More

    VIDEO| ಮನೆ ಹೊರಗಿಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಪ್ರತ್ಯಕ್ಷ: ಅಪಾಯದಿಂದ ಪಾರು

    ಮೈಸೂರು: ಮನೆಯ ಹೊರಗೆ ಇಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಕಾಣಿಸಿಕೊಂಡು ಅಲ್ಪದಲ್ಲಿಯೇ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಹೆಬ್ಬಾಳ್ ಎರಡನೇ ಹಂತದಲ್ಲಿ ಈ ಘಟನೆ ನಡೆದಿದೆ. ನಾಗರಹಾವು ಮಕ್ಕಳ ಶೂಸ್​ ಒಳಗೆ ಅಡಗಿ ಕುಳಿತಿತ್ತು. ಎಂದಿನಂತೆ ಶಾಲೆಗೆ ತೆರಳಲು ಶೂಸ್​ ಹಾಕಿಕೊಳ್ಳಲು ಹೋದಾಗ ನಾಗರಹಾವು ಕಾಣಿಸಿಕೊಂಡಿದೆ. ಒಂದು ವೇಳೆ ಹಾವು ಕಾಣಿಸದೇ, ಶೂಸ್​ ಪರಿಶೀಲಿಸದೇ ಹಾಕಿಕೊಂಡಿದ್ದರೆ, ಪ್ರಾಣಕ್ಕೆ ಕುತ್ತು ಬರುತ್ತಿತ್ತು.

    ಹಾವು ನೋಡಿ ಜಾಗೃತರಾದ ಮನೆಯವರು ತಕ್ಷಣ ಮೈಸೂರಿನ ಉರಗ ರಕ್ಷಕ ಸ್ನೇಕ್ ಶ್ಯಾಮ್​ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಮ್ ಹಾವನ್ನು ರಕ್ಷಣೆ ಮಾಡಿದ್ದಾರೆ.

    ಮಳೆಗಾಲದಲ್ಲಿ ಹಾವುಗಳು ಹೊರ ಬರುವ ಸಮಯ ಇದಾಗಿದೆ. ಬೆಚ್ಚನೆಯ ವಾತಾವರಣಕ್ಕಾಗಿ ಹೊರ ಬರುತ್ತವೆ. ಮನೆಯ ಮುಂಭಾಗ ಹಾವುಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳ ಶೂಸ್​ಗಳು ಸೇರಿದಂತೆ ಹಲವು ವಸ್ತುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆ ಎಚ್ಚರದಿಂದರಲೂ ಸ್ನೇಕ್ ಶ್ಯಾಮ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಒಮ್ಮೆ ಒಬ್ಬ ದುಷ್ಟ ರಾಜನಿದ್ದನು… ಟ್ವೀಟ್​ ಮಾಡಿದ ಬೆನ್ನಲ್ಲೇ ಡಿಲೀಟ್​ ಮಾಡಿದ್ದೇಕೆ ಅಮೃತಾ ಫಡ್ನವೀಸ್?​

    ಜೇಬಿನಿಂದ ಕೇವಲ 50 ರೂಪಾಯಿ ತೆಗೆದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ ಯುವಕ

    ಅಗ್ನಿಪಥ ವಾಪಸಿಲ್ಲ, ಹಿಂಸೆ ಸಹಿಸಲ್ಲ: ಅಜಿತ್ ದೋವಲ್ ಖಡಕ್ ಎಚ್ಚರಿಕೆ | ಮುಂದುವರಿದ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts