More

    ದಿಶಾ ಅತ್ಯಾಚಾರ-ಕೊಲೆ ಪ್ರಕರಣ: ಟಾಲಿವುಡ್​-ಬಾಲಿವುಡ್​ ಸೆಲೆಬ್ರಿಟಿಗಳಿಗೆ ಎದುರಾಯ್ತು ಸಂಕಷ್ಟ!

    ಹೈದರಾಬಾದ್​: ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್​ ಹಾಗೂ ಬಾಲಿವುಡ್​ ಕಲಾವಿದರ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ಅಧಿಕೃತ ಹೆಸರನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದ ಕಲಾವಿದರಿಗೆ ಇದೀಗ ಸಂಕಷ್ಟ ಎದುರಾಗಿದೆ.

    ಸೆಲೆಬ್ರಿಟಿಗಳಾದ ಅನುಪಮ್​ ಖೇರ್​, ಫರ್ಹಾನ್​ ಅಖ್ತಾರ್​, ಅಜಯ್​ ದೇವಗನ್​, ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಮಾಸ್​ ಮಹರಾಜ ರವಿತೇಜ, ರಾಕುಲ್​ ಪ್ರೀತ್​ ಸಿಂಗ್​, ಅಲ್ಲು ಸಿರೀಷ್​ ಮತ್ತು ಚಾರ್ಮಿ ಕೌರ್​ ದಿಶಾ ಪ್ರಕರಣದ ಬಗ್ಗೆ ಟ್ವೀಟ್​ ಮಾಡುವಾಗ ಸಂತ್ರಸ್ತ ಯುವತಿಯ ಅಧಿಕೃತ ಹೆಸರನ್ನು ಉಲ್ಲೇಖಿಸಿದ್ದರು.

    ದೆಹಲಿ ಮೂಲದ ವಕೀಲರಾದ ಗೌರವ್​ ಗುಲಾಟಿ ಈ ಸೆಲೆಬ್ರಿಟಿಗಳ ವಿರುದ್ಧ ಐಪಿಸಿ ಸೆಕ್ಷನ್​ 228 ಎ ಅಡಿಯಲ್ಲಿ ಸಾಬ್ಜಿ ಮಂಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, ತೀಸ್​ ಹಜಾರಿ ಕೋರ್ಟ್​ನಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವುದನ್ನು ಕಾನೂನು ನಿಷೇಧಿಸಿದ್ದರೂ ಈ ಸೆಲೆಬ್ರಿಟಿಗಳು ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ಗೌರವ್ ಗುಲಾಟಿ ಆರೋಪಿಸಿದ್ದಾರೆ.

    ಘಟನೆ ಹಿನ್ನೆಲೆ ಏನು?
    2019ರ ಡಿಸೆಂಬರ್​ನಲ್ಲಿ ಕೆಲಸದ ನಿಮಿತ್ತ ಬೈಕ್​ನಲ್ಲಿ ತೆರಳಿದ್ದ ದಿಶಾ (ಅತ್ಯಾಚಾರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಮೂಲ ಹೆಸರನ್ನು ಬಹಿರಂಗಪಡಿಸುವಂತಿಲ್ಲ). ಬೈಕ್ ಪಂಚರ್ ಆದ ಕಾರಣ, ಪೆಟ್ರೋಲ್ ಬಂಕ್ ಬಳಿ ಅದನ್ನು ನಿಲ್ಲಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ನಾಲ್ಕು ಮಂದಿ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಆಕೆಯನ್ನು ಹೊತ್ತೊಯ್ದು ಸಾಮೂಹಿಕ ಆತ್ಯಾಚಾರ ಮಾಡಿದ್ದೂ ಅಲ್ಲದೇ, ಕೊಲೆ ಮಾಡಿ ಶವವನ್ನು ಸುಟ್ಟುಹಾಕಿದ್ದರು. ಹೈದರಾಬಾದ್​-ಬೆಂಗಳೂರು ಹೆದ್ದಾರಿಯ ಶಾದ್​ನಗರದ ಬಳಿ ಕಾಮುಕರು ದಿಶಾ ಶವನ್ನು ಸುಟ್ಟು ಹಾಕಿದ್ದರು. ಘಟನೆ ನಡೆದ ಮರುದಿನ ದಿಶಾ ಶವ ಪತ್ತೆಯಾಗಿತ್ತು. ದಿಶಾ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು.

    ಇಡೀ ದೇಶಾದ್ಯಂತ ಈ ಘಟನೆಯ ವಿರುದ್ಧ ಪ್ರತಿಭಟನೆ ಕೇಳಿಬಂದಿದ್ದವು. ಬಳಿಕ ಆರೋಪಿಗಳಾ ಮಹಮ್ಮದ್​ ಆರೀಫ್​, ಜೊಲ್ಲು ಶಿವ, ಜೊಲ್ಲು ನವೀನ್​ ಮತ್ತು ಚಿಂತಾಕುಂಟ ಚನ್ನಕೇಶವುಲು ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರು 2019 ಡಿಸೆಂಬರ್​ 6ರಂದು ತನಿಖೆ ಕರೆದೊಯ್ದಾಗ ಎನ್​ಕೌಂಟರ್​ ಮಾಡಿದ್ದರು. (ಏಜೆನ್ಸೀಸ್​)

    ತಾರಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುವಂತಿದೆ ಸಮಂತಾರ ಈ ನಡೆ..!

    ಕೃತಿ ಶೆಟ್ಟಿ ಜತೆ ಅಂತ ಕೆಲಸ ಮಾಡಲ್ಲ! ಅವಳನ್ನು ನನ್ನ ಮಗಳೆಂದು ಭಾವಿಸಿದ್ದೇನೆಂದ ವಿಜಯ್​ ಸೇತುಪತಿ

    ವ್ಯಾನ್​ ಡ್ರೈವರ್​ನನ್ನು ಪ್ರೀತಿಸಿ ಮದ್ವೆಯಾದ ಒಂದೇ ವರ್ಷದಲ್ಲಿ ಜೂನಿಯರ್​ ಲೆಕ್ಚರರ್ ಜೀವನ ದುರಂತ ಅಂತ್ಯ..!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts