More

    ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ; 445 ಕೋಟಿ ವಸ್ತು ವಶ

    ಬೆಂಗಳೂರು: ರಾಜ್ಯದ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಎರಡು ದಿನ ಬಾಕಿ ಇದ್ದು, ಚುನಾವಣಾ ಆಯೋಗ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ಗಧಾ ಪ್ರಹಾರ ನಡೆಸುತ್ತಿದೆ.

    ಈವರೆಗೆ ನಗದು ಸೇರಿದಂತೆ 445.07 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ. ಈವರೆಗೆ 98.86 ಕೋಟಿ ರೂ. ನಗದು, 179.16 ಕೋಟಿ ರೂ. ಬೆಲೆಯ ಮದ್ಯ, 11.79 ಕೋಟಿ ರೂ. ಬೆಲೆಬಾಳುವ ಡ್ರಗ್ಸ್, 77.85 ಕೋಟಿ ರೂ. ಮೌಲ್ಯದ ಚಿನ್ನ, 1.18 ಕೋಟಿ ಮೊತ್ತದ ಬೆಳ್ಳಿ,
    1.22 ಕೋಟಿ ರೂ. ಬೆಲೆಯ ವಜ್ರ, 9.53 ಕೋಟಿ ರೂ. ಮೊತ್ತದ ಉಚಿತ ಉಡುಗೊರೆ ಹಾಗೂ 72.45 ಕೋಟಿ ರೂ. ಬೆಲೆ ಬಾಳುವ ಇತರೆ ವಸ್ತುಗಳನ್ನು ಜ್ತು ಮಾಡಲಾಗಿದೆ.

    ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಅಧಿಕಾರಿಗಳು, ಅಬಕಾರಿ, ಆದಾಯ ತೆರಿಗೆ, ವಾಣಿಜ್ಯ ಇಲಾಖೆಗಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಈ ತಂಡಗಳು 2,282 ಎ್ಐಆರ್ ದಾಖಲಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts