More

    ನಮ್ಮಂತೆಯೇ ಕರೊನಾ ವೈರಸ್​ಗೂ ಬದುಕಲು ಹಕ್ಕಿದೆ ಎಂದ ಉತ್ತರಾಖಂಡದ ಮಾಜಿ ಸಿಎಂ

    ಡೆಹ್ರಾಡೂನ್: ಕರೊನಾ ವೈರಸ್​ ಒಂದು ಜೀವಂತ ಜೀವಿಯಾಗಿದ್ದು, ಅವುಗಳು ಬದುಕಲು ನಮ್ಮಷ್ಟೇ ಹಕ್ಕಿದೆ ಎಂಬ ಹೇಳಿಕೆ ನೀಡುವ ಮೂಲಕ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ತ್ರಿವೇಂದ್ರ ಸಿಂಗ್​ ರಾವತ್ ಎಲ್ಲರ ಹುಬ್ಬೇರಿಸಿದ್ದಾರೆ.

    ತಾತ್ವಿಕ ಕೋನದಲ್ಲಿ ನೋಡುವುದಾದರೆ, ಕರೊನಾ ವೈರಸ್​ ಸಹ ಒಂದು ಜೀವಂತ ಜೀವಿ. ನಮ್ಮಂತೆಯೇ ಬದಕಲು ಅವುಗಳಿಗೂ ಹಕ್ಕಿದೆ. ನಾವೇ ಬುದ್ಧಿವಂತರು ಎಂದು ನಾವು ಮನುಷ್ಯರು ಅಂದುಕೊಂಡಿದ್ದೇವೆ ಮತ್ತು ಕರೊನಾವನ್ನು ನಿರ್ಮೂಲನೇ ಮಾಡಲು ಹೊರಟ್ಟಿದ್ದೇವೆ. ಹೀಗಾಗಿ ಕರೊನಾ ತನ್ನಷ್ಟಕ್ಕೆ ತಾನೇ ರೂಪಾಂತರಗೊಳ್ಳುತ್ತಿದೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ಆದಾಗ್ಯೂ ಮಾನವ ಸುರಕ್ಷಿತವಾಗಿ ಇರಲು ವೈರಸ್​ ಅನ್ನು ಮೀರಿಸುವ ಅಗತ್ಯವಿದೆ ಎಂದಿದ್ದಾರೆ. ಇದೀಗ ತಮ್ಮ ವಿಚಿತ್ರ ಹೇಳಿಕೆಯಿಂದಾಗಿ ರಾವತ್​, ಸಾಮಾಜಿಕ ಜಾಲತಾಣದಲ್ಲಿ ರಾವತ್​ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ.

    ಇಡೀ ದೇಶ ಕರೊನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಮಾಜಿ ಸಿಎಂ ನೀಡಿರುವ ವಿಚಿತ್ರ ಹೇಳಿಕೆ ವಿಡಿಯೋ ಸಹ ಜಾಲತಾಣದಲ್ಲಿ ವೈರಲ್​ ಆಗಿದೆ. ಜೀವಂತ ಜೀವಿಯಾಗಿರುವ ವೈರಸ್​ಗೆ ಸೆಂಟ್ರಲ್​ ವಿಸ್ತಾದಲ್ಲಿ ಆಶ್ರಯ ನೀಡಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. (ಏಜೆನ್ಸೀಸ್​)

    ಒಬ್ಬರ ಹಿಂದೆ ಒಬ್ಬರಂತೆ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಕರೊನಾ!

    ಓಟಿಟಿಯಲ್ಲಿ ರಾಧೆ ಹೊಸ ದಾಖಲೆ; ಸಲ್ಮಾನ್ ಖಾನ್ ಹೊಸ ಸಿನಿಮಾ

    ಲಾಕ್​ಡೌನ್​ನಿಂದ ತಗ್ಗಿದ ಸೋಂಕು: ಜುಲೈಗೆ ಎರಡನೇ ಅಲೆ ಇಳಿಕೆ, 3-5 ತಿಂಗಳ ಬಳಿಕ 3ನೇ ಅಲೆ ಅಬ್ಬರ, ತಜ್ಞರ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts