More

    ನೋಮ್ಯಾಡ್ ಲ್ಯಾಂಡ್​ಗೆ ದ ಆಸ್ಕರ್ಸ್​; ಇಲ್ಲಿದೆ ಪ್ರಶಸ್ತಿ ವಿಜೇತರ ಪಟ್ಟಿ

    2021ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮವು ಭಾನುವಾರ ರಾತ್ರಿ ಹೆಚ್ಚು ಸದ್ದುಗದ್ದಲವಿಲ್ಲದೆ ಲಾಸ್ ಆಂಜಲೀಸ್​ನಲ್ಲಿ ನಡೆದಿದೆ. ‘ನೋಮ್ಯಾಡ್ ಲ್ಯಾಂಡ್’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ‘ದಿ ಫಾದರ್’ ಚಿತ್ರದ ಅಭಿನಯಕ್ಕಾಗಿ ಆಂಟೋನಿ ಹಾಪ್ಕಿನ್ಸ್ ಮತ್ತು ‘ನೋಮ್ಯಾಡ್ ಲ್ಯಾಂಡ್’ ಚಿತ್ರದ ಅಭಿನಯಕ್ಕಾಗಿ ಫ್ರಾನ್ಸಸ್ ಮ್ಯಾಕ್​ಡೋರ್ಮಂಡ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಈ ಬಾರಿ ಆಸ್ಕರ್ ಕಣದಲ್ಲಿ ‘ನೋಮ್ಯಾಂಡ್ ಲ್ಯಾಂಡ್’, ‘ಮಾಂಕ್’, ‘ಜುದಾಸ್ ಆಂಡ್ ದಿ ಬ್ಲಾಕ್ ಮಸ್ಸೀಹಾ’, ‘ಮಿನಾರಿ’ ಸೇರಿದಂತೆ 56 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಈ ಪೈಕಿ ‘ನೋಮ್ಯಾಡ್ ಲ್ಯಾಂಡ್’ ಚಿತ್ರವು ಅತ್ಯುತ್ತಮ ಸಿನಿಮಾ, ನಟಿ ಮತ್ತು ನಿರ್ದೇಶನ … ಹೀಗೆ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈ ಚಿತ್ರದ ನಿರ್ದೇಶನಕ್ಕೆ ಪ್ರಶಸ್ತಿ ಪಡೆಯುವ ಮೂಲಕ ಕೋಯಿ ಜಾವ್ ಹೊಸ ದಾಖಲೆ ನಿರ್ವಿುಸಿದ್ದಾರೆ. ಚೀನಾ ಮೂಲದ ಕೋಯಿ, ಆಸ್ಕರ್ ಗೆದ್ದ ಏಷ್ಯಾದ ಮೊದಲ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಮಿಕ್ಕಂತೆ, ಯೂ ಜುಂಗ್ ಯೂನ್ (ಅತ್ಯುತ್ತಮ ಪೋಷಕ ನಟಿ – ಮಿನಾರಿ), ಡೇನಿಯಲ್ ಕಲ್ಲೂಯ (ಅತ್ಯುತ್ತಮ ಪೋಷಕ ನಟ – ಜುದಾಸ್ ಆಂಡ್ ದಿ ಬ್ಲಾಕ್ ಮಸ್ಸೀಹಾ), ಅನದರ್ ರೌಂಡ್ (ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ – ಡ್ಯಾನಿಶ್ ಭಾಷೆ) , ಸೌಲ್ (ಬೆಸ್ಟ್ ಅನಿಮೇಶನ್ ಚಿತ್ರ) ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಇರ್ಫಾನ್, ಭಾನು ನೆನಪು: ಪ್ರತೀ ವರ್ಷ ನಿಧನರಾಗುವ ಜನಪ್ರಿಯ ಸೆಲೆಬ್ರಿಟಿಗಳನ್ನು ವಿಶೇಷ ವಿಡಿಯೋ ಮೂಲಕ ನೆನಪಿಸಿಕೊಳ್ಳುವ ಪರಿಪಾಠ ಆಸ್ಕರ್ಸ್​ನಲ್ಲಿದ್ದು, ಅದರಂತೆ ಕಳೆದ ವರ್ಷ ನಿಧನರಾದ ಇರ್ಫಾನ್ ಖಾನ್ ಮತ್ತು ಭಾನು ಅಥಯ್ಯ ಅವರನ್ನು ‘ಇನ್ ಮೆಮೋರಿಯಮ್ ಎಂಬ ವಿಭಾಗದಲ್ಲಿ ನೆನಪಿಸಿಕೊಳ್ಳಲಾಗಿದೆ. ಈ ಪೈಕಿ ಭಾನು ಅಥಯ್ಯ ಅವರು ‘ಗಾಂಧಿ’ ಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ಪ್ರಶಸ್ತಿ ಪಡೆದ ಮೊದಲ ಭಾರತೀಯರಾದರೆ, ಇರ್ಫಾನ್ ಖಾನ್ ಅಭಿನಯದ ಹಲವು ಹಾಲಿವುಡ್ ಚಿತ್ರಗಳು ಈ ಹಿಂದಿನ ವರ್ಷಗಳಲ್ಲಿ ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನ ಗೊಂಡಿವೆ. ಇರ್ಫಾನ್ ಮತ್ತು ಭಾನು ಅವರನ್ನು ವಿಡಿಯೋ ಮೂಲಕ ನೆನಪಿಸಿಕೊಂಡರೆ, ಕಳೆದ ವರ್ಷ ನಿಧನರಾದ ರಿಷಿ ಕಪೂರ್, ಸುಶಾಂತ್ ಸಿಂಗ್ ರಜಪೂತ್, ಸೌಮಿತ್ರ ಚಟರ್ಜಿ ಮುಂತಾದವರನ್ನು ಆಸ್ಕರ್ ವೆಬ್​ಸೈಟ್​ನಲ್ಲಿ ಸ್ಮರಿಸಲಾಗಿದೆ. -ಏಜೆನ್ಸೀಸ್

    ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts