More

    ಜೀವಾವಧಿ ಶಿಕ್ಷೆ ವಿಧಿಸುತ್ತಿದ್ದಂತೆ ನ್ಯಾಯಾಧೀಶರತ್ತ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ

    ಸೂರತ್​: ಅತ್ಯಾಚಾರ ಪ್ರಕರಣದಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಕೋಪಗೊಂಡ ಅಪರಾಧಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಗುಜರಾತಿನ ಸೂರತ್​ನಲ್ಲಿ ಗುರುವಾರ ನಡೆದಿದೆ.

    ಅಪರಾಧಿಯನ್ನು ಸುಜಿತ್​ ಸಕೇತ್​ (27) ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್​ನಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬಾಲಕಿಗೆ ಚಾಕೋಲೆಟ್​ ಆಮಿಷ ತೋರಿಸಿ ಆರೋಪಿ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿದ್ದ.

    ಸಂತ್ರಸ್ತ ಬಾಲಕಿಯು ವಲಸೆ ಕಾರ್ಮಿಕರೊಬ್ಬರ ಮಗಳು. ಜೀವಾವಧಿ ಶಿಕ್ಷೆ ಮಾತ್ರವಲ್ಲದೆ, ಬಾಲಕಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆರೋಪಿದೆ ಆದೇಶಿಸಿದೆ. ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

    ಜೀವಾವಧಿ ಶಿಕ್ಷೆಯನ್ನು ಘೋಷಿಸುತ್ತಿದ್ದಂತೆ ಆರೋಪಿ ನ್ಯಾಯಾಧೀಶರತ್ತ ಚಪ್ಪಲಿ ಎಸೆದ. ಈ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎನ್ನುತ್ತಿರುವ ಅಪರಾಧಿ, ತೀವ್ರ ಅಸಮಾಧಾನದಿಂದ ಈ ಕೃತ್ಯ ಎಸಗಿದ್ದಾನೆಂದು ಘಟನೆಯ ವೇಳೆ ಕೋರ್ಟ್​ನಲ್ಲಿದ್ದ ವಿನಯ್​ ಶರ್ಮಾ ಹೆಸರಿನ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ.

    ನ್ಯಾಯಾಲಯವು ಪ್ರಾಸಿಕ್ಯೂಷನ್‌ನಿಂದ ಪರೀಕ್ಷಿಸಲ್ಪಟ್ಟ 29 ಸಾಕ್ಷಿಗಳ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಂಡು ಅಪರಾಧಿಗೆ ಶಿಕ್ಷೆಯನ್ನು ವಿಧಿಸಲಾಗಿದೆ. (ಏಜೆನ್ಸೀಸ್​)

    ಮಂದಿರ ಸ್ವಾತಂತ್ರ್ಯಕ್ಕೆ ಸ್ವಾಗತ: ಸಿಎಂ ನಿರ್ಧಾರಕ್ಕೆ ಹರ್ಷ; ರಾಜಕೀಯ ವಲಯದಲ್ಲಿ ಜಟಾಪಟಿ

    ನ್ಯಾಯದ ಆಶಾಕಿರಣ: ಸಮಗ್ರ ನೋಟ-2021, ನ್ಯಾಯಾಂಗ..

    ನಿತ್ಯ 10 ತಾಸು ಕೆಲಸ, 3 ದಿನ ಹಳ್ಳಿ ಪ್ರವಾಸ: ಮುಖ್ಯಮಂತ್ರಿ ಬೊಮ್ಮಾಯಿ ಖಡಕ್ ಸೂಚನೆ; ಆಡಳಿತದಲ್ಲಿ ಚುರುಕು ತರಲು ಅಧಿಕಾರಿಗಳಿಗೆ ಚಾಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts