More

    ಆಫ್ರಿಕಾದಲ್ಲಿ ಕುಳಿತು ಭಾರತದ ಅಕೌಂಟ್ ಹ್ಯಾಕ್ ಮಾಡ್ತಿದ್ದ ಖದೀಮರು ಅಂದರ್!

    ಚಿಕ್ಕೋಡಿ: ಆಫ್ರಿಕಾದಲ್ಲಿ ಕುಳಿತು ಭಾರತದ ಬ್ಯಾಂಕ್​ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದ ಖದೀಮರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

    ಭಾರತದಲ್ಲಿ ಅದರಲ್ಲೂ ಕರ್ನಾಟಕದ ಖಾತೆಗೆ ಸೇರಿದ 94 ಲಕ್ಷ ರೂಪಾಯಿಗಳನ್ನು ಖದೀಮರು ಕದ್ದಿದ್ದರು. ಬೆಳಗಾವಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ, ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆನ್​ಲೈನ್​ ವಂಚನೆ ಪ್ರಕರಣ ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅರಿಹಂತ ಸಂಸ್ಥೆ ಜನರಲ್ ಮ್ಯಾನೇಜರ್ ಅಶೋಕ್ ಬಂಕಾಪುರೆ ಅವರ ಐಸಿಐಸಿಐ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ‌ದ್ದ ಖದೀಮರು 94 ಲಕ್ಷ ರೂ. ಎಗರಿಸಿದ್ದರು. ಎರಡು ಬಾರಿ ಹ್ಯಾಕ್ ಮಾಡಿದ್ದರು.

    ಚಿಕ್ಕೋಡಿ ಡಿಎಸ್ಪಿ ಹಾಗೂ ಸಿಪಿಐ ನೇತೃತ್ವದಲ್ಲಿ ‌ಕಾರ್ಯಚರಣೆ ನಡೆದಿದೆ. ಮುಂಬೈಯಲ್ಲಿ ನೈಜಿರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ( 40), ಇಂದ್ರೇಶ್ ಹರಿಶಕಂರ್ ಪಾಂಡೆ ಮತ್ತು ಅಭಿಜಿತ್ ಘನಶ್ಯಾಮ್ ಮಿಶ್ರಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

    ಆಫ್ರಿಕಾ ಹಾಗೂ ಮುಂಬೈಯಲ್ಲಿ ಕುಳಿತು ಆನ್‌ಲೈನ್ ಮೂಲಕ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಆರೋಪಿಗಳು ಹಣ ಎಗರಿಸುತ್ತಿದ್ದರು. ಆಫ್ರಿಕಾ ದೇಶದಲ್ಲಿರುವ ಟೋನಿ ಎಂಬ ವ್ಯಕ್ತಿ ಸಂಪೂರ್ಣ ಹ್ಯಾಕಿಂಗ್ ಜಾಲಕ್ಕೆ ಸೂತ್ರಧಾರ ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ ‌ನಿಂಬರಗಿ ಮಾಹಿತಿ ನೀಡಿದ್ದಾರೆ.

    ಟೋನಿ ಆಫ್ರಿಕಾದಲ್ಲಿ ಕುಳಿತು ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡುತ್ತಿದ್ದ. ಆರೋಪಿಗಳಾದ ಇಂದ್ರೇಶ ಪಾಂಡೆ ಹಾಗೂ ಅಭಿಜಿತ ಮಿಶ್ರಾ ಹ್ಯಾಕ್ ಡಮ್ಮಿ ಅಕೌಂಟ್ ಕ್ರಿಯೇಟ್ ಮಾಡುತ್ತಿದ್ದರು. ಟೋನಿ ಅಕೌಂಟ್ ಹ್ಯಾಕ್ ಮಾಡಿ ಎಗರಿಸಿದ್ದ ದುಡ್ಡುನ್ನು ಡಮ್ಮಿ ಅಕೌಂಟ್‌ಗೆ ಟ್ರಾನ್ಸಫರ್ ಮಾಡುತ್ತಿದ್ದರು. ಸದ್ಯ ಪ್ರಕರಣದಲ್ಲಿ ಪ್ರಾಥಮಿಕವಾಗಿ 3 ಜನರನ್ನು ಬಂಧಿಸಲಾಗಿದೆ ಎಂದು ಚಿಕ್ಕೋಡಿಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು,

    ಮೊಬೈಲ್ ಫೋನ್‌ಗಳಿಗೆ ಬರುವ ಮೆಸೇಜ್, ಕಾಲ್ಸ್‌ಗಳಿಗೆ ಬ್ಯಾಂಕ್ ಖಾತೆ ಮಾಹಿತಿ ನೀಡದಂತೆ ಎಸ್ಪಿ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​​)

    ಒಂದೇ ಸೀರೆಗೆ ಕೊರಳೊಡ್ಡಿದ ಪ್ರೇಮಿಗಳು: ವಾಟ್ಸ್​ಆ್ಯಪ್​ ಸ್ಟೇಟಸ್​ ನೋಡಿ ಬೆಚ್ಚಿಬಿದ್ದ ಸ್ನೇಹಿತರು, ಪಾಲಕರು!

    ವರನ ಮುಂದೆಯೇ ವಧುವಿಗೆ ಕಿಸ್​ ಮಾಡಿದ ಯುವಕ! ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಏನಿರಬಹುದು?

    ಡೈಪರ್ ಬದಲಾಯಿಸಲೂ ಮಕ್ಕಳ ಅಭಿಪ್ರಾಯ ಕೇಳಬೇಕು! ಹೊಸ ರೂಲ್ಸ್ ಕೇಳಿ ಶಾಕ್ ಆದ ಪೋಷಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts