More

    ಈ ಫೋಟೋದಲ್ಲಿರೋ ಬಾಲಕಿ ಯಾರೆಂದು ಗುರುತಿಸುವಿರಾ? ಇಂದು ದಕ್ಷಿಣ ಭಾರತದ ಸ್ಟಾರ್​ ನಟಿ ಈಕೆ…

    ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಅಮ್ಮನ ಜೊತೆ ನಿಂತು ಕ್ಯಾಮೆರಾಗೆ ಪೋಸ್​ ನೀಡಿರುವ ಪುಟ್ಟ ಬಾಲಕಿಯ ಫೋಟೋವೊಂದು ಹರಿದಾಡುತ್ತಿದೆ. ಅದರ ಜತೆಯಲ್ಲೇ ಆ ಫೋಟೋದಲ್ಲಿರುವ ಬಾಲಕಿ ಯಾರೆಂದು ಗುರುತಿಸುವಿರಾ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಉತ್ತರಿಸಲು ಕೆಲವರು ಗೊಂದಲಕ್ಕೀಡಾಗಿದ್ದರೆ, ಇನ್ನು ಕೆಲವರು ಆ ಬಾಲಕಿ ಯಾರೆಂಬುದನ್ನು ಸಹ ಪತ್ತೆಹಚ್ಚಿದ್ದಾರೆ.

    ಆಕೆ ಯಾರು ಅಂತಾ ನಿಮಗೆ ಗೊತ್ತಿಲ್ಲ ಅಂದ್ರೆ ನಾವು ಹೇಳ್ತೀವಿ ಕೇಳಿ. ಫೋಟೋದಲ್ಲಿರುವ ಬಾಲಕಿ ಬೇರೆ ಯಾರು ಅಲ್ಲ. ಅವರೇ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರೀಯ ರಾಣಿ, ಭಾರತದ ಸಿನಿ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಹುಭಾಷ ನಟಿ ತ್ರಿಷಾ ಕೃಷ್ಣನ್​.

    ಈ ಫೋಟೋದಲ್ಲಿರೋ ಬಾಲಕಿ ಯಾರೆಂದು ಗುರುತಿಸುವಿರಾ? ಇಂದು ದಕ್ಷಿಣ ಭಾರತದ ಸ್ಟಾರ್​ ನಟಿ ಈಕೆ...

    ತ್ರಿಷಾ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಅಮ್ಮನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜುಲೈ 2ರಂದು ತಮ್ಮ ಟ್ವಿಟರ್​ನಲ್ಲಿ ತ್ರಿಷಾ ಅವರು ತಮ್ಮ ಬಾಲ್ಯದ ಅಪರೂಪದ, ಮುದ್ದಾದ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಬಗ್ಗೆ ನನ್ನ ಎಲ್ಲದಕ್ಕೂ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ತಮ್ಮ ಅಮ್ಮನ ಜೊತೆ ನಿಂತು “ನೋಡಮ್ಮ ಅಲ್ಲಿ” ಎಂದು ಏನೋ ತೋರಿಸುತ್ತಿರುವ ಭಂಗಿಯಲ್ಲಿ ತ್ರಿಷಾ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅಭಿಮಾನಿಗಳು ಫೋಟೋ ನೋಡಿ ಫುಲ್​ ಖುಷಿಯಾಗಿದ್ದು, ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಸದ್ಯ ಫೋಟೋ ವೈರಲ್​ ಆಗಿದೆ.

    ಸಿನಿಮಾ ವಿಚಾರಕ್ಕೆ ಬಂದರೆ, ತ್ರಿಷಾ ಮುಂದಿನ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಇಳಯ್ಯ ಪಿರಟ್ಟಿ ಕುಂದವೈ ದೇವಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಜಯಂ ರವಿ, ಕಾರ್ತಿ, ತ್ರಿಷಾ, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧೂಳಿಪಾಲ, ಪ್ರಭು, ಆರ್. ಶರತ್‌ಕುಮಾರ್, ವಿಕ್ರಮ್ ಪ್ರಭು, ಜಯರಾಮ್, ಪ್ರಕಾಶ್ ರಾಜ್, ರೆಹಮಾನ್ ಮತ್ತು ಆರ್. ಪಾರ್ತಿಬನ್ ತಾರಾಗಣವನ್ನು ಹೊಂದಿದೆ. (ಏಜೆನ್ಸೀಸ್​)

    ಇಬ್ಬನಿ ತಬ್ಬಿದ ಅಂಕಿತಾ; ಬೇಸಿಗೆಯ ಘಮ ಚಳಿಗಾಲದ ಹಿತ ಮಳೆಗಾಲದ ಮಾಧುರ್ಯ

    ತಾರಸಿಯಲ್ಲೇ ಮೀನು ಸಾಕಣೆ ಮಾಡಿ, ಲಕ್ಷಾಂತರ ರೂ. ಲಾಭ ಗಳಿಸುತ್ತಿರುವ ಮಹಿಳೆ

    ಹೆದರದಿರಿ ನಾನಿದ್ದೇನೆ ಎಂದು ನಿಮಗೆ ಹೇಳುವ ಏಕೈಕ ಗ್ರಹ ಗುರು: ವಾರಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts