More

    ಬುಲ್ಲಿ ಬಾಯ್​ ಆ್ಯಪ್ ಸೃಷ್ಟಿಕರ್ತ ಅರೆಸ್ಟ್​: ರ‍್ಯಾಂಕಿಂಗ್ ವಿದ್ಯಾರ್ಥಿಯ ಸ್ಫೋಟಕ ಮಾಹಿತಿ ಇಲ್ಲಿದೆ…

    ನವದೆಹಲಿ: ನಾಲ್ಕೈದು ದಿನಗಳಿಂದ ಬುಲ್ಲಿ ಬಾಯ್ ಎಂಬ ಮೊಬೈಲ್ ಅಪ್ಲಿಕೇಷನ್ (ಆ್ಯಪ್​) ಬಹಳ ಸುದ್ದಿಯಲ್ಲಿದೆ. ಈ ಆಪ್​ನಲ್ಲಿ ಮುಸ್ಲಿಮ್ ಮಹಿಳೆಯರ ತಿರುಚಲಾದ ಫೋಟೊಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಂಬೈ ಪೊಲೀಸರು ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ (21) ಎಂಬಾತನನ್ನು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದ ಪ್ರಮುಖ ಸಂಚುಗಾರ ಮತ್ತು ಆ್ಯಪ್​ನ ಸೃಷ್ಟಿಕರ್ತ ಎಂದು ಹೇಳಲಾದ ಇಂಜಿನಿಯರಿಂಗ್​ ವಿದ್ಯಾರ್ಥಿ ನೀರಜ್​ ಬಿಷ್ಣೋಯಿ (21) ಎಂಬಾತನನ್ನು ಬಂಧಿಸಲಾಗಿದೆ.

    ಕಳೆದ ರಾತ್ರಿ (ಜ.6) ಅಸ್ಸಾಂನ ಜೊರ್ಹಾತ್​ ಜಿಲ್ಲೆಯಲ್ಲಿ ದೆಹಲಿ ಪೊಲೀಸರು ನೀರಜ್​ನನ್ನು ಬಂಧಿಸಿದ್ದಾರೆ. ಆ್ಯಪ್​ಗೆ ಸಂಬಂಧಿಸಿದ ಟ್ವಿಟರ್​ ಖಾತೆಯು ಈತನ ಹೆಸರಿನಲ್ಲೇ ಇತ್ತೆಂದು ತಿಳಿದುಬಂದಿದೆ. ನೀರಜ್​ ಜೊರ್ಹಾತ್​ ಪಟ್ಟಣದ ದಿಗಂಬರ್​ ಚೌಕ್​ ಏರಿಯಾದ ನಿವಾಸಿ. ಮಧ್ಯಪ್ರದೇಶ ರಾಜಧಾನಿ ಭೋಪಾಲ್​​ನ ವೆಲ್ಲೋರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಟೆಕ್​ ಕಂಪ್ಯೂಟರ್​ ಸೈನ್ಸ್​ ವಿದ್ಯಾರ್ಥಿಯಾಗಿದ್ದಾನೆ.

    ನೀರಜ್​ ತಂದೆ ದಶರಥ್​ ಬಿಷ್ಣೋಯಿ ಓರ್ವ ಅಂಗಡಿಯ ಮಾಲೀಕ. ಬುಧವಾರ ರಾತ್ರಿ 11 ಗಂಟೆಗೆ ಮನೆಯ ಬಳಿ ಜೊರ್ಹಾತ್​ ಪೊಲೀಸರ ಜತೆ ಬಂದ ಮೂವರು ಸದಸ್ಯರ ದೆಹಲಿ ಪೊಲೀಸ್​ ತಂಡವು ನನ್ನ ಮಗನ ಬಗ್ಗೆ ವಿಚಾರಿಸಿದರು. ನನಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ. ನೀರಜ್​ ಕಿರಿಯವನು. ಆತನ ಬಗ್ಗೆ ಪೊಲೀಸ್​ ತಂಡ ಕೇಳಿದಾಗ ಗಾಬರಿಯಾದೆ. ಸುಮಾರು 45 ನಿಮಿಷಗಳ ಪೊಲೀಸ್​ ತಂಡ ನಮ್ಮ ಮನೆಯನ್ನು ಹುಡುಕಾಡಿದರು. ಮನೆಯಿಂದ ಹೊರಡುವಾಗ ಮಗನ ಲ್ಯಾಪ್​ಟಾಪ್ ಹಾಗೂ ನನ್ನ ಪತ್ನಿಯ ಮೊಬೈಲ್​ ಫೋನ್​​ ವಶಕ್ಕೆ ಪಡೆದು ಅವರ ಜತೆಯಲ್ಲಿ ನನ್ನ ಮಗನನ್ನು ಕರೆದುಕೊಂಡು ಹೋದರು ಎಂದು ನೀರಜ್​ ತಂದೆ ತಿಳಿಸಿದ್ದಾರೆ.

    ನನ್ನ ಮಗನ ಅಮಾಯಕ ಎಂದಿರುವ ದಶರಥ್​ ಬಿಷ್ಣೋಯಿ, ಮಗ ಯಾವುದೇ ತಪ್ಪು ಮಾಡಲು ಸಾಧ್ಯವಿಲ್ಲ. ತಾನು ಯಾವುದೇ ಕೆಟ್ಟ ಕೆಲಸದಲ್ಲಿ ಭಾಗಿಯಾಗಿಲ್ಲ ಎಂದು ನೀರಜ್​ ತಿಳಿಸಿದ್ದಾನೆ. ತಾನು ಅಮಾಯಕ ಅಂತಲೂ ಹಾಗೂ ಬೇರೊಬ್ಬರು ನನ್ನ ಫೋಟೋವನ್ನು ದುರ್ಬಳಕೆ ಮಾಡಿರಬಹುದು ಎಂದು ದೆಹಲಿ ಪೊಲೀಸರಿಗೂ ಆತ ತಿಳಿಸಿದ್ದಾನೆ. ನನ್ನ ಮಗ ಶೇ. 86 ಫಲಿತಾಂಶದೊಂದಿಗೆ ಸೆಂಟ್​ ಮೇರಿ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಪಾಸ್​ ಮಾಡಿದ್ದಾನೆ. ಸರ್ಕಾರದಿಂದ ಲ್ಯಾಪ್​ಲಾಪ್​ ಸಹ ಪಡೆದುಕೊಂಡಿದ್ದಾನೆ. ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಮತ್ತು ಕಂಪ್ಯೂಟರ್​ ತೆಗೆದುಕೊಡುವಷ್ಟು ಆರ್ಥಿಕ ಸಾಮರ್ಥ್ಯವೂ ನಮಗಿಲ್ಲ ಎಂದು ನೀರಜ್​ ತಂದೆ ವಿವರಿಸಿದ್ದಾರೆ.

    ಪ್ರತಿದಿನ ರಾತ್ರಿ 11 ಗಂಟೆಯವರೆಗೂ ಕಂಪ್ಯೂಟರ್​ನಲ್ಲೇ ಮುಳುಗಿರುತ್ತಿದ್ದ. ಆತ 2019ರಲ್ಲಿ ಭೋಪಾಲ್​ನ ವೆಲ್ಲೋರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ಸೇರಿಕೊಂಡಿದ್ದ. ಆದರೆ, ಮನೆಯಿಂದಲೇ ಆನ್​ಲೈನ್​ ಕ್ಲಾಸ್​ಗೆ ಹಾಜರಾಗುತ್ತಿದ್ದ. ಬೇರೆಯವರ ಜತೆ ಕಡಿಮೆ ಮಾತನಾಡುತ್ತಿದ್ದ. ಯಾವಾಗಲೂ ಅಧ್ಯಯನದಲ್ಲೇ ಮುಳುಗಿರುತ್ತಿದ್ದ. ದ್ವಿತೀಯ ಪಿಯುಸಿಯಲ್ಲಿಯೂ ಶೇ. 82 ಫಲಿತಾಂಶವನ್ನು ಪಡೆದುಕೊಂಡಿದ್ದಾನೆ. ನೀರಜ್ ಯಾವಾಗಲೂ ತನ್ನ ಲ್ಯಾಪ್‌ಟಾಪ್‌ಗೆ ಅಂಟಿಕೊಂಡಿರುತ್ತಾನೆಂದು ಆತನನ್ನು ನೋಡಲು ಕೂಡ ಸ್ನೇಹಿತರ್ಯಾರೂ ಮನೆಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ನವೆಂಬರ್ 27, 2021 ರಂದು ವಿವಾಹದಲ್ಲಿ ಪಾಲ್ಗೊಳ್ಳಲು ರಾಜಸ್ಥಾನಕ್ಕೆ ಹೋಗಿದ್ದ ನೀರಜ್ ಕುಟುಂಬ ಡಿಸೆಂಬರ್ 25 ರಂದು ಜೋರ್ಹತ್‌ಗೆ ಮರಳಿದರು. (ಏಜೆನ್ಸೀಸ್​)

    ಹೂ ಅಂಟಾವ… ಸಿನಿಮಾಗಿಂತ ಮೇಕಿಂಗ್​ ವಿಡಿಯೋದಲ್ಲೇ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿರುವ ಸಮಂತಾ!

    ಲಕ್ಷದ ಸನಿಹಕ್ಕೆ ದೈನಿಕ ಕರೊನಾ ಕೇಸ್; ಒಮಿಕ್ರಾನ್ ಏರಿಕೆ, ಮುನ್ನೆಚ್ಚರಿಕೆ ವಹಿಸದಿದ್ರೆ ಅಪಾಯ ಖಚಿತ ಎಂದ ಡಬ್ಲ್ಯುಎಚ್​ಒ

    ಬುಲ್ಲಿ ಬಾಯ್ ಆ್ಯಪ್‌ ವಿವಾದ: ಮುಂಬೈನಲ್ಲಿ ಬೆಂಗಳೂರು ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts