More

    ಡಿಎಂಕೆ ಗೆಲುವಿನ ರಹಸ್ಯ ಬಯಲು: ತಮಿಳುನಾಡು ಚುನಾವಣೆಗೆ ಮಹತ್ವದ ತಿರುವು ನೀಡಿದ್ದೇ ಈ “ಇಟ್ಟಿಗೆ”!

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದಿದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಪ್ರಚಂಡ ಗೆಲುವು ಸಾಧಿಸಿದ್ದು, ಮತ್ತೆ ಅಧಿಕಾರಕ್ಕೇರಿದೆ. ಎಂ.ಕೆ. ಸ್ಟಾಲಿನ್​ ಮುಖ್ಯಮಂತ್ರಿ ಗಾದಿಗೇರಲು ಸಜ್ಜಾಗಿದ್ದಾರೆ.

    ಡಿಎಂಕೆ ಪಕ್ಷದ ಪ್ರಚಂಡ ಜಯಭೇರಿ ಹಿಂದಿನ ರಹಸ್ಯ ಏನು ಎಂಬುದರ ಬಗ್ಗೆ ಇದೀಗ ಭಾರಿ ಕುತೂಹಲ ಮೂಡಿದೆ. ಇದರ ನಡುವೆ ಡಿಎಂಕೆ ಗೆಲುವಿನಲ್ಲಿ ಸಣ್ಣ “ಇಟ್ಟಿಗೆ”ಯೊಂದು ಮಹತ್ವದ ಪಾತ್ರ ವಹಿಸಿರುವ ವಿಚಾರ ಇದೀಗ ಎಲ್ಲರನ್ನು ಅಚ್ಚರಿಗೆ ದೂಡಿದೆ.

    ಅಚ್ಚರಿಯಾದರೂ ಇದು ಸತ್ಯವೇ. ಚುನಾವಣಾ ಪ್ರಚಾರದಲ್ಲಿ ಉದಯನಿಧಿ ಸ್ಟಾಲಿನ್​ ಬಳಿಸಿದ ಇಟ್ಟಿಗೆ ಕಮಾಲ್​ ಮಾಡಿದೆ. ಇಟ್ಟಿಗೆಯ ಪಾತ್ರದಲ್ಲಿ ಡಿಎಂಕೆ ಗೆಲುವಿನಲ್ಲಿ ಸಾಕಷ್ಟು ಪ್ರಭಾವ ಬೀರಿದೆ.

    ತಾತ ಕರುಣಾನಿಧಿ ರಾಜ್ಯದ ಮಾಜಿ ಮುಖ್ಯಮಂತ್ರಿ. ತಂದೆ ಸ್ಟಾಲಿನ್​ ಡಿಎಂಕೆ ಪಕ್ಷದ ನಾಯಕ ಮತ್ತು ಮುಂದಿನ ಮುಖ್ಯಮಂತ್ರಿ. ಇತ್ತ ಉದಯನಿಧಿ ಸ್ಟಾಲಿನ್​ ಸಿನಿಮಾ ರಂಗದಲ್ಲಿ ಯಶಸ್ಸು ಸಾಧಿಸಿದ ರಾಜಕೀಯದಲ್ಲೂ ಛಾಪು ಮೂಡಿಸಿದ್ದಾರೆ. ಮೊದಲ ಚುನಾವಣೆಯಲ್ಲೇ ಚೆಪಾಕ್​ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    ಉದಯನಿಧಿ ಸ್ಟಾಲಿನ್ ಅವರ​ ವಿಭಿನ್ನ ಚುನಾವಣಾ ಪ್ರಚಾರದಿಂದ ಜನರು ಪ್ರಭಾವಗೊಂಡಿರುವುದು ಚುನಾವಣೆ ಗೆಲುವಿನಿಂದ ಸಾಬೀತಾಗಿದೆ. ಅದರಲ್ಲೂ ಮದುರೈ ಮಂದಿ ಹೆಚ್ಚು ಪ್ರಭಾವಿತರಾಗಿದ್ದಾರೆ. ಏಮ್ಸ್​ ಎಂದು ಬರೆದಿರುವ ಇಟ್ಟಿಗೆಯನ್ನು ಪ್ರತಿ ಪ್ರಚಾರದಲ್ಲೂ ಉದಯನಿಧಿ ಬಳಸಿದ್ದಾರೆ.

    ಕೇಂದ್ರ ಸರ್ಕಾರವು ಮದುರೈಗೆ ಏಮ್ಸ್​ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮಂಜೂರು ಮಾಡಿದೆ. ಅನುಮೋದನೆ ನೀಡಿ ಮೂರು ವರ್ಷಗಳು ಕಳೆದರು ಆಸ್ಪತ್ರೆ ಮಾತ್ರ ಇನ್ನು ನಿರ್ಮಾಣವಾಗಿಲ್ಲ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಉದಯನಿಧಿ ಚುನಾವಣಾ ಪ್ರಚಾರ ಮಾಡಿದರು.

    ಏಮ್ಸ್​ ಎಂದು ಬರೆದಿರುವ ಇಟ್ಟಿಗೆಯನ್ನು ಉದಯನಿಧಿ ಭಾನುವಾರ ಪಕ್ಷದ ಮುಖ್ಯಸ್ಥ ಹಾಗೂ ತಂದೆ ಸ್ಟಾಲಿನ್​ಗೆ ಹಸ್ತಾಂತರಿಸಿದ್ದಾರೆ. ಇದರ ಅರ್ಥ ಏಮ್ಸ್​ ಅನ್ನು ನೀವಾದರೂ ಪೂರ್ಣಗೊಳಿಸಿ ಎಂಬುದು.

    ಇನ್ನು ಉದಯನಿಧಿ ಚೆಪಾಕ್​ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, 68,880 ಪ್ರಚಂಡ ಬಹುಮತಗಳಿಂದ ಜಯ ಸಾಧಿಸಿದ್ದಾರೆ. ಒಟ್ಟು 234 ವಿಧಾನಸಭಾ ಸ್ಥಾನಗಳಲ್ಲಿ 159 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಅಧಿಕಾರ ಹಿಡಿದಿದೆ. (ಏಜೆನ್ಸೀಸ್​)

    ಎಟಿಎಂನಲ್ಲಿ 1000 ರೂ. ಡ್ರಾ ಮಾಡಿದವನಿಗೆ ಕಾದಿತ್ತು ಬಿಗ್​ ಶಾಕ್​! ಹಣ ನೀಡುವ ಯಂತ್ರದಡಿಯಲ್ಲಿತ್ತು ಸರ್ಪ್ರೈಸ್​

    ವಿಶೇಷ ದಾಖಲೆ ಬರೆದ ದಿವ್ಯಾ ಉರುಡುಗ: ಬಿಗ್​ಬಾಸ್​ ಕನ್ನಡ ಇತಿಹಾಸದಲ್ಲಿ ಇದೇ ಮೊದಲು!

    ಕೋವಿಡ್‌ ಹೆಸರಿನಲ್ಲಿ ನಟ ಸೋನು ಸೂದ್‌ ಮೋಸದಾಟ- ಟ್ವೀಟ್‌ಗೆ ಲೈಕ್‌ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಂಗನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts