More

    ಈಜಿ಼ ಬೈ ಸ್ಟೋರ್​ನಿಂದ ಮಕ್ಕಳ ಫ್ಯಾನ್ಸಿ ಡ್ರೆಸ್​ ಸ್ಪರ್ಧೆ ಆಯೋಜನೆ: ನೋಂದಣಿ ಉಚಿತ, ಹೆಚ್ಚಿನ ಮಾಹಿತಿ ಇಲ್ಲಿದೆ…

    ಉಡುಪಿ: ಈಜಿ಼ ಬೈ (Easybuy) ಸ್ಟೋರ್​​ 5 ರಿಂದ 14ವರ್ಷದ ವಯಸ್ಸಿನ ಮಕ್ಕಳಿಗೆ ಉಚಿತ ಫ್ಯಾನ್ಸಿ ಡ್ರೆಸ್​ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾಗುವ ಮಕ್ಕಳಿಗೆ ಆಕರ್ಷಕ ಬಹುಮಾನ ಸಹ ಸಿಗಲಿದೆ.

    ಈ ಸ್ಪರ್ಧೆಯು ಅಕ್ಟೋಬರ್​ 22ರಂದು ಮಧ್ಯಾಹ್ನ 12 ಗಂಟೆಯ ನಂತರ ಉಡುಪಿ-ಮಣಿಪಾಲ್​ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀಂದ್ರ ನಗರ ಬಸ್ ನಿಲ್ದಾಣದ ಎದುರು ಇರುವ ವಿಪಿ ನಗರದ ವಿಶೇಷ ಮಳಿಗೆಯಲ್ಲಿ ನಡೆಯಲಿದೆ.

    ಮೂರು ವಯಸ್ಸಿನ ಗುಂಪುಗಳಲ್ಲಿ ಸ್ಪರ್ಧೆ
    5 ರಿಂದ 8 ವರ್ಷಗಳು, 9 ರಿಂದ 11 ವರ್ಷಗಳು ಮತ್ತು 12 ರಿಂದ 14 ವರ್ಷಗಳ ಮೂರು ಗುಂಪುಗಳನ್ನು ಮಾಡಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಮಕ್ಕಳು ಕಡ್ಡಾಯವಾಗಿ ಹಬ್ಬದ ಉಡುಪುಗಳನ್ನು ಧರಿಸಬೇಕು. ಪ್ರತಿ ವಿಭಾಗದ ಸ್ಪರ್ಧೆಯ ವಿಜೇತರಿಗೆ ವಿಶೇಷ ಬಹುಮಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗು ಪ್ರಮಾಣಪತ್ರ ಮತ್ತು ಸಿಹಿ ತಿನಿಸುಗಳುಳ್ಳ ಅತ್ಯಾಕರ್ಷಕ ಬಹುಮಾನ ಸಹ ನೀಡಲಾಗುತ್ತದೆ.

    ನೋಂದಣಿ ಉಚಿತ
    ಸ್ಪರ್ಧೆಯಲ್ಲಿ ತಮ್ಮ ಮಕ್ಕಳ ಭಾಗವಹಿಸುವಿಕೆಯನ್ನು ಇಚ್ಛಿಸುವ ಪಾಲಕರು 8904969733 ಮೊಬೈಲ್​ ನಂಬರ್​ಗೆ ಕರೆ ಮಾಡಿ ಈಜಿ಼ ಬೈ ಪ್ರತಿನಿಧಿಯನ್ನು ಸಂಪರ್ಕಿಸುವ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು.

    ಈಜಿ಼ ಬೈ ಸ್ಟೋರ್​ ಕುರಿತು
    ಈಜ್ಹಿಬೈ ದುಬೈನ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಬಟ್ಟೆ ಮಾರಾಟ ಮಳಿಗೆಯಾಗಿದೆ. ಲ್ಯಾಂಡ್‌ಮಾರ್ಕ್ ಗ್ರೂಪ್, ದೇಶದ ಪ್ರಮುಖ ಚಿಲ್ಲರೆ ಸಮೂಹಗಳಲ್ಲಿ ಒಂದಾಗಿದೆ. ಇದು ಲೈಫ್​ಸ್ಟೈಲ್​, ಸ್ಪ್ಲ್ಯಾಶ್, ಹೋಮ್ ಸೆಂಟರ್, ಮ್ಯಾಕ್ಸ್, ಸ್ಪಾರ್, ಮತ್ತು ಇನ್ನೂ ಮುಂತಾದ ಚಿಲ್ಲರೆ ವ್ಯಾಪಾರ ಸ್ವರೂಪವನ್ನು ಒಂದೇ ಸೂರಿನಡಿಯಲ್ಲಿ ಹೊಂದಿದೆ. ಮಣಿಪಾಲ್ ಈಜಿ಼ ಬೈ ಸ್ಟೋರ್​ 8000 ಚದರ ಅಡಿಗಳಲ್ಲಿ ಹರಡಿದೆ. ಇದು ವಿವಿಧ ವರ್ಗಗಳಲ್ಲಿ ಇಡೀ ಕುಟುಂಬಕ್ಕೆ ಟ್ರೆಂಡಿ ಫ್ಯಾಶನ್ ಪರಿಹಾರಗಳನ್ನು ನೀಡುತ್ತದೆ ಮತ್ತು ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಮೀಸಲಾದ ವಿಭಾಗಗಳೊಂದಿಗೆ ಸಂತೋಷಕರ ಹಾಗೂ ಆಹ್ಲಾದಕರ ಶಾಪಿಂಗ್​ ಅನುಭವವನ್ನು ನೀಡುತ್ತದೆ.

    ಈಜಿ಼ ಬೈ ಬಗ್ಗೆ
    ಈಜಿ಼ ಬೈ ವಿಶೇಷ ಮಳಿಗೆಗಳು ಅಂದಾಜು 6,000 ದಿಂದ 8,000 ಚದರ ಅಡಿ ಗಾತ್ರದಲ್ಲಿವೆ. ಮಳಿಗೆಗಳಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಉಡುಗೆ, ಪಾದರಕ್ಷೆಗಳು ಮತ್ತು ಹಲವು ಪರಿಕರಗಳನ್ನು ಒಳಗೊಂಡ ವ್ಯಾಪಕ ಶ್ರೇಣಿಯ ಗುಣಮಟ್ಟದ ಉಡುಪುಗಳನ್ನು ಹೊಂದಿರುತ್ತವೆ. ಅಲ್ಲದೆ, ಈಜಿ಼ ಬೈ ಭಾರತದಾದ್ಯಂತ ಆಯ್ದ ಸ್ಪಾರ್ ಹೈಪರ್‌ಮಾರ್ಕೆಟ್‌ಗಳಲ್ಲಿಯೂ ಲಭ್ಯವಿದೆ.

    ಈಜಿ಼ ಬೈ ಸ್ಟೋರ್‌ಗಳು ದೇಶದ ಮೆಟ್ರೋ ಮತ್ತು ನಾನ್-ಮೆಟ್ರೋ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶದಾದ್ಯಂತ 133 ಮಳಿಗೆಗಳನ್ನು ತೆರೆದಿವೆ.

    ಠಾಣೆಗೆ ತೆರಳಿ ತಾಯಿಯ ವಿರುದ್ಧವೇ ದೂರು ದಾಖಲು! 3 ವರ್ಷದ ಮಗುವಿನ ಮಾತು ಕೇಳಿ ನಗೆಗಡಲಲ್ಲಿ ತೇಲಿದ SI

    ಮುಖ ಟ್ಯಾನ್​ ಆಗುವುದನ್ನು ತಪ್ಪಿಸಲು ಯಾವ ಸನ್​ಸ್ಕ್ರೀನ್ ಬಳಸ್ತೀರಾ? ರಾಹುಲ್ ಗಾಂಧಿ ಕೊಟ್ಟ ಉತ್ತರವಿದು…

    ಸರ್ಕಾರಿ ಕಾರ್ನರ್: ಪಿಂಚಣಿ, ಉಪದಾನ ಎಷ್ಟಿರಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts