More

    ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಬಚ್ಚನ್​ ಪಾಂಡೆ ಚಿತ್ರದ ಕ್ರೋಚ್ ಗ್ರ್ಯಾಬಿಂಗ್ ದೃಶ್ಯ! ಕಾರಣ ಹೀಗಿದೆ ನೋಡಿ…

    ಮುಂಬೈ: ಬಾಲಿವುಡ್​ ಸೂಪರ್​ ಸ್ಟಾರ್​ ಅಕ್ಷಯ್​ ಕುಮಾರ್​ ಅವರ ಬಹುನಿರೀಕ್ಷಿತ ಸಿನಿಮಾ “ಬಚ್ಚನ್​ ಪಾಂಡೆ” ಮಾರ್ಚ್​ 18ರಂದು ತೆರೆಗೆ ಅಪ್ಪಳಿಸಲಿದೆ. ನಿನ್ನೆಯಷ್ಟೇ (ಫೆ.18) ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಅದರಲ್ಲಿರುವ ಕ್ರೋಚ್-ಗ್ರ್ಯಾಬಿಂಗ್​ ದೃಶ್ಯ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ.

    ಅಕ್ಷಯ್​ ಕುಮಾರ್​ ತಮ್ಮ ಟ್ವಿಟರ್​ನಲ್ಲಿ ಟ್ರೈಲರ್​ ಅನ್ನು ಪೋಸ್ಟ್​ ಮಾಡುತ್ತಿದ್ದಂತೆ ಅಭಿಮಾನಿಗಳು ಅದರಲ್ಲಿರುವ ಕ್ರೋಚ್-ಗ್ರ್ಯಾಬಿಂಗ್ ದೃಶ್ಯವನ್ನು ಗುರುತಿಸಿ ಟ್ರೋಲ್​ ಮಾಡುತ್ತಿದ್ದಾರೆ. ಈ ದೃಶ್ಯವನ್ನು ಪ್ರಖ್ಯಾತ ಮೀಮ್ಸ್​ನಿಂದ ಸ್ಫೂರ್ತಿ ಪಡೆದು ನಕಲಿ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಚಿತ್ರದ ಪೋಸ್ಟರ್​ ಕೂಡ ನಕಲಿ ಮಾಡಲಾಗಿದೆ ಎಂದು ಇನ್ನು ಕೆಲವು ತಿಳಿಸಿದ್ದಾರೆ. ಅಕ್ಷಯ್​ ಕುಮಾರ್​ ಮತ್ತು ಜಾಕ್ವೆಲಿನ್​ ಫರ್ನಾಂಡೀಸ್​ ಇಬ್ಬರು ಸ್ಟ್ರಾ ಮೂಲಕ ಎಳನೀರು ಕುಡಿಯುತ್ತಿರುವ ಪೋಸ್ಟರ್​ ಅನ್ನು ಬೇರೊಂದು ಚಿತ್ರದಿಂದ ಕಾಪಿ ಮಾಡಲಾಗಿದೆ ಎಂದಿದ್ದಾರೆ.

    ಆದರೆ, ಅಕ್ಷಯ್​ ಮತ್ತು ಪಂಕಜ್​ ತ್ರಿಪಾಠಿ ನಡುವಿನ ಕ್ರೋಚ್-ಗ್ರ್ಯಾಬಿಂಗ್ ಮೀಮ್ಸ್ ದೃಶ್ಯ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕೃತಿ ಸನೋನ್ ಮತ್ತು ಅರ್ಷದ್ ವಾರ್ಸಿ ಕೂಡ ನಟಿಸಿದ್ದಾರೆ. (ಏಜೆನ್ಸೀಸ್​)

    ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ವಿಧಿವಶ

    ಕೆಪಿಎಸ್​ಸಿ 2011ರ ಬ್ಯಾಚ್ ಸಿಂಧು: 362 ಹುದ್ದೆಗಳ ನೇಮಕ ಊರ್ಜಿತ; ವಿಧೇಯಕ ಮಂಡನೆ ಮಾಡಿದ ಸರ್ಕಾರ

    ಲಂಕಾ ಟಿ20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ಸಾಧ್ಯತೆ, ಮರಳುವರೇ ಜಡೇಜಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts