More

    ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​, ಎಲ್ಲಾ ಗ್ರಾಮಗಳಿಗೆ ಅನ್​ಲಿಮಿಟೆಡ್​ ಇಂಟರ್ನೆಟ್​ ಪೂರೈಸಲು ಸಿಎಂ ಜಗನ್​ ಆದೇಶ

    ವಿಜಯವಾಡ: ಮಹಮಾರಿ ಕರೊನಾದಂತಹ ಕಠಿಣ ಸಮಯದಲ್ಲೂ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್​. ಜಗನ್ಮೋಹನ್​ ರೆಡ್ಡಿ ಇದೀಗ ಮತ್ತೊಂದು ಒಳ್ಳೆ ಸುದ್ದಿಯನ್ನು ತಮ್ಮ ರಾಜ್ಯದ ಜನರಿಗೆ ನೀಡಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ಕರೊನಾ ರೋಗಿಗಳಿಗೆ ಯಾವುದೇ ಆಸ್ಪತ್ರೆಗಳು ಬೆಡ್​ ಖಾಲಿ ಇಲ್ಲ ವಾಪಸ್​ ಕಳುಹಿಸಬಾರದು ಹಾಗೂ ಕರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಸಿಎಂ ಜಗನ್​ ಖಡಕ್​ ಆದೇಶ ಹೊರಡಿಸಿದ್ದಾರೆ.

    ಇದೀಗ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ವರ್ಕ್​ ಫ್ರಮ್​ ಹೋಮ್​ ಮಾಡುತ್ತಿರುವ ಉದ್ಯೋಗಿಗಳಿಗೆ ನೆರವಾಗಲಿ ಎಂದು ಮಹತ್ವದ ಯೋಜನೆ ಜಾರಿ ತಂದಿರುವ ಜಗನ್​, 2023ರ ಒಳಗೆ ರಾಜ್ಯದ ಎಲ್ಲ ಗ್ರಾಮಗಳಿಗೆ ವೇಗವಾಗಿ ಕಾರ್ಯನಿರ್ವಹಿಸುವ ಅನ್​ಲಿಮಿಟೆಡ್​ ಇಂಟರ್ನೆಟ್​ ಸಂಪರ್ಕವನ್ನು ಉಚಿತವಾಗಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇದರೊಂದಿಗೆ ಡಿಜಿಟಲ್​ ಲೈಬ್ರರಿ ಸೌಲಭ್ಯ ನೀಡುವಂತೆಯೂ ಸೂಚಿಸಿದ್ದು, ಎಲ್ಲ ಕೆಲಸಗಳು ನಿಗದಿತ ಸಮಯದವರೆಗೆ ಪೂರ್ಣಗೊಳ್ಳಬೇಕೆಂದು ಹೇಳಿದ್ದಾರೆ.

    ಗ್ರಾಮಗಳಲ್ಲಿ ಇಂಟರ್ನೆಟ್​ ಸಮಸ್ಯೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಗನ್​ ಈ ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ. ಇನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಣೆ ಮಾಡುವಂತೆಯೂ ಜಗನ್​ ಹೇಳಿದ್ದಾರೆ. 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ನೀಡಲಾಗುತ್ತದೆ ಮತ್ತು ಲ್ಯಾಪ್​ಟಾಪ್​ ಸರ್ವೀಸ್​ ಸಹ ಉಚಿತವಾಗಿ ದೊರೆಯಲಿದೆ.

    ಲ್ಯಾಪ್​ಟಾಪ್​ ಹಾನಿಯಾದರೆ ಅದನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೈಯಲ್ಲಿ ಕೊಡಬೇಕು. ಅದನ್ನು ತೆಗೆದುಕೊಂಡ ಪಂಚಾಯಿತಿ ಸಿಬ್ಬಂದಿ ಸರ್ವೀಸ್​ ಕೇಂದ್ರದಲ್ಲಿ ದುರಸ್ಥಿ ಮಾಡಿಸಿ ಹಿಂದಿರುಗಿಸಬೇಕು. ಒಂದು ವಾರದ ಒಳಗೆ ಮರಳಿಸಬೇಕು. ಪ್ರತಿಯೊಂದು ಕಂದಾಯ ವಲಯದಲ್ಲಿ ಒಂದೊಂದು ಸರ್ವೀಸ್​ ಕೇಂದ್ರಗಳು ಇರಬೇಕು ಎಂದು ಸಿಎಂ ಜಗನ್​ ನಿರ್ದೇಶಿಸಿದ್ದಾರೆ.

    ಇಲ್ಲಿಯವರೆಗೆ 14,671 ಕಿ.ಮೀ ಏರಿಯಲ್​ ಕೇಬಲ್​ ಅನ್ನು 307 ವಲಯಗಳ 3,642 ಗ್ರಾಮಗಳಿಗೆ ಅಳವಡಿಸಲಾಗಿದೆ ಎಂದು ಪಂಚಾಯತ್​ ರಾಜ್​ ಗ್ರಾಮೀಣ ಅಭಿವೃದ್ಧಿ ಆಯುಕ್ತರಾದ ಎಂ. ಗಿರಿಜಾಶಂಕರ್​ ಅವರು ಸಿಎಂ ಜಗನ್​ ಅವರಿಗೆ ಮಾಹಿತಿ ನೀಡಿದ್ದಾರೆ. ಬಾಕಿ ಉಳಿದ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಿಎಂ ಜಗನ್​ ಸೂಚಿಸಿದ್ದಾರೆ. (ಏಜೆನ್ಸೀಸ್​)

    ನೋಮ್ಯಾಡ್ ಲ್ಯಾಂಡ್​ಗೆ ದ ಆಸ್ಕರ್ಸ್​; ಇಲ್ಲಿದೆ ಪ್ರಶಸ್ತಿ ವಿಜೇತರ ಪಟ್ಟಿ

    ಸಂಚಲನ ಸೃಷ್ಟಿಸಿದ ಡಾ. ವಿಜಯ ಸಂಕೇಶ್ವರರ ಸಲಹೆ: ಉಸಿರಾಟದ ತೊಂದರೆ ನಿಭಾಯಿಸಲು, ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಲಿಂಬೆರಸ ರಾಮಬಾಣ

    ಬೀದಿಗೆ ಬಂದ ಸಲ್ಮಾನ್ ಖಾನ್, ಕೋವಿಡ್ ವಾರಿಯರ್ಸ್​ಗೆ ನೆರವಿನ ಹಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts