಹನ ಬಿಡುವಂತೆ ಗೋಗರೆದಿದ್ದಾಳೆ.

    ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

    ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ದೋಚಿದ ದುರುಳರು; ಹೆದರಿದ ವ್ಯಾನ್ ಚಾಲಕನನ್ನು ಕೊಂದೇ ಬಿಟ್ಟರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts