More

    ಗೋಕಾಕ್​ ಫಾಲ್ಸ್​ನಲ್ಲಿ ಯಮನಿಗೆ ಸೆಡ್ಡು ಹೊಡೆದ ಯುವಕ: 140 ಅಡಿ ಆಳದ ಕಂದಕಕ್ಕೆ ಬಿದ್ರು ಬಚಾವ್..!​

    ಚಿಕ್ಕೋಡಿ: ಅದೃಷ್ಟ ಚೆನ್ನಾಗಿದ್ರೆ ಯಮನು ಕೂಡ ಹತ್ತಿರ ಬರಲು ಹೆದರುತ್ತಾನೆ ಎಂಬ ಮಾತಿಗೆ ಪೂರಕವಾದ ಘಟನೆಯೊಂದು ಬೆಳಗಾವಿಯ ಗೋಕಾಕ್​ ಫಾಲ್ಸ್​ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಕಲ್ಲು ಬಂಡೆಗಳ ಸಂದಿಯ 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಏನು ಆಗದೇ ಸಾವನ್ನೇ ಗೆದ್ದು ಬಂದು ಅಚ್ಚರಿ ಮೂಡಿಸಿದ್ದಾನೆ.

    ಟೈಂ ಚೆನ್ನಾಗಿದ್ರೆ ಜೀವ ಹೇಗೆ ಉಳಿಯುತ್ತದೆ ಅನ್ನೋದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಗಾಂಧಿ ಜಯಂತಿ ಪ್ರಯುಕ್ತ ರಜೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿ ಪ್ರದೀಪ್​ ಸಾಗರ್​ ಎಂಬಾತ ಸ್ನೇಹಿತರೊಂದಿಗೆ ಸೇರಿ ಗೋಕಾಕ್​ ಫಾಲ್ಸ್ ವೀಕ್ಷಣೆಗೆಂದು ಬಂದಿದ್ದ. ಗೋಕಾಕ್ ಫಾಲ್ಸ್‌‌ ವ್ಯೂ ಪಾಯಿಂಟ್‌ಗೆ ಹೋಗುವ ವೇಳೆ ಆಯತಪ್ಪಿ 140 ಅಡಿ ಕಲ್ಲು ಸಂದಿಯೊಳಗೆ ಬಿದ್ದಿದ್ದ.

    ಪ್ರದೀಪ್ ಕೆಳಗೆ ಬಿದ್ದ ತಕ್ಷಣ ಆತನ ಸ್ನೇಹಿತರಯ ಹೌಹಾರಿದ್ದರು. ಕೂಡಲೇ ಗೋಕಾಕ್​ ಪೊಲೀಸರು ಹಾಗೂ ಅಗ್ನಿಶಾಮಕ ದಳದ‌ ಸಿಬ್ಬಂದಿ ನೆರವು ಕೋರಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ, ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ‌‌ಸ್ಥಗಿತಗೊಳಿಸಿ ವಾಪಸ್ ಆಗಿದ್ದರು.

    ಇತ್ತ 140 ಅಡಿ ಆಳದ ಕಂದಕಕ್ಕೆ ಬಿದ್ದು ಪ್ರದೀಪ್​ ಸಾಗರ್​ ಪ್ರಜ್ಞೆ ಕಳೆದುಕೊಂಡಿದ್ದ. ಫೋನ್​ ರಿಂಗ್ ಆಗ್ತಿದ್ರೂ ಸಹ ಫೋನ್ ರಿಸೀವ್​ ಮಾಡದೇ ಇಡೀ ರಾತ್ರಿ ಕಂದಕದಲ್ಲೆ ಕಳೆದಿದ್ದ. ಬಹುತೇಕ ಆತನ ಸತ್ತೇ ಹೋಗಿದ್ದಾನೆಂದು ಸ್ನೇಹಿತರು ನಂಬಿದ್ದರು. ಆದರೆ, ಬೆಳಗ್ಗೆ 4 ಗಂಟೆಗೆ ಪ್ರಜ್ಞೆ ಬಂದ ತಕ್ಷಣ ಆತನೇ ಸ್ನೇಹಿತರಿಗೆ ಫೋನ್ ಕರೆ ಮಾಡಿದ್ದಾನೆ.

    ಇದಾದ ಬಳಿಕ ಸ್ನೇಹಿತರು ಪೊಲೀಸರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಕೊನೆಗೂ ಪ್ರದೀಪ್​ನನ್ನು ರಕ್ಷಣೆ ಮಾಡಿದೆ. ಬಳಿಕ ಆತನನ್ನು ಗೋಕಾಕ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಗೋಕಾಕ್​ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಕಾಲೇಜ್​ಗೆ ಚಕ್ಕರ್ ಹಾಕಿ ಪಾರ್ಕಿನ ಪೊದೆ ಮರೆಯಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ: ಸಾರ್ವಜನಿಕರ ಆಕ್ರೋಶ

    ಸಮಂತಾ-ನಾಗಚೈತನ್ಯ ಡಿವೋರ್ಸ್​ ಹಿಂದಿನ ಪ್ರಮುಖ ಕಾರಣ ಬಯಲು: ಇಬ್ಬರ ನಡುವೆ ನಡೆದಿತ್ತು ವಾಗ್ವಾದ..!

    ನಿಮ್ಮ ಮನೆಯ ವಿಳಾಸ ಕೊಡಿ ನನ್ನ ಬಿಕಿನಿ ಫೋಟೋ ಕಳುಹಿಸುವೆ! ಅನುಪಮಾ ಪರಮೇಶ್ವರನ್ ಗರಂ​

    ‘ನಾನು ಬಿಚ್ಚಲು ರೆಡಿ, ನೀವು ಶೂಟ್‌ ಮಾಡಿ’ ಎಂದು ಕುಂದ್ರಾಗೆ ಹೇಳಿದವಳೇ ಇವಳು: ನಟಿ ವಿರುದ್ಧ ಗಂಭೀರ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts