More

    ಹಣ್ಣುಗಳನ್ನು ಖರೀದಿಸಿದವರು ತಕ್ಷಣ ಕ್ವಾರಂಟೈನ್​ ಆಗುವಂತೆ ಆದೇಶ ಹೊರಡಿಸಿದ ಚೀನಾ..!

    ಬೀಜಿಂಗ್​: ಹಣ್ಣುಗಳಲ್ಲಿ ಕರೊನಾ ವೈರಸ್​ ಪತ್ತೆಯಾದ ಬೆನ್ನಲ್ಲೇ ಅನೇಕ ಸೂಪರ್​ ಮಾರ್ಕೆಟ್​ಗಳಿಗೆ ಚೀನಾ ಬೀಗ ಜಡಿದಿದೆ. ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಹಣ್ಣುಗಳಲ್ಲಿ ಮಹಾಮಾರಿ ಕರೊನಾ ವೈರಸ್​ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

    ಚೀನಾದ ಝೆಜಿಯಾಂಗ್​ ಮತ್ತು ಜಿಯಾಂಗ್ಸಿ ಪ್ರಾಂತ್ಯಗಳ 9 ನಗರಗಳಲ್ಲಿ ಡ್ರಾಗನ್​ ಫ್ರೂಟ್​ನಲ್ಲಿ ಕರೊನಾ ವೈರಸ್​ ಪತ್ತೆಯಾಗಿದೆ. ಆಮದು ಮಾಡಿಕೊಂಡು ಹಣ್ಣಿನ ಉತ್ಪನ್ನಗಳು ಹಾಗೂ 9 ನಗರಗಳ ಹಣ್ಣುಗಳ ಮೇಲೆ ಚೀನಾ ತುರ್ತು ಪರೀಕ್ಷೆ ಆರಂಭಿಸಿದ್ದು, ಹಣ್ಣುಗಳನ್ನು ಖರೀದಿಸಿದ ಗ್ರಾಹಕರು ಕೂಡಲೇ ಕ್ವಾರಂಟೈನ್​ ಆಗುವಂತೆ ಚೀನಾ ಆದೇಶ ಹೊರಡಿಸಿದೆ.

    ಡಿಸೆಂಬರ್​ ಕೊನೆಯ ವಾರದಲ್ಲಿ ಡ್ರಾಗನ್​ ಫ್ರೂಟ್​ನಲ್ಲಿ ಕೋವಿಡ್​ ಪತ್ತೆಯಾದ ಹಿನ್ನೆಲೆಯಲ್ಲಿ ಜನವರಿ 26ರವರೆಗೂ ವಿಯೆಟ್ನಾಂನಿಂದ ಡ್ರಾಗನ್​ ಫ್ರೂಟ್​ ಆಮದನ್ನು ಈ ಮುಂಚೆಯೇ ಚೀನಾ ಬ್ಯಾನ್ ಮಾಡಿದೆ. ಲ್ಯಾಂಗ್​ ಸನ್​ ಪ್ರಾಂತ್ಯದಲ್ಲಿರುವ ಹೂ ಗಿ ಬಾರ್ಡರ್​ ಗೇಟ್​ ಮತ್ತು ತಾನ್​ ತಾನ್ಹ ಗೇಟ್​ನಲ್ಲಿ ಡ್ರಾಗನ್​ ಫ್ರೂಟ್​ ಆಮದನ್ನು ಬ್ಯಾನ್​ ಮಾಡಿದೆ. ವಿಯೆಟ್ನಾಂನಿಂದ ಹಣ್ಣುಗಳನ್ನು ತುಂಬಿಕೊಂಡು ಬರುತ್ತಿರುವ ಎಲ್ಲ ಟ್ರಕ್​ಗಳನ್ನು ವಾಪಸ್​ ಕಳುಹಿಸಲಾಗುತ್ತಿದೆ.

    ಈಗಾಗಲೇ ಕಟ್ಟುನಿಟ್ಟಾದ ಲಾಕ್‌ಡೌನ್ ಅಡಿಯಲ್ಲಿ ಚೀನಾದ ಕ್ಸಿಯಾನ್ ನಗರ ಸಮಸ್ಯೆ ಎದುರಿಸುತ್ತಿದ್ದು, ಮತ್ತೊಮ್ಮೆ ಕರೊನಾ ವೈರಸ್​ ಸ್ಫೋಟಗೊಳ್ಳುವ ಭೀತಿ ಚೀನಾದಲ್ಲಿ ಎದುರಾಗಿದೆ. ಮೂರು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಹೆನಾನ್​ ಪ್ರಾಂತ್ಯದಲ್ಲಿರುವ ಯುಝೊಹು ನಗರವೂ ಕೂಡ ಲಾಕ್​ಡೌನ್​ ಅಡಿಯಲ್ಲಿದೆ. ಹೊರಗೆ ಹೋಗದಂತೆ ಜನರಿಗೆ ಆದೇಶ ಹೊರಡಿಸಲಾಗಿದೆ. ಟ್ಯಾಕ್ಸಿ ಮತ್ತು ಬಸ್​ ಸೇವೆಗಳನ್ನು ಬಂದ್​ ಮಾಡಲಾಗಿದೆ. ಅಲ್ಲದೆ, ಶಾಪಿಂಗ್​ ಮಾಲ್​ ಸೇರಿದಂತೆ ಇತರೆ ಸಮುದಾಯ ಪ್ರದೇಶಗಳ ಮೇಲೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ. (ಏಜೆನ್ಸೀಸ್​)

    ಬುಲ್ಲಿ ಬಾಯ್​ ಆ್ಯಪ್ ಸೃಷ್ಟಿಕರ್ತ ಅರೆಸ್ಟ್​: ರ‍್ಯಾಂಕಿಂಗ್ ವಿದ್ಯಾರ್ಥಿಯ ಸ್ಫೋಟಕ ಮಾಹಿತಿ ಇಲ್ಲಿದೆ…

    ಹೂ ಅಂಟಾವ… ಸಿನಿಮಾಗಿಂತ ಮೇಕಿಂಗ್​ ವಿಡಿಯೋದಲ್ಲೇ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿರುವ ಸಮಂತಾ!

    ರಾತ್ರಿ ಗಂಡ ಹೊರಹೋಗುತ್ತಿದ್ದಂತೆ ಮನೆಯಲ್ಲಿ ನಡೆಯಿತು ಘೋರ ದುರಂತ: ಪತ್ನಿ-ಪುತ್ರಿ ದಾರುಣ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts