More

    ಒಬ್ಬರ ಹಿಂದೆ ಒಬ್ಬರಂತೆ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಕರೊನಾ!

    ನೆಲ್ಲಿಕುಡುರು: ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ನೆಲ್ಲಿಕುಡುರು ಗ್ರಾಮದ ಒಂದೇ ಕುಟುಂಬದ ನಾಲ್ವರು ಕೋವಿಡ್​ ಸೋಂಕಿನಿಂದ ಮೃತಪಟ್ಟಿರುವ ಘಟನೆ ಮಹಾಮಾರಿ ಕರೊನಾ ವೈರಸ್​ ತೀವ್ರತೆಗೆ ಸಾಕ್ಷಿಯಾಗಿದೆ.

    ಮದ್ದಿ ಭಿಕ್ಸಮ್​ (65) ದಂಪತಿ ಮೂವರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಮಗ ವೀರಣ್ಣ (40) ನೆಲ್ಲಿಕುಡುರು ಸರ್ಕಾರಿ ಜೂನಿಯರ್​ ಕಾಲೇಜಿನಲ್ಲಿ ಲ್ಯಾಬ್​ ಅಸಿಸ್ಟೆಂಟ್​ ಆಗಿದ್ದರು. ಎರಡನೇ ಮಗ ರಾಮಚಂದ್ರ ಹೈದರಾಬಾದ್​ನಲ್ಲಿ ವಾಸವಿದ್ದರು. ಮೂರನೇ ಮಗ ಉಪೇಂದರ್​ (32) ಹನ್ಮಕೊಂಡದಲ್ಲಿ ನೆಲೆಸಿದ್ದರು.

    ಇತ್ತಿಚೆಗೆ ಭಿಕ್ಸಮ್​ ದಂಪತಿ ಮೆಹಬೂಬಬಾದ್​ನಲ್ಲಿರುವ ವೀರಣ್ಣ ಮನೆಗೆ ಹೋಗಿದ್ದರು. ವೀರಣ್ಣರಿಗೆ ಆರೋಗ್ಯ ಹದಗೆಟ್ಟಿತ್ತು. ಕೋವಿಡ್​ ಪಾಸಿಟಿವ್​ ಹಿನ್ನಲೆಯಲ್ಲಿ ಅವರನ್ನು ಗುಡುರು ವಲಯದಲ್ಲಿರುವ ಕ್ವಾರಂಟೈನ್​ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಅಲ್ಲಿಂದ ಹೈದರಾಬಾದ್​ಗೆ ಸ್ಥಳಾಂತರಿಸಲಾಯಿತು.

    ಇತ್ತ ವೀರಣ್ಣ ತಂದೆ ಭಿಕ್ಸಮ್​ ಅವರಿಗೂ ಸೋಂಕು ತಗುಲಿತ್ತು. ಮೊದಲೇ ವಯಸ್ಸಾಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದ ಭಿಕ್ಷಮ್​ ಮೇ 2ರಂದು ಮೃತಪಟ್ಟಿದ್ದರು. ವೀರಣ್ಣ 4ನೇ ತಾರೀಖಿನಂದು ಕೊನೆಯುಸಿರೆಳೆದಿದ್ದರು.

    ಭಿಕ್ಸಮ್​ ಮೂರನೇ ಪುತ್ರ ಉಪೇಂದರ್​ ಮೊದಲನೇ ಅಲೆಯ ಸಂದರ್ಭದಲ್ಲಿ ಅಂದರೆ ನವೆಂಬರ್​ 11 ರಂದು ಸೋಂಕಿಗೆ ಬಲಿಯಾಗಿದ್ದರು. ಇದೀಗ ಭಿಕ್ಸಮ್​ ಪತ್ನಿ ಮಂಗಮ್ಮ (60) ಕರೊನಾದಿಂದ ಗುರುವಾರ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಮುಂದಿನ ವಾರದಿಂದ ದೇಶಿ ಮಾರುಕಟ್ಟೆಗಳಲ್ಲಿ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ ಲಭ್ಯ: ಬೆಲೆ ಹೀಗಿದೆ ನೋಡಿ!

    ಕರೊನಾ ಸಂಕಷ್ಟದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನೆರವು

    ಬಿಗ್ ಸುಂದರಿಯರ ಬಗೆ ಬಗೆ ಮಾತು…: 72 ದಿನಗಳ ಕಿರು ಅನುಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts