More

    ಮಂಗಳೂರಿಗಿನ್ನು ಹರೆಕಳ ನೀರು

    ಮಂಗಗಳೂರು: ತುಂಬೆಗೆ ಎಎಂಆರ್ ಡ್ಯಾಂನ ನೀರು ಹರಿಸಿ ನೀರಿನ ಮಟ್ಟ ಏರಿಸಿದ ಹೊರತಾಗಿಯೂ ತುಂಬೆಯಲ್ಲಿ ಸರಾಸರಿ 0.08ಮೀ. ನೀರು ಪ್ರತೀ ದಿನ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹರೆಕಲ ಡ್ಯಾಂ ನೀರನ್ನು ಹೆಚ್ಚುವರಿ ಪಂಪ್ ಬಳಸಿ ತುಂಬೆಗೆ ರೀಪಿಲ್ ಮಾಡಲು ಪಾಲಿಕೆ ನಿರ್ದರಿಸಿದೆ.
    ತುಂಬೆ ಡ್ಯಾಂ ನೀರು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹರೇಕಳ ಡ್ಯಾಂನಿಂದ ಪ್ರತೀದಿನ 50ರಿಂದ 60 ಎಂಎಲ್‌ಡಿ ನೀರು ಡ್ಯಾಂಗೆ ಪಂಪ್ ಮಾಡಲಾಗುತ್ತಿದೆ. ಮಂಗಳೂರಿಗೆ ನಿತ್ಯ 155 ಎಂಎಲ್‌ಡಿ ನೀರು ಸರಬರಾಜು ಮಾಡುವ ಕಾರಣದಿಂದ ಶೇ.40ರಷ್ಟು ನೀರು ಡ್ಯಾಂನ ಕೆಳಭಾಗದಿಂದ(ಹರೆಕಳ ಡ್ಯಾಂ) ಪಡೆಯಲಾಗುತ್ತಿದೆ. ಮುಂದಿನ 50 ದಿನದ ವರೆಗೆ ಪ್ರತೀ ದಿನ 60 ಎಂಎಲ್‌ಡಿ ನೀರು ಇಲ್ಲಿ ಲಭ್ಯವಾಗುವುದರಿಂದ ಹರೆಕಲ ಡ್ಯಾಂ ಗೆ ಹೆಚ್ಚುವರಿ ಪಂಪ್ ಅಳವಡಿಸಿ ನೀರು ಪಂಪಿಂಗ್ ಮಾಡಲುವುದು ಪಾಲಿಕೆಗೆ ಅನಿವಾರ್ಯ.
    *ಮತ್ತೆ ಕುಸಿದ ನೀರಿನ ಮಟ್ಟ
    ಗುರುವಾರ ತುಂಬೆಯಲ್ಲಿ 5.59 ಮಿ. ನೀರಿದ್ದು, ಈ ನೀರು ಮಂದಿನ 50 ದಿನಗಳ ವರೆಗೆ ಮಾತ್ರ ಲಿಪ್ಟ್ ಮಾಡಲು ಸಾಧ್ಯ!. ಈ ಮಧ್ಯೆ ಮಂಗಳೂರಿಗೆ ನೀರು ರೇಷನಿಂಗ್ ಮಾಡುವ ನಿರ್ಧಾರ ಸಧ್ಯಕ್ಕಿಲ್ಲ ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಶುಕ್ರವಾರ ತುಂಬೆಯಲ್ಲಿ 5.53ಮೀ, ಎಎಂಆರ್ ಡ್ಯಾಂನಲ್ಲಿ 15.68 ಮೀ. ನೀರಿತ್ತು. ಈ ಎರಡು ಡ್ಯಾಂನಲ್ಲಿ ಕಳೆದ 1 ವಾರದಿಂದ ಪ್ರತೀ ದಿನ 10 ಸೆಂ.ಮೀ. ನೀರು ತುಂಬೆ ಡ್ಯಾಂನಲ್ಲಿ ಕಡಿಮೆಯಾಗುತ್ತದೆ. ಮುಂದಿನ 30 ದಿನಗಳ ವರೆಗೆ ಎಎಂಆರ್ ನೀರನ್ನು ತುಂಬೆಗೆ ಹರಿಸಲು ಸಾಧ್ಯವಿಲ್ಲ, ಹರೆಕಳ ನೀರನ್ನೇ ತುಂಬೆಗೆ ಪಂಪಿಂಗ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.


    ಕುಡಿಯುವ ನೀರಿಗಾಗಿ ಕಂಟ್ರೋಲ್ ರೂಂ
    ಕಳೆದ 1 ವಾರಂದಿ ಪಾಲಿಕೆಯ ಕಂಟ್ರೋಲ್ ರೂಂಗೆ ಹಲವು ಕರೆಗಳು ಬಂದಿದ್ದು, ಇದರಲ್ಲಿ ಶೇ.50ರಷ್ಟು ನೀರಿನ ಕೊರತೆಯದ್ದೇ ಇತ್ತು. ಇದಕ್ಕಾಗಿ ಮಂಗಳೂರು ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಕಂಟ್ರೋಲ್ ರೂಂ (0824- 2220306 ಅಥವಾ 0824- 2220303) ಗೆ ಕರೆ ಮಾಡಿದರೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಪ್ರತೀ ದಿನ ನಿಗಾ ಇರಿಸಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.


    ತುಂಬೆಯಿಂದ ಕುಡಿಯುವ ನೀರಿನ ಪೂರೈಕೆ ನಿರಂತರ ನಡೆಯುತ್ತಿದ್ದು, ಸದ್ಯಕ್ಕೆ ನಗರದಲ್ಲಿ ನೀರಿನ ಕೊರತೆ ಇಲ್ಲ. ಆದರೆ ಡ್ಯಾಂಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಸಣ್ಣ ಮಟ್ಟದಲ್ಲಿ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ತಡೆಯಲು ಹಲವು ಕ್ರಮ ಕೈಗೊಳ್ಳಲಾಗಿದೆ.
    ಮುಲ್ಲೈ ಮುಗಿಲನ್ ಎಂ.ಪಿ,
    ಜಿಲ್ಲಾಧಿಕಾರಿ- ದ.ಕ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts