More

    ನಾವೀನ್ಯತೆ ಬೆಳೆಸುವಲ್ಲಿ ಬದ್ಧತೆ ಹೊಂದಿದ್ದೇವೆ

    ವಿಜಯವಾಣಿ ಸುದ್ದಿಜಾ ಹುಬ್ಬಳ್ಳಿ: ಇಂಜಿನಿಯರ್ ಶಿಕ್ಷಣದಲ್ಲಿ ನಾವೀನ್ಯತೆ ಬೆಳೆಸುವಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಹೇಳಿದರು.

    ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಇನ್ನೋವೇಶನ್ ಸೆಲ್ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ವತಿಯಿಂದ ಆಯೋಜಿಸಿದ್ದ 5 ದಿನಗಳ ಆವಿಷ್ಕಾರ, ವಿನ್ಯಾಸ ಮತ್ತು ಉದ್ಯಮಶೀಲತೆ ಕುರಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಜಿನಿಯರ್​ಗಳಲ್ಲಿ ಸೃಜನಶೀಲತೆ ಮತ್ತು ಉದ್ಯಮಶೀಲತೆಯನ್ನು ಪೋಷಿಸುವಲ್ಲಿ ಇಂತಹ ಉಪಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ಭಾಗವಹಿಸಿದವರು ಮತ್ತು ಮಾರ್ಗದರ್ಶಕರು ತಮ್ಮ ಆಳವಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದರು.

    ಸಿಐಪಿಡಿ ಸಹಾಯಕ ನಿರ್ದೇಶಕ ಹರೀಶ ಅಗಡಿ, ಸಿ-ಟೈ ನಿರ್ದೇಶಕ ಶಿವಯೋಗಿ ತರಮರಿ, ಕೆಎಲ್​ಇ ತಾಂತ್ರಿಕ ವಿವಿ ಡೀನ್ ಪ್ರೊ. ಬಿ.ಎಲ್. ದೇಸಾಯಿ, ವಿಶಾಲ ನಾಯರ್, ಧನುಶ್ ಎಚ್.ಬಿ., ಇತರರು ಪಾಲ್ಗೊಂಡಿದ್ದರು.

    ಪ್ರೊ. ಬಿ.ಎಸ್. ಅನಾಮಿ ಸ್ವಾಗತಿಸಿದರು. ಪ್ರೊ. ಶ್ರದ್ಧಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts