More

    ಸೂರತ್​ನಿಂದ ಅಸ್ಸಾಂಗೆ ಹಾರಿದ 40 ಶಿವಸೇನಾ ಶಾಸಕರು: ಶಿಂಧೆ ಬಾಯಲ್ಲಿ ಬಾಳ್ ಠಾಕ್ರೆ ಹಿಂದುತ್ವ ಘೋಷಣೆ

    ಗುವಾಹಟಿ: ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ ಸರ್ಕಾರದ ವಿರುದ್ಧ ಬಂಡೆದ್ದಿರುವ 40 ಶಿವಸೇನಾ ಶಾಸಕರು ಅವರ ನಾಯಕ ಏಕನಾಥ್​ ಶಿಂಧೆ ಜೊತೆಯಲ್ಲಿ ಈ ಹಿಂದೆ ಗುಜರಾತ್​ನ ಸೂರತ್​ನಲ್ಲಿ ಬೀಡುಬಿಟ್ಟಿದ್ದರು. ಇದೀಗ ಅಸ್ಸಾಂನ ಗುವಾಹಟಿಗೆ ಎಲ್ಲರು ತಲುಪಿದ್ದು, ಅಸ್ಸಾಂನ ಆಡಾಳಿತಾರೂಢ ಬಿಜೆಪಿ ಪಕ್ಷದ ನಾಯಕರು ಬಂಡಾಯ ಶಾಸಕರಿಗೆ ಆತಿಥ್ಯವನ್ನು ನೀಡಿದ್ದಾರೆ.

    ಇಂದು ಸೂರತ್​ ಹೋಟೆಲ್​ ಬಿಟ್ಟು 7 ಗಂಟೆಗೆ ಗುವಾಹಟಿಗೆ ತಲುಪಿದ ಏಕನಾಥ್​ ನೇತೃತ್ವದ ಬಂಡಾಯ ಬಂಡಾಯ ತಂಡವನ್ನು ಬಿಜೆಪಿ ನಾಯಕರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಏಕನಾಥ್​ ಶಿಂದೆ, ಒಟ್ಟು 40 ಶಿವಸೇನಾ ಶಾಸಕರು ಇಲ್ಲಿದ್ದೇವೆ. ನಾನು ಬಾಳಾಸಾಹೇಬ್​ ಠಾಕ್ರೆ ಅವರ ಹಿಂದುತ್ವವನ್ನು ಮುನ್ನಡೆಸುಕೊಂಡು ಹೋಗುತ್ತೇವೆ ಎಂದಿದ್ದಾರೆ.

    ಇದಕ್ಕೂ ಮುನ್ನ ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಂಧೆ, ನಾವು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ಬಿಟ್ಟಿಲ್ಲ ಮತ್ತು ಅದನ್ನು ಬಿಡುವುದಿಲ್ಲ, ನಾವು ಬಾಳಾಸಾಹೇಬ್ ಅವರ ಹಿಂದುತ್ವವನ್ನು ಅನುಸರಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

    ಶಿವಸೇನಾ ಶಾಸಕರನ್ನು ಬರಮಾಡಿಕೊಂಡ ಬಿಜೆಪಿ ಶಾಸಕ ಸುಶಾಂತ ಬೊರ್ಗೊಹೈನ್, ತಾವು ವೈಯಕ್ತಿಕ ಸಂಬಂಧ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿರುವುದಾಗಿ ಹೇಳಿದರು. ಅಸ್ಸಾಂಗೆ ಬಂದಿರುವ ಶಿವಸೇನೆಯ ಒಟ್ಟು ಶಾಸಕರ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಕೇಳಿದಾಗ, ಅವರು ಲೆಕ್ಕ ಹಾಕಿಲ್ಲ ಎಂದು ಹೇಳಿದರು.

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬೇಕು ಎಂಬುದು ನನ್ನ ಮತ್ತು ಶಿವಸೇನೆ ಶಾಸಕರ ಆಶಯವಾಗಿದೆ, ನಾನು ಪಕ್ಷವನ್ನು ತೊರೆದಿಲ್ಲ ಎಂದು ಶಿಂಧೆ ಇದಕ್ಕೂ ಮುನ್ನವೇ ಮಾಧ್ಯಮವೊಂದಕ್ಕೆ ತಿಳಿಸಿದ್ದರು. (ಏಜೆನ್ಸೀಸ್​)

    ಅಕ್ರಮ ಸಂಬಂಧಕ್ಕೆ ಬಿತ್ತು ಎರಡು ಹೆಣ: ಪ್ರೇಯಸಿ ಶವ ಹೂತಿಟ್ಟು ನೇಣಿಗೆ ಶರಣಾದ ಪ್ರಿಯಕರ

    VIDEO| ಮನೆ ಹೊರಗಿಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಪ್ರತ್ಯಕ್ಷ: ಅಪಾಯದಿಂದ ಪಾರು

    ಜೇಬಿನಿಂದ ಕೇವಲ 50 ರೂಪಾಯಿ ತೆಗೆದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts