More

    ಎರಡು ಬಾರಿ ಸಮನ್ಸ್​ ನೀಡಿದ್ರು ವಿಚಾರಣೆಗೆ ಗೈರು: ಸಂಸದ ಸಂಜಯ್​ ರಾವತ್​ ಮನೆ ಮೇಲೆ ಇಡಿ ದಾಳಿ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಸಮನ್ಸ್​ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಶಿವಸೇನಾ ಸಂಸದ ಸಂಜಯ್​ ರಾವತ್ ಅವರ ಮುಂಬೈ​ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದಾರೆ.

    ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಸದ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಮೊದಲ ಸಮನ್ಸ್​ ವೇಳೆ ಕಾರಣ ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಬಳಿಕ ರಾವತ್​​ ಅವರಿಗೆ ಎರಡನೇ ಸಮಸ್ನ ನೀಡಲಾಗಿತ್ತು. ಆಗಲೂ ವಿಚಾರಣೆಗೆ ಹಾಜರಾಗದ ಕಾರಣ, ಇದೀಗ ಇಡಿ ಅಧಿಕಾರಿಗಳೇ ರಾವತ್​​ ಅವರನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದೆ.

    ಇಂದು ಬೆಳಗ್ಗೆ ಮುಂಬೈನ ಪೂರ್ವ ಉಪನಗರದ ಬಂಡಪ್‌ನಲ್ಲಿರುವ ರಾವತ್ ಅವರ ಮನೆಗೆ ಭೇಟಿ ನೀಡಿದ ತನಿಖಾ ಸಂಸ್ಥೆಯ ಅಧಿಕಾರಿಗಳ ಜೊತೆ ಸಿಆರ್‌ಪಿಎಫ್ ತಂಡವು ಇದೆ.

    ಮುಂಬೈನ ಪತ್ರಾ ಚಾಲ್‌ನ ಮರು-ಅಭಿವೃದ್ಧಿಯಲ್ಲಿ ನಡೆದಿರುವ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯವು 60 ವರ್ಷದ ರಾವತ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ರಾವತ್​ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ರಾಜಕೀಯ ದ್ವೇಷದ ಕಾರಣ ಅವರನ್ನು ಟಾರ್ಗೆಟ್​ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಅಯ್ಯೋ ದೇವರೆ ಇದು ನೀವಾ? ಅಲ್ಲು ಅರ್ಜುನ್​ ನೋಡಿ ಒಂದು ಕ್ಷಣ ಕನ್ಫ್ಯೂಸ್​ ಆದ ಕಿರಿಕ್​ ಬ್ಯೂಟಿ!

    ಜಾರ್ಖಂಡ್​ನ ಮೂವರು ಕಾಂಗ್ರೆಸ್​ ಶಾಸಕರಿದ್ದ ಕಾರಿನಲ್ಲಿ ರಾಶಿ ರಾಶಿ ಹಣ ವಶಕ್ಕೆ ಪಡೆದ ಬಂಗಾಳದ ಪೊಲೀಸರು!

    ಪುಸ್ತಕ ಬರೀತಾರಂತೆ ಶ್ವೇತಾ; ಜನರಿಗೆ ಸ್ಫೂರ್ತಿ ತುಂಬಲು ಹೊಸ ಪುಸ್ತಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts